ಭಾರತದಲ್ಲಿ ‘ವಿ.ಎಲ್.ಸಿ. ಮೀಡಿಯಾ ಪ್ಲೇಯರ್, ಈ ಚೀನಾ ಕಂಪ್ಯೂಟರ ಸಿಸ್ಟಮ್ ಮೇಲೆ ನಿಷೇಧ !

ಭಾರತದಲ್ಲಿ ಚಲಚಿತ್ರ(ವಿಡಿಯೋ) ನೋಡುವುದಕ್ಕೆ ದೊಡ್ಡ ಪ್ರಮಾಣದಲ್ಲಿ ಉಪಯೋಗಿಸಲಾಗುವ ವಿ.ಎಲ್.ಸಿ ಮೀಡಿಯಾ ಪ್ಲೇಯರ್’ ಈ ಚೀನಾದ ಕಂಪ್ಯೂಟರ್ ಸಿಸ್ಟಮ್ ಮೇಲೆ ನಿಷೇಧ ಹೇರಲಾಗಿದೆ.

‘ಲಾಲ್ ಸಿಂಗ್ ಚಡ್ಡಾ’ ಚಲನಚಿತ್ರಕ್ಕೆ ವಿರೋಧವಾಗುತ್ತಿರುವುದರಿಂದ ಚಿತ್ರಮಂದಿರಗಳಲ್ಲಿ ನೀರಸ ಪ್ರತಿಕ್ರಿಯೆ

ನಟ ಅಮೀರ್ ಖಾನ್ ಅವರ ಇತ್ತೀಚೆಗೆ ಬಿಡುಗಡೆಯಾದ ‘ಲಾಲ್ ಸಿಂಗ್ ಚಡ್ಡಾ’ ಚಲನ ಚಿತ್ರಕ್ಕೆ ವಿರೋಧ ವ್ಯಕ್ತವಾಗುತ್ತಿರುವುದರಿಂದ ಈ ಚಲನಚಿತ್ರಕ್ಕೆ ದೇಶಾದ್ಯಂತ ಕಡಿಮೆ ಪ್ರತಿಕ್ರಿಯೆ ಸಿಕ್ಕಿದೆ. ಹಲವು ಪ್ರದರ್ಶನಗಳನ್ನು ರದ್ದು ಪಡಿಸಲಾಗಿದೆ. ಈ ಚಲನಚಿತ್ರದಲ್ಲಿ ನಟಿ ಕರೀನಾ ಖಾನ್ ಕೂಡ ನಟಿಸಿದ್ದಾರೆ.

ಪಂಢರಪುರ ವಿಠ್ಠಲ ಮಂದಿರದ ಸರಕಾರೀಕರಣ ರದ್ದುಗೊಳಿಸಲು ಸರ್ವೋಚ್ಚ ನ್ಯಾಯಾಲಯದಲ್ಲಿ ದೂರು ದಾಖಲಿಸುತ್ತೇನೆ!- ಡಾ. ಸುಬ್ರಹ್ಮಣ್ಯಮ್ ಸ್ವಾಮಿ, ಭಾಜಪ

ಪಂಢರಪುರದಲ್ಲಿ ಹಿಂದೂ ಭಕ್ತರಿಗೆ ತೊಂದರೆ ನೀಡಲಾಗುತ್ತಿದೆ. ಸರಕಾರವು ಹಿಂದೂಗಳ ಮಂದಿರಗಳನ್ನು ಕಬಳಿಸುತ್ತಿದೆ. ಈ ಮಂದಿರಗಳನ್ನು ಸರಕಾರದ ವಶದಿಂದ ಮುಕ್ತಗೊಳಿಸಲು ನಾನು ಸ್ವತಃ ಪಂಢರಪುರಕ್ಕೆ ಹೋಗಿ ಜನರನ್ನು ಭೇಟಿಯಾಗುತ್ತೇನೆ.

ಹಿಂದಿ ಚಲನಚಿತ್ರ ‘ಮಾಸೂಮ ಸವಾಲ’ ಪೋಸ್ಟರ್ ವಿವಾದ : ಸ್ಯಾನಿಟರಿ ಪ್ಯಾಡ್ ಮೇಲೆ ಭಗವಾನ ಶ್ರೀಕೃಷ್ಣನ ಚಿತ್ರ

ಮುಂಬರುವ ಹಿಂದಿ ಚಲನಚಿತ್ರ ‘ಮಾಸೂಮ ಸವಾಲ’ ಪೋಸ್ಟರ್ ಬಿಡುಗಡೆಗೊಂಡಿದ್ದು ಭಾರಿ ವಿವಾದಕ್ಕೆ ಒಳಗಾಗಿದೆ. ಪೋಸ್ಟರ್.ನಲ್ಲಿ ‘ಸ್ಯಾನಿಟರಿ ಪ್ಯಾಡ್’ ತೋರಿಸಲಾಗಿದ್ದು, ಅದರ ಮೇಲೆ ಚಲನಚಿತ್ರದ ನಟರ ಜೊತೆಗೆ ಭಗವಾನ ಶ್ರೀಕೃಷ್ಣನ ಚಿತ್ರ ತೋರಿಸಲಾಗಿದೆ.

ದೇವರ ದರ್ಶನಕ್ಕಾಗಿ ಭಕ್ತರಿಂದ ಹಣ ಪಡೆದು ೧೦ ಲಕ್ಷ ರೂಪಾಯಿ ಗಳಿಸಿದ ತ್ರ್ಯಂಬಕೇಶ್ವರ ದೇವಸ್ಥಾನ

ಹಣ ಪಡೆದು ಭಕ್ತರಿಗೆ ದರ್ಶನ ಪಡೆಯಲು ನೀಡುವ ಪದ್ಧತಿ ಅಶಾಸ್ತ್ರೀಯವಾಗಿದೆ. ದರ್ಶನಕ್ಕಾಗಿ ಶುಲ್ಕ ಪಡೆಯುವ ದೇವಸ್ಥಾನಗಳು ಇವು ಏನು ಮನೋರಂಜನೆಯ ಸ್ಥಳವಲ್ಲ ! ಸರಕಾರೀಕರಣ ಆಗಿರುವ ದೇವಸ್ಥಾನಗಳನ್ನು ಸರಕಾರ ಹಣಗಳಿಸುವ ಮಾಧ್ಯಮಗಳೆಂದು ನೋಡುವುದರಿಂದ ಈ ದುಃಸ್ಥಿತಿ ಬಂದಿದೆ .

ವಾರಾಣಸಿಯಂತಹ ಜಾಗ ನಾನು ಜಗತ್ತಿನಲ್ಲಿ ಬೇರೆಲ್ಲೂ ನೋಡಿಲ್ಲ ! – ಜಗತ್ಪ್ರಸಿದ್ಧ ನಟ ಬ್ರಾಡ್ ಪಿಟ್

ನಾನು ಈವರೆಗೆ ಎಷ್ಟೋ ಬಾರಿ ಜಗತ್ತನ್ನು ತಿರುಗಿ ಬಂದಿದ್ದೇನೆ, ಅದರಲ್ಲಿ ಈ ನಗರದ ಬಗ್ಗೆ ನನ್ನ ಮನಸ್ಸಿನಲ್ಲಿ ವಿಶೇಷ ಸ್ಥಾನ ಇದೆ, ಎಂದು ಜಗತ್ಪ್ರಸಿದ್ಧ ನಾಯಕ-ನಟ ಮತ್ತು ಚಲನಚಿತ್ರ ನಿರ್ಮಾಪಕ ಬ್ರಾಡ್ ಪಿಟ್ ಹೇಳಿದರು.

ಮಿಲಿಂದ ಚವಂಡಕೆಯವರು ಬರೆದ ‘ಶ್ರೀಕಾನಿಫನಾಥಮಾಹಾತ್ಮ್ಯ’ ಎಂಬ ಗ್ರಂಥಕ್ಕೆ ಭಾವಿಕರಿಂದ ಅಭೂತಪೂರ್ವ ಪ್ರತಿಕ್ರಿಯೆ !

ಪ.ಪೂ. ಶ್ರೀಕಾನಿಫನಾಥರ ಗ್ರಂಥದ ಹಾಗೆಯೇ ಉಳಿದ ೮ ನಾಥರ ಸ್ವತಂತ್ರ ಗ್ರಂಥ ನಿರ್ಮಾಣ ಮಾಡಿ ಅವುಗಳನ್ನೂ ಕೂಡ ಇದೇ ರೀತಿಯಲ್ಲಿ ಐದು ಭಾಷೆಗಳಲ್ಲಿ ಭಕ್ತರಿಗೆ ನೀಡುವ ಸಂಕಲ್ಪವನ್ನು ಶ್ರೀ. ಮಿಲಿಂದ ಚವಂಡಕೆ ಇವರು ಮಾಡಿದ್ದಾರೆ.

ನೂಪುರ ಶರ್ಮಾ ಯಾವ ತಪ್ಪು ಹೇಳಿಕೆ ನೀಡಿದ್ದರು ಎಂಬುದನ್ನು ಮೌಲ್ವಿಗಳು ಹೇಳಬೇಕು !

ಮೊಹಮ್ಮದ್ ಪೈಗಂಬರರ ಬಗ್ಗೆ ನೂಪುರ ಶರ್ಮಾ ಹೇಳಿಕೆಯಲ್ಲಿ ತಪ್ಪಿಲ್ಲ. ನೂಪುರ ಶರ್ಮಾ ತಪ್ಪು ಹೇಳಿಕೆ ನೀಡಿದ್ದಾರೆ ಎಂದು ಯಾರಿಗಾದರೂ ಅನಿಸಿದರೆ, ಯಾರಾದರೂ ಹಿರಿಯ ಮೌಲ್ವಿಗಳು ಮುಂದೆ ಬಂದು, ‘ಶರ್ಮಾ ಏನು ತಪ್ಪು ಹೇಳಿಕೆ ನೀಡಿದ್ದಾರೆ?’ ಎಂಬುದು ಹೇಳಬೇಕು

‘ಕಾಲಿ’ ಸಾಕ್ಷ್ಯಚಿತ್ರದಲ್ಲಿನ ಭಿತ್ತಿಪತ್ರದ ವಿರುದ್ಧ ಹಿಂದೂ ಜನಜಾಗೃತಿ ಸಮಿತಿಯಿಂದ ಆನ್‌ಲೈನ್ ಸಹಿ ಅಭಿಯಾನ

ಹಿಂದೂ ಜನಜಾಗೃತಿ ಸಮಿತಿಯು ‘ಕಾಲಿ’ ಸಾಕ್ಷ್ಯಚಿತ್ರದ ಭಿತ್ತಿಪತ್ರ ಮತ್ತು ಅದರ ನಿರ್ಮಾಪಕ ಲೀನಾ ಮಣಿಮೇಕಲೈ ವಿರುದ್ಧ ಕ್ರಮ ಕೈಗೊಳ್ಳುವಂತೆ ಆನ್‌ಲೈನ್ ಸಹಿ ಅಭಿಯಾನವನ್ನು ಹಮ್ಮಿಕೊಳ್ಳಲಾಗುತ್ತಿದೆ. ಇದಾದ ಬಳಿಕ ಕೇಂದ್ರ ಸರಕಾರಕ್ಕೆ ಮನವಿ ನೀಡಲಾಗುವುದು.

’ಕಾಳಿ’ ಎಂಬ ಹೆಸರಿನ ಸಾಕ್ಷ್ಯಚಿತ್ರದಲ್ಲಿ ಶ್ರೀ ಕಾಳಿಮಾತೆ ಸಿಗರೇಟ್ ಸೇದುವುದನ್ನು ತೋರಿಸಲಾಗಿದೆ !

ಭಾರತೀಯ ಚಲನಚಿತ್ರ ನಿರ್ಮಾಪಕಿ ಲೀನಾ ಮಣಿಮೇಕಲ್ ಅವರ ‘ಕಾಳಿ’ ಶೀರ್ಷಿಕೆಯ ಸಾಕ್ಷ್ಯಚಿತ್ರದ ವೀಡಿಯೋದಲ್ಲಿ ಶ್ರೀ ಮಹಾಕಾಳಿದೇವಿಯಂತೆ ವಸ್ತ್ರ ಧರಿಸಿರುವ ನಟಿಯೊಬ್ಬರು ಸಿಗರೇಟ್ ಸೇದುತ್ತಿರುವುದನ್ನು ತೋರಿಸಲಾಗಿದೆ. ಇದರ ಭಿತ್ತಿಪತ್ರವನ್ನೂ ಪ್ರಸಾರ ಮಾಡಲಾಗಿದೆ.