ಹಿಂದೂಗಳು ಕಾರ್ತೀಕ ಹುಣ್ಣಿಮೆಯ ಪ್ರಯುಕ್ತ ಮನೆಮನೆಗಳಲ್ಲಿ ದೀಪ ಹಚ್ಚಲು ಕರೆ !

ಹಿಂದೂ ಜನಜಾಗೃತಿ ಸಮಿತಿಯಿಂದ ‘ಒಂದು ದೀಪ ಹಿಂದೂ ರಾಷ್ಟ್ರಕ್ಕಾಗಿ’ ಅಭಿಯಾನ !

ಮುಂಬಯಿ – ನವಂಬರ್ ೮ ರಂದು ಇರುವ ಕಾರ್ತೀಕ ಹುಣ್ಣಿಮೆ ಪ್ರಯುಕ್ತ, ಹಿಂದೂಗಳು ದೇವಸ್ಥಾನಗಳಲ್ಲಿ, ಪ್ರತಿಯೊಂದು ಮನೆ, ನದಿ ತೀರಗಳಲ್ಲಿ ದೀಪೋತ್ಸವ ಆಚರಿಸುವ ಪರಂಪರೆಯಿದೆ. ಇದೇ ಪರಂಪರೆಯಲ್ಲಿನ ಒಂದು ಭಾಗವೆಂದು ಭಾರತ ಹಿಂದೂ ರಾಷ್ಟ್ರ ಆಗಬೇಕೆಂದು, ಛತ್ರಪತಿ ಶಿವಾಜಿ ಮಹಾರಾಜ – ರಾಮರಾಜ್ಯ ಯಾವ ರೀತಿಯಲ್ಲಿ ಪ್ರತಿಯೊಬ್ಬ ಹಿಂದೂವಿಗೆ ಜೀವನ ಆದರ್ಶ ಇರಬೇಕು, ಅದಕ್ಕಾಗಿ ಕಾರ್ತೀಕ ಹುಣ್ಣಿಮೆಯ ಪ್ರಯುಕ್ತ ಹಿಂದೂಗಳು ಮನೆಮನೆಗಳಲ್ಲಿ ದೀಪ ಹಚ್ಚುವಂತೆ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಕರೆ ನೀಡಲಾಗಿದೆ. ಇದರ ಅಡಿಯಲ್ಲಿ ಹಿಂದೂಗಳು ತಮ್ಮ ಮನೆಯ ಹೊರಗೆ ದೀಪ ಪ್ರಜ್ವಲಿಸಬೇಕು ಮತ್ತು ಅದರ ಛಾಯಾಚಿತ್ರ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಬೇಕು, ಎಂದು ಕರೆ ನೀಡಲಾಗಿದೆ.

ದೀಪ ಪ್ರಜ್ವಲನೆ ಮಾಡುವಾಗ ಮಾಡಬೇಕಾದ ಪ್ರಾರ್ಥನೆ !

‘ಹೇ ಶ್ರೀಕೃಷ್ಣ, ಹಿಂದೂ ರಾಷ್ಟ್ರದ ದೀಪ ನಾವು ನಿಮ್ಮ ಚರಣಗಳಲ್ಲಿ ಅರ್ಪಿಸುತ್ತೇವೆ. ಎಲ್ಲಾ ಹಿಂದೂಗಳ ಹೃದಯದಲ್ಲಿ ‘ಹಿಂದೂ ರಾಷ್ಟ್ರ’ದ ದೀಪ ಜಾಗೃತವಾಗಿ ನಮ್ಮೆಲ್ಲರಿಗೂ ಈ ಧರ್ಮ ಕಾರ್ಯದಲ್ಲಿ ಸಹಭಾಗಿ ಆಗಲು ಸಾಧ್ಯವಾಗಲಿ ಮತ್ತು ಹಿಂದೂ ರಾಷ್ಟ್ರದ ಸ್ಥಾಪನೆ ಆದಷ್ಟು ಬೇಗನೆ ಆಗಲಿ. ನಮ್ಮೆಲ್ಲ ಜೀವಿಗಳ ಸಾಧನೆ ಆಗಲಿ. ನಿಮ್ಮ ಕೃಪಾ ದೃಷ್ಟಿ ಸತತ ಅಖಂಡವಾಗಿ ನಮ್ಮ ಮೇಲೆ ಇರಲಿ. ಇದೇ ನಿಮ್ಮ ಚರಣಗಳಲ್ಲಿ ಪ್ರಾರ್ಥನೆ.