ಕೊರೊನಾ ಕಾಲದಲ್ಲಿ ಭಾರತಕ್ಕೆ ಸಹಾಯ ಮಾಡುವ ಹೆಸರಿನಲ್ಲಿ ಪಾಕಿಸ್ತಾನಿ ಸಂಸ್ಥೆಯಿಂದ ಕೋಟಿಗಟ್ಟಲೆ ರೂಪಾಯಿ ಸಂಗ್ರಹ !

ಸಂಗ್ರಹಿಸಿದ ಹಣವನ್ನು ಭಾರತದ ವಿರುದ್ಧ ಭಯೋತ್ಪಾದಕ ಚಟುವಟಿಕೆಗಳಿಗೆ ಬಳಸುವ ಸಾಧ್ಯತೆ !

ಪಾಕ್‍ನಂತೆಯೇ, ಅವರ ಸಂಸ್ಥೆ ! ಭಾರತ ಸರಕಾರವು ಜಾಗತಿಕ ಮಟ್ಟದಲ್ಲಿ ಧ್ವನಿ ಎತ್ತಬೇಕು ಮತ್ತು ಅಂತಹ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳುವ ಮೂಲಕ ಸಂಗ್ರಹಿಸಿದ ಹಣವನ್ನು ಮುಟ್ಟುಗೋಲು ಹಾಕಿಕೊಂಡು ಭಾರತಕ್ಕೆ ನೀಡಬೇಕು, ಎಂದು ಒತ್ತಾಯಿಸಬೇಕು !

ನವ ದೆಹಲಿ – ಕೊರೊನಾದ ಎರಡನೇ ಅಲೆಯ ಹಿನ್ನೆಲೆಯಲ್ಲಿ ಭಾರತದಲ್ಲಿ ಹಾಹಾಕಾರ ಎದ್ದಿರುವಾಗ ಭಾರತಕ್ಕೆ ಸಹಾಯ ಮಾಡುವ ಹೆಸರಿನಲ್ಲಿ ಅಮೆರಿಕ ಮತ್ತು ಪಾಕಿಸ್ತಾನದ ಕೆಲವು ಪಾಕಿಸ್ತಾನಿ ಸೇವಾಭಾವೀ ಸಂಸ್ಥೆಗಳು ಕೋಟ್ಯಂತರ ರೂಪಾಯಿಗಳನ್ನು ಸಂಗ್ರಹಿಸಿವೆ. ಆದರೆ ಹಣವನ್ನು ಸಹಾಯವೆಂದು ಖರ್ಚು ಮಾಡುವ ಬದಲು, ಭಾರತದ ವಿರುದ್ಧ ಭಯೋತ್ಪಾದಕ ಚಟುವಟಿಕೆಗಳಿಗೆ ಬಳಸಿಕೊಳ್ಳುವ ಆತಂಕವಿದೆ ಎಂದು ‘ಡಿಸ್‍ಇನ್ಫೋ ಲ್ಯಾಬ್’ನ ವರದಿಯಲ್ಲಿ ತಿಳಿಸಲಾಗಿದೆ.

೧. ‘ಡಿಸ್‍ಇನ್ಫೋ ಲ್ಯಾಬ್’ನ ವರದಿಯ ಪ್ರಕಾರ, ಈ ಹಣವನ್ನು ಪಾಕಿಸ್ತಾನದ ಸರಕಾರೇತರ ಸಂಸ್ಥೆಗಳು ‘ಹೆಲ್ಪ್ ಇಂಡಿಯಾ ಬ್ರೀತ್’ ಗೆ ಅಂದರೆ ‘ಭಾರತಕ್ಕೆ ಕೊರೊನಾ ಕಾಲದಲ್ಲಿ ಉಸಿರಾಡಲು ಸಹಾಯ ಮಾಡಿ’, ಎಂದು ಕರೆ ನೀಡಿ ಹಣವನ್ನು ಸಂಗ್ರಹಿಸಿತ್ತು ಭಾರತದಲ್ಲಿ ಆಮ್ಲಜನಕ ಸಿಲೆಂಡರ್ ಗಳು , ವೆಂಟಿಲೇಟರ್ ಗಳು ಮತ್ತು ಲಸಿಕೆಗಳು ಸೇರಿದಂತೆ ಇತರ ಆರೋಗ್ಯ ಸೌಲಭ್ಯಗಳನ್ನು ಒದಗಿಸಲು ಕರೆ ನೀಡಲಾಗಿತ್ತು. ಪಾಕಿಸ್ತಾನದ ಅನೇಕರು ಈ ಸೇವೆ ಸಂಸ್ಥೆಗಳ ಅಭಿಯಾನಕ್ಕೆ ಸಾಕಷ್ಟು ಬೆಂಬಲ ನೀಡಿದ್ದರು.

೨. ಈ ಸೇವಾ ಸಂಸ್ಥೆಗಳು ಪಾಕಿಸ್ತಾನದ ಸೈನ್ಯದೊಂದಿಗೆ ಉತ್ತಮ ಸಂಬಂಧವನ್ನು ಹೊಂದಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಪಾಕಿಸ್ತಾನದ ಸೈನ್ಯದ ಹೇಳಿಕೆಗನುಸಾರ, ಈ ಸಂಸ್ಥೆಯು ಕಾರ್ಯನಿರ್ವಹಿಸುತ್ತಿದೆ ಎಂದು ಶಂಕಿಸಲಾಗಿದೆ. ಆದ್ದರಿಂದ ಇದೇ ಕೋಟಿಗಟ್ಟಲೆ ರೂಪಾಯಿಗಳನ್ನು ಭಾರತದ ವಿರುದ್ಧದ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಲು ಬಳಸುವ ಸಾಧ್ಯತೆಯಿದೆ.

೩. ನಿಧಿಸಂಗ್ರಹಿಸುವ ಸಂಸ್ಥೆಯಲ್ಲಿ ‘ಇಮಾನಾ’ ಅಂದರೆ ‘ಇಸ್ಲಾಮಿಕ್ ಮೆಡಿಕಲ್ ಅಸೋಸಿಯೇಶನ್ ಆಫ್ ನಾರ್ತ್ ಅಮೆರಿಕ’ ಈ ಸಂಸ್ಥೆಯೂ ಸಹಭಾಗಿಯಾಗಿತ್ತು. ಈ ಅಭಿಯಾನದಲ್ಲಿ ಜನರು ದಾನ ಮಾಡಿದ ಹಣದ ಬಗ್ಗೆ ವಿವರವಾದ ಅಂಕಿಅಂಶಗಳನ್ನು ಸಂಸ್ಥೆಯು ನೀಡಿಲ್ಲ. ಅದೇ ರೀತಿ ‘ಈ ಹಣವನ್ನು ಎಲ್ಲಿ ಮತ್ತು ಹೇಗೆ ಖರ್ಚು ಮಾಡಲಾಗುತ್ತಿದೆ ಅಥವಾ ಖರ್ಚು ಮಾಡಲಾಗುವುದು’ ಎಂಬ ಮಾಹಿತಿಯನ್ನು ಸಹ ಇದು ಒದಗಿಸಿಲ್ಲ. ಇದು ಇತಿಹಾಸದ ಅತಿದೊಡ್ಡ ಹಗರಣ ಎಂದು ‘ಡಿಸ್‍ಇನ್ಫೋ ಲ್ಯಾಬ್’ ಹೇಳಿಕೊಂಡಿದೆ. ೧೯೬೭ ರಲ್ಲಿ ಸ್ಥಾಪನೆಯಾದ ‘ಇಮಾನಾ’ಗೆ ಎಲ್ಲಿಯೂ ಕಚೇರಿ ಇಲ್ಲ ಮತ್ತು ಸಂಸ್ಥೆಯಿಂದ ಎಲ್ಲಿಯೂ ಯಾವುದೇ ಕೆಲಸ ನಡೆಯುತ್ತಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ.