ಚಲನಚಿತ್ರದಲ್ಲಿ ೩೨ ಸಾವಿರ ಹಿಂದೂ ಮತ್ತು ಕ್ರೈಸ್ತ ಯುವತಿಯರ ಮತಾಂತರಗೊಳಿಸಿರುವುದು ಮತ್ತು ಅವರನ್ನು ಭಯೋತ್ಪಾದನೆಗಾಗಿ ಬಳಸಿರುವುದರ ಬಗ್ಗೆ ಚಿತ್ರಣ
ಮುಂಬಯಿ – ‘ದಿ ಕೇರಳ ಸ್ಟೋರಿ’, ಈ ಹಿಂದಿ ಚಲನಚಿತ್ರ ಜಾಹಿರಾತು (ಟಿಝರ್) ಬಿಡುಗಡೆಗೊಳಿಸಲಾಯಿತು. ಇದರಲ್ಲಿ ಹಿಜಾಬ್(ಮುಸಲ್ಮಾನ ಮಹಿಳೆಯರು ತಲೆ ಮತ್ತು ಕತ್ತನ್ನು ಮುಚ್ಚಿಕೊಳ್ಳುವ ವಸ್ತ್ರ) ಧರಿಸಿರುವ ಒಬ್ಬ ಮಹಿಳೆಯನ್ನು ತೋರಿಸಲಾಗಿದ್ದು ಆಕೆಯ ನರ್ಸ್ ಆಗುವ ಕನಸು ಕಾಣುತ್ತಿರುತ್ತಾಳೆ; ಆದರೆ ಆಕೆಯನ್ನು ಆಕೆಯ ಮನೆಯಿಂದಲೇ ಅಪಹರಿಸಲಾಗುತ್ತದೆ. ಅದರ ನಂತರ ಆಕೆ ಅಫ್ಘಾನಿಸ್ತಾನದಲ್ಲಿನ ಕಾರಾಗೃಹದಲ್ಲಿದ್ದೇನೆ ಎಂದು ಆಕೆ ಹೇಳುತ್ತಾಳೆ. ಈ ಚಲನಚಿತ್ರದಲ್ಲಿ ಕೇರಳದಲ್ಲಿನ ೩೨ ಸಾವಿರ ಯುವತಿಯರಿಗೆ ಆಮಿಷ, ಒತ್ತಡ, ಭಯ ಮುಂತಾದವುಗಳ ಮೂಲಕ ಬಲೆಗೆ ಸಿಲುಕಿಸಿ ಜಿಹಾದ್‌ಗಾಗಿ ಇಸ್ಲಾಮಿ ದೇಶಗಳಿಗೆ ಕೊಂಡೊಯ್ಯುವುದು ತೋರಿಸಲಾಗಿದೆ. ಈ ಯುವತಿಯರು ಆ ದೇಶದಲ್ಲಿನ ಜಿಹಾದಿ ಭಯೋತ್ಪಾದಕರು ಶಾರೀರಿಕ ಸಂಬಂಧಕ್ಕಾಗಿ ಗುಲಾಮರೆಂದು ಇಟ್ಟು ಕೊಂಡಿರುವುದು ಇದರಲ್ಲಿ ತೋರಿಸಲಾಗಿದೆ. ಇದರಲ್ಲಿ ಹೆಚ್ಚಿನ ಸಂಖ್ಯೆಯ ಹಿಂದೂ ಯುವತಿಯರ ಸಮಾವೇಶ ಇರುತ್ತದೆ. ಈ ಚಲನಚಿತ್ರದ ನಿರ್ದೇಶಕ ಸುದೀಪ್ತೋ ಸೇನ್ ಆಗಿದ್ದಾರೆ. ಅವರು ಕೆಲವು ತಿಂಗಳ ಕಾಲ ಈ ವಿಷಯದ ಮೇಲೆ ಸಂಶೋಧನೆ ನಡೆಸಿದ್ದಾರೆ. ಅದರಲ್ಲಿ ಅವರಿಗೆ ವಿವಿಧ ಸಮಾಜಸೇವಿ ಸಂಘಟನೆಗಳು ಸಹಾಯ ಮಾಡಿದೆ.
ಸೌಜನ್ಯ : Sunshine Pictures
ಚಲನಚಿತ್ರ ಸತ್ಯ ಘಟನೆಯ ಆಧಾರಿತ ! – ನಿರ್ಮಾಪಕರು ವಿಪುಲ ಶಹಾಈ ಚಲನಚಿತ್ರದ ನಿರ್ಮಾಪಕರು ವಿಪುಲ ಶಹಾ ಇವರು, ಇದು ಪ್ರೇಕ್ಷಕರನ್ನು ಅಂತರ್ಮುಖಗೊಳಿಸಲು ಅನಿವಾರ್ಯಗೊಳಿಸುವುದು, ಇಂತಹ ಕಷ್ಟಕರ ಕಥೆ ಇದ್ದು, ಇದು ಒಂದು ನೈಜ, ನಿಷ್ಪಕ್ಷ ಮತ್ತು ಸತ್ಯ ಘಟನೆಯಾಗಿದೆ. ಒಂದು ವಿಚಾರಣೆಯ ಪ್ರಕಾರ ೨೦೦೯ ರಿಂದ ಕೇರಳ ರಾಜ್ಯ ಮತ್ತು ಕರ್ನಾಟಕದಲ್ಲಿನ ಮಂಗಳೂರು ನಗರದಿಂದ ಸುಮಾರು ೩೨ ಸಾವಿರ ಹಿಂದೂ ಮತ್ತು ಕ್ರೈಸ್ತ ಯುವತಿಯರನ್ನು ಮುಸಲ್ಮಾನರನ್ನಾಗಿಸಲಾಗಿದೆ. ಇದರಲ್ಲಿನ ಹೆಚ್ಚಿನ ಯುವತಿಯರನ್ನು ಸಿರಿಯಾ, ಅಫ್ಘಾನಿಸ್ತಾನ ಹಾಗೂ ಇಸ್ಲಾಮಿಕ್ ಸ್ಟೇಟ್ ಈ ಜಿಹಾದಿ ಭಯೋತ್ಪಾದಕ ಸಂಘಟನೆಯ ಪ್ರಭಾವವಿರುವ ಇತರ ದೇಶದಲ್ಲಿ ಕರೆದುಕೊಂಡು ಹೋಗಿ ಬಂಧನದಲ್ಲಿಡಲಾಗಿದೆ. ಅವರ ದುಃಖದ ಹಾಗೂ ಈ ಕಪಟ ಕಾರಸ್ಥಾನದ ಸಂಪೂರ್ಣ ಮಾಹಿತಿ ಈ ಚಲನಚಿತ್ರದಲ್ಲಿ ನೀಡಲಾಗಿದೆ ಎಂದು ಹೇಳಿದರು. |