ಹಿಂದುದ್ವೇಷಿ ಜಾಹೀರಾತಿನ ವಿರೋಧದಲ್ಲಿ #AamirKhan_Insults_HinduDharma ಈ ಟ್ವೀಟರ್ ಟ್ರೆಂಡ್ ಮೊದಲ ಸ್ಥಾನದಲ್ಲಿ !

‘ಎಯು ಸ್ಮಾಲ್ ಫೈನಾನ್ಸ್ ಬ್ಯಾಂಕ್’ ನ ಜಾಹೀರಾತಿನಲ್ಲಿ ಹಿಂದೂ ಧರ್ಮದ ಪರಂಪರೆಯ ಅವಮಾನ !

ಮುಂಬಯಿ – ಯುಟ್ಯೂಬ್ ಮೇಲೆ ಪ್ರಸಾರಗೊಂಡ ‘ಎಯು ಸ್ಮಾಲ್ ಫೈನಾನ್ಸ್ ಬ್ಯಾಂಕ್‌ನ ಜಾಃಇರಾತಿನಲ್ಲಿ ಹಿಂದೂ ಧರ್ಮದಲ್ಲಿನ ಪರಂಪರೆಗೆ ಅವಮಾನ ಮಾಡಲಾಗಿದೆ. ಇದರಲ್ಲಿ ವಿವಾಹವಾದ ನಂತರ ಮನೆ ಅಳಿಯ ಆಗಿರುವ ವರ (ಅಮಿರ ಖಾನ್) ಮತ್ತು ವಧು (ಕೀಯಾರ ಅಡ್ವಾಣಿ) ಇವರು ಗೃಹ ಪ್ರವೇಶ ಮಾಡುವುದು ತೋರಿಸಲಾಗಿದೆ. ಆ ಸಮಯದಲ್ಲಿ ವರ ಮೊದಲನೆಯ ಬಾರಿ ಮನೆಯಲ್ಲಿ ಪ್ರವೇಶ ಮಾಡುತ್ತಾನೆ ಎಂದು ತೋರಿಸಲಾಗಿದೆ. ಈ ಜಾಹೀರಾತಿಗೆ ಹಿಂದೂಗಳು ವಿರೋಧಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಟ್ವಿಟರ್ ನಲ್ಲಿ #AamirKhan_Insults_HinduDharma ಈ ಹೆಸರಿನ ‘ಹ್ಯಾಷ್‌ಟ್ಯಾಗ್ ಟ್ರೆಂಡ್’ (ಒಂದೇ ವಿಷಯದ ಬಗ್ಗೆ ಚರ್ಚೆ ನಡೆಸುವುದು) ನಡೆಸಲಾಯಿತು. ಇದಕ್ಕೆ ಹಿಂದೂಗಳು ಹೆಚ್ಚಿನ ಪ್ರಮಾಣದಲ್ಲಿ ಪ್ರತಿಕ್ರಿಯೆ ನೀಡಿದ್ದರಿಂದ ಈ ಟ್ರೆಂಡ್ ಕೆಲವೇ ಸಮಯದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಮೊದಲನೆಯ ಸ್ಥಾನದಲ್ಲಿ ಇತ್ತು. ನಂತರ ಕೆಲವು ಗಂಟೆಯಲ್ಲಿ ಅದು ಮೊದಲ ೫ ಟ್ರೆಂಡ್‌ಗಳಲ್ಲಿ ಇತ್ತು. ಈ ಟ್ರೆಂಡ್ ನಲ್ಲಿ ೩೫ ಸಾವಿರಕ್ಕೂ ಹೆಚ್ಚಿನ ಜನರು ಟ್ವೀಟ್ ಮಾಡಿದ್ದಾರೆ. ಅದರ ಜೊತೆಗೆ ಪ್ರಸ್ತುತ ಬ್ಯಾಂಕ್ ಮತ್ತು ನಟ ಅಮೀರ್ ಖಾನ್ ಇವರು ಕ್ಷಮೆ ಕೇಳಬೇಕೆಂದು ಮತ್ತು ಈ ಜಾಹಿರಾತು ತೆಗೆಯಬೇಕು ಎಂದು ಟ್ವಿಟರ್‌ನಲ್ಲಿ ಒತ್ತಾಯಿಸಲಾಗಿದೆ.

೧. ಈ ಟ್ವೀಟ್ ಮೂಲಕ ಹಿಂದೂಗಳು ಅನೇಕ ಪ್ರಶ್ನೆಗಳನ್ನು ಕೇಳಿದ್ದಾರೆ, ಒಬ್ಬರು, ‘ಬ್ಯಾಂಕಿಗೆ ಹಿಂದೂಗಳ ಪರಂಪರೆಯಲ್ಲಿ ಹಸ್ತಕ್ಷೇಪ ಮಾಡುವ ಅಧಿಕಾರ ಯಾರು ನೀಡಿದರು ?’ ಎಂದು ಕೇಳಿದ್ದಾರೆ.

೨. ಇನ್ನೊಬ್ಬರು, ಅಮೀರ್ ಖಾನ್ ಎಂದಾದರೂ ೩ ತಲಾಖ್ ಮುಂತಾದ ಇಸ್ಲಾಮಿ ಪರಂಪರೆಯಲ್ಲಿ ಬದಲಾವಣೆ ಮಾಡುವ ಜಾಹೀರಾತಿನಲ್ಲಿ ಕೆಲಸ ಮಾಡುವ ಧೈರ್ಯ ತೋರುವರೆ ? ಎಂದು ಕೇಳಿದ್ದಾರೆ.