‘ಹಲಾಲ್ ಮುಕ್ತ ದೀಪಾವಳಿ’ಯ ಬೇಡಿಕೆಗಾಗಿ #Halal_Free_Diwali ಹೆಸರಿನ ಟ್ವಿಟರ್ ಟ್ರೆಂಡ್ !

ರಾಷ್ಟ್ರೀಯ ಮಟ್ಟದಲ್ಲಿ ಮೂರನೆಯ ಸ್ಥಾನ !

ಮುಂಬಯಿ – ಇಂದಿನ ಕಾಲದಲ್ಲಿ ಜಿಹಾದಾದ ವಿವಿಧ ಪ್ರಕಾರ ಬೆಳಕಿಗೆ ಬರುತ್ತಿದ್ದು ಅದರಲ್ಲಿನ ಒಂದು ಗಂಭೀರ ಪ್ರಕಾರವೆಂದರೆ ಈ ‘ಹಲಾಲ್ ಪ್ರಮಾಣ ಪತ್ರ’ ರೂಪದಲ್ಲಿ ಬೆಳಕಿಗೆ ಬರುತ್ತಿದೆ. ಈ ಸಂದರ್ಭದಲ್ಲಿ ಮುಂಬರುವ ದೀಪಾವಳಿ ಹಬ್ಬದ ಸಮಯದಲ್ಲಿ ಬೇಕಾಗಿರುವ ಜೀವನೋಪಯೋಗಿ ವಸ್ತುಗಳನ್ನು ‘ಹಲಾಲ್’ ಪ್ರಮಾಣ ಪತ್ರ ನೀಡಿ ಅದನ್ನು ಹಿಂದೂಗಳಿಗೆ ಖರೀದಿಸಲು ಅನಿವಾರ್ಯ ಪಡಿಸಲಾಗುತ್ತಿದೆ. ಹಲಾಲ್‌ನ ರೂಪದಲ್ಲಿರುವ ಸಮಾನಾಂತರ ಅರ್ಥ ವ್ಯವಸ್ಥೆಯನ್ನು ತೆಗೆಯುವ ಅವಶ್ಯಕತೆ ಇದೆ. ಅಕ್ಟೋಬರ್ ೧೭ ರಂದು ದೇಶಾದ್ಯಂತ ಹಿಂದೂಗಳು ಟ್ವೀಟರ ಮೂಲಕ #Halal_Free_Diwali ಹೆಸರಿನ ಟ್ರೆಂಡ್ ನಡೆಸಿ ಜಾಗೃತಿ ನಿರ್ಮಾಣ ಮಾಡಿದರು. ಈ ಟ್ರೆಂಡ್ ರಾಷ್ಟ್ರೀಯ ಮಟ್ಟದಲ್ಲಿ ಮೂರನೇಯ ಸ್ಥಾನದವರೆಗೆ ತಲುಪಿತು. ಈ ವಿಷಯದ ಬಗ್ಗೆ ೩೦ ಸಾವಿರಗಿಂತಲೂ ಹೆಚ್ಚಿನ ಟ್ವೀಟ್ ಮಾಡಲಾಯಿತು.

ಓರ್ವ ಟ್ವಿಟರ್ ಖಾತೆದಾರನು, ಹಲಾಲ ಪ್ರಮಾಣಿತ ಉತ್ಪಾದನೆಗಳ ಮೂಲಕ ದೊರೆಯುವ ಹಣದಿಂದ ಹಿಂದೂಗಳನ್ನು ಲೂಟಿ ಮಾಡಲಾಗುತ್ತಿದೆ. ಈ ಹಣದ ಉಪಯೋಗ ಇದು ರಾಷ್ಟ್ರ ವಿರೋಧಿ ಕೆಲಸಕ್ಕಾಗಿ ಮಾಡಲಾಗುತ್ತಿರುವುದು ಬಹಿರಂಗವಾಗಿದೆ. ‘ಅಜ್ಞಾನದಿಂದಾಗಿ ನಾವು ಭಯೋತ್ಪಾದನೆಗೆ ಪ್ರೋತ್ಸಾಹ ನೀಡುತ್ತಿಲ್ಲವೇ ? ಇದನ್ನು ಗಮನಿಸುವ ಅವಶ್ಯಕತೆ ಇದೆ ಎಂದು ಹೇಳಿದ್ದಾರೆ.

ಇನ್ನೊಬ್ಬರು, ದೀಪಾವಳಿ ಇದು ಹಿಂದೂಗಳ ಹಬ್ಬವಾಗಿದ್ದು ಹಲಾಲ್ ಪ್ರಮಾಣಿತ ಉತ್ಪನ್ನಗಳು ಖರೀದಿಸುವದರಿಂದ ಹಿಂದೂಗಳಿಗೆ ತಡೆಯಬೇಕು !

ಹಲಾಲ್ ವಿರೋಧದಲ್ಲಿ ಹಿಂದೂ ಜನ ಜಾಗೃತಿ ಸಮಿತಿಯ ಅಭಿಯಾನ !

ಹಿಂದೂ ಜನ ಜಾಗೃತಿ ಸಮಿತಿಯು ‘ಹಲಾಲ್ ಮುಕ್ತ ದೀಪಾವಳಿ’ ಈ ಹೆಸರಿನ ಅಭಿಯಾನ ನಡೆಸುತ್ತಿದೆ. ಹಲಾಲ್ ಅರ್ಥವ್ಯವಸ್ಥೆಯಲ್ಲಿ ಭಯನಕ ವಾಸ್ತವಿಕತೆ ಬಗ್ಗೆ ಗಮನ ನೀಡಿ ಭಾರತದಲ್ಲಿ ಧರ್ಮದ ಆಧಾರದ ಮೇಲೆ ನಡೆಸಲಾಗುತ್ತಿರುವ ‘ಹಲಾಲ ಪ್ರಮಾಣ ಪತ್ರ’ ಕೂಡಲೇ ನಿಲ್ಲಿಸಬೇಕೆಂದು ಒತ್ತಾಯಿಸಲು ಆನ್ ಲೈನ್ ಹಸ್ತಾಕ್ಷರ ಅಭಿಯಾನದಲ್ಲಿ ಸಹಭಾಗಿ ಆಗಿರಿ ಎಂದು ಸಮಿತಿಯಿಂದ ಹಿಂದುಗಳಿಗೆ ಕರೆ ನಿಡಲಾಗಿದೆ. ಸಮಿತಿಯು ಈ ವಿಷಯವಾಗಿ ‘ಹಲಾಲ್ ಜಿಹಾದ್ ?’ ಹೆಸರಿನ ಗ್ರಂಥ ಕೂಡ ಸಂಕಲನಗೊಳಿಸಿದೆ.