ವಿಶಾಖಪಟ್ಟಣಂ (ಆಂಧ್ರಪ್ರದೇಶ) ದಲ್ಲಿ ಪೋಷಕರು ೩೦ ಸಾವಿರ ರೂಪಾಯಿ ಮೌಲ್ಯದ ನಾಯಿಯನ್ನು ತೆಗೆಸಿಕೊಡದೇ ಇದ್ದರಿಂದ ೧೬ ವರ್ಷದ ಬಾಲಕನ ಆತ್ಮಹತ್ಯೆ

ಮಕ್ಕಳಿಗೆ ಬಾಲ್ಯದಿಂದಲೂ ಸಾಧನೆಯನ್ನು ಕಲಿಸದೇ ಇದ್ದುದರಿಂದ, ಅವರು ಇಂತಹ ಅಶಾಶ್ವತ ವಿಷಯಗಳಲ್ಲಿ ಸಿಲುಕಿ ತಮ್ಮ ಅಮೂಲ್ಯ ಜೀವನವನ್ನು ತ್ಯಜಿಸುತ್ತಿದ್ದಾರೆ. ಹಿಂದೂ ರಾಷ್ಟ್ರದಲ್ಲಿ ಪ್ರತಿಯೊಬ್ಬರಿಗೂ ಧರ್ಮಶಿಕ್ಷಣ ಮೂಲಕ ಮಾನವ ಜನ್ಮದ ಉದ್ದೇಶವನ್ನು ಕಲಿಸಿ ಅವರಿಂದ ಶಾಶ್ವತ ಆನಂದವನ್ನು ನೀಡುವ ಸಾಧನೆಯನ್ನು ಮಾಡಿಸಿಕೊಳ್ಳಲಾಗುವುದು !

ವಿಶಾಖಪಟ್ಟಣಂ (ಆಂಧ್ರಪ್ರದೇಶ) -ಷಣ್ಮುಖ ವಾಮಸಿ ಎಂಬ ೧೬ ವರ್ಷದ ಬಾಲಕನು ತನಗೆ ನಾಯಿಯನ್ನು ತೆಗೆದುಕೊಳ್ಳಲು ಪೋಷಕರು ನಿರಾಕರಿಸಿದ್ದರಿಂದ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಷಣ್ಮುಖನು ನಾಯಿಗಾಗಿ ತನ್ನ ಪೋಷಕರಿಂದ ೩೦ ಸಾವಿರ ರೂಪಾಯಿಗಾಗಿ ಬೇಡಿಕೆಯನ್ನು ಮಾಡಿದ್ದನು. ಒಂದು ಆನ್‍ಲೈನ್ ಮಾರಾಟ ವೆಬ್‍ಸೈಟ್‍ನಲ್ಲಿ ನಾಯಿಯನ್ನು ನೋಡಿದ್ದನು. ‘ಸದ್ಯ ಬೇಡ. ನಾವು ಮುಂದೆ ಯಾವಾಗಲಾದರು ತೆಗೆದುಕೊಳ್ಳೋಣ’, ಎಂದು ಅವನ ತಾಯಿಯು ಅವನಿಗೆ ಹೇಳಿದ್ದಳು; ಆದರೆ ಹತಾಶೆಯಿಂದ ಆತ ಆತ್ಮಹತ್ಯೆ ಮಾಡಿಕೊಂಡನು.