ಶ್ರೀ ಸಂಸ್ಥಾನ ಟ್ರಸ್ಟ್, ಶಿರ್ಡಿಯ ಮಾಜಿ ಅಧ್ಯಕ್ಷರು ಡಾ. ಸುರೇಶ ಹಾವೆರೆ ಹೇಳಿಕೆ !
ನಾಗಪುರ – ದೇಶಾದ್ಯಂತ ೩೦ ಲಕ್ಷ ದೇವಾಲಯಗಳಿವೆ. ಚಿಕ್ಕ-ದೊಡ್ಡ ಮಂದಿರಗಳು ಸೇರಿ ಒಟ್ಟು ಸುಮಾರು ೧ ಕೋಟಿ ದೇವಾಲಯಗಳಿವೆ. ಅವುಗಳಿಗೆ ನಿತ್ಯ ನೀಡಲಾಗುವ ದೇಣಿಗೆ ಕೋಟಿಗಟ್ಟಲೆಯಾಗಿದೆ; ಆದರೆ ಸುಸೂತ್ರತೆ, ಸೂಕ್ತ ನಿರ್ವಹಣೆಯ ಕೊರತೆಯಿಂದ ದೇವಸ್ಥಾನಗಳು ಮತ್ತು ಸಂಪತ್ತು ಸಮಾಜದ ಪ್ರಗತಿಗಾಗಿ ನಿರೀಕ್ಷಿಸಿದ ರೀತಿ ಬಳಕೆಯಾಗುತ್ತಿಲ್ಲ. ಇದಕ್ಕಾಗಿ ವಿಶ್ವವಿದ್ಯಾಲಯಗಳು ‘ಟೆಂಪಲ್ ಮ್ಯಾನೇಜ್ ಮೆಂಟ್ ’ ಪಠ್ಯಕ್ರಮವನ್ನು ಅಳವಡಿಸಿಕೊಳ್ಳಬೇಕು. ಇದರಿಂದ ರೂಪುಗೊಳ್ಳುವ ಹೊಸ ತಲೆಮಾರು ಈ ಕಾರ್ಯಕ್ಕೆ ಮುಂದಾದರೆ ಇದೇ ೩೦ ಲಕ್ಷ ದೇವಾಲಯಗಳು ದೇಶದಲ್ಲಿ ಕ್ರಾಂತಿಕಾರಕ ಬದಲಾವಣೆ ತರಬಹುದು ಎಂದು ಶಿರಡಿಯ ಶ್ರೀ ಸಾಯಿಬಾಬಾ ಸಂಸ್ಥಾನ ಟ್ರಸ್ಟ್ ನ ಮಾಜಿ ಅಧ್ಯಕ್ಷ ಹಾಗೂ ಪರಮಾಣು ವಿಜ್ಞಾನಿ ಡಾ. ಸುರೇಶ ಹಾವರೆ ಸಂದರ್ಶನವೊಂದರಲ್ಲಿ ಪ್ರತಿಪಾದಿಸಿದರು. ಅವರು ‘ದೇವಾಲಯ ನಿರ್ವಹಣೆ’ (Temple Management) ಎಂಬ ಕುರಿತ ಪುಸ್ತಕವನ್ನೂ ಬರೆದಿದ್ದಾರೆ.
‘मंदिरांना येणारी रोजची देणगी कोटींच्या घरात’ #temple #sureshhaware https://t.co/h2cfKmXEve
— Lokmat (@lokmat) October 23, 2022
ಅವರು ತಮ್ಮ ಮಾತನ್ನು ಮುಂದುವರೆಸುತ್ತಾ…
೧. ಈ ಪಠ್ಯಕ್ರಮವನ್ನು ದೇಶದ ವಿಶ್ವವಿದ್ಯಾನಿಲಯಗಳು ಅಂಗೀಕರಿಸಬೇಕೆಂಬುವುದಕ್ಕಾಗಿ ನಾಗಪುರ, ಅಮರಾವತಿ, ಪುಣೆ ಮತ್ತು ಮುಂಬಯಿನ ಕುಲಪತಿಗಳೊಂದಿಗೆ ಚರ್ಚೆ ನಡೆಸಲಾಗಿದೆ.
೨. ‘ಎಂ.ಬಿ.ಎ. ಇನ್ ಟೆಂಪಲ್ ಮ್ಯಾನೇಜ್ ಮೆಂಟ್’ ಈ ಪಠ್ಯಕ್ರಮವನ್ನು ಆರಂಭಿಸಿದರೆ ಈ ಕ್ಷೇತ್ರದ ವಿಷಯಗಳ ಜ್ಞಾನವಿರುವ ಪೀಳಿಗೆಯ ನಿರ್ಮಾಣವಾಗುವುದು. ಅಪಾರ ಪ್ರಮಾಣದಲ್ಲಿ ಉದ್ಯೋಗಾವಕಾಶಗಳ ಸೃಷ್ಟಿಯಾಗುವುದರೊಂದಿಗೆ ದೇವಾಲಯಗಳ ಸಂಪತ್ತು ಸಮಾಜಕ್ಕೆ ಸದ್ಬಳಕೆಯಾಗುವುದು ಮತ್ತು ದೇಶದಲ್ಲಿ ಕ್ರಾಂತಿಕಾರಕ ಬದಲಾವಣೆಯಾಗುವುದು.
೩. ದೇವಾಲಯಗಳ ಮುಖವು ಸೇವಾಭಿಮುಖವೂ, ಸಮಾಜಾಭಿಮುಖವೂ ಆಗಿರಬೇಕು. (ದೇವಸ್ಥಾನಗಳ ಮುಖವು ಧರ್ಮಾಭಿಮುಖವಾಗಿರಬೇಕೆಂದು ಹಿಂದೂಗಳಿಗನಿಸುತ್ತದೆ – ಸಂಪಾದಕರು) ಎಲ್ಲಾ ದೇವಾಲಯಗಳ ಮೂಲಕ ಸಾಮಾಜಿಕ ಚಟುವಟಿಕೆಗಳನ್ನು ನಡೆಸಲು ಉತ್ತಮ ನಿರ್ವಹಣೆಯ ಅಗತ್ಯವಿದೆ. ಇದನ್ನು ಪಠ್ಯಕ್ರಮದ ಮೂಲಕ ಪೂರ್ಣಗೊಳಿಸಬಹುದು. (ಸಾಮಾಜಿಕ ಚಟುವಟಿಕೆಗಳನ್ನು ನಡೆಸಲು ಸಾಮಾಜಿಕ ಅಥವಾ ಸೇವಾಭಾವಿ ಸಂಸ್ಥೆಗಳಿರುತ್ತವೆ; ಆದರೆ ಧರ್ಮರಕ್ಷಣೆ ಮಾಡುವವರು ಯಾರೂ ಇಲ್ಲ. ದೇವಾಲಯಗಳ ಪಠ್ಯಕ್ರಮವು ಧರ್ಮಾಧಿಷ್ಠಿತವಾಗಿರಬೇಕು ! – ಸಂಪಾದಕರು)
೪. ದೇವಸ್ಥಾನಗಳನ್ನು ಸರಿಯಾಗಿ ಬಳಸಿಕೊಂಡರೆ ‘ದೇಣಿಗೆ ಪೆಟ್ಟಿಗೆ ಏಕೆ ಬೇಕು’ ಎಂದು ಕೇಳುವವರಿಗೆ ಉತ್ತರ ಸಿಗುವುದು. (ದೇವಸ್ಥಾನದಲ್ಲಿರುವ ಕಾಣಿಕೆ ಪೆಟ್ಟಿಗೆಯನ್ನು ಧಾರ್ಮಿಕ ಕಾರ್ಯಗಳಿಗೆ ಹಾಗೂ ಧರ್ಮರಕ್ಷಣೆ ಧರ್ಮಜಾಗೃತಿಗಳಿಗೆ ಮಾತ್ರ ಬಳಸಬೇಕು ! – ಸಂಪಾದಕರು)
ಸಂಪಾದಕೀಯ ನಿಲುವು
|