- ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಜಿಹಾದಿ ಕಾರ್ಯಕರ್ತರ ವಿಚಾರಣೆಯ ಮಾಹಿತಿ ನ್ಯಾಯಾಲಯದಲ್ಲಿ ಪ್ರಸ್ತುತ !
- ನಿಷೇಧಿಸಿದ ಪಿ.ಎಫ್.ಐ. ನ ಹಿಂದೂ ವಿರೋಧಿ ಕಾರಸ್ಥಾನ ಬಹಿರಂಗ !
ನಾಶಿಕ – ಅಯೋಧ್ಯೆಯಲ್ಲಿ ಪ್ರಸ್ತುತ ಕಾಮಗಾರಿ ನಡೆಯುತ್ತಿರುವಾಗ ಶ್ರೀರಾಮ ಮಂದಿರ ಕೆಡವಿ ಮತ್ತೆ ಆ ಜಾಗದಲ್ಲಿ ಬಾಬರಿ ಮಸೀದಿ ಕಟ್ಟುವ ಜಿಹಾದಿ ಭಯೋತ್ಪಾದಕ ಸಂಘಟನೆ ‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ದ ಕಾರಸ್ಥಾನವಾಗಿತ್ತು. ಈ ಸಂದರ್ಭದಲ್ಲಿ ಇಸ್ಲಾಮಿ ದೇಶಗಳಲ್ಲಿನ ಸದಸ್ಯರ ಜೊತೆಗೆ ಈ ಸಂಘಟನೆಯ ಜಿಹಾದಿ ಕಾರ್ಯಕರ್ತರು ಸಂಪರ್ಕದಲ್ಲಿದ್ದರು ಎಂದು ಸರಕಾರಿ ನ್ಯಾಯವಾದಿಯು ನಾಶಿಕ ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ದಾವೆ ಮಾಡಿದ್ದಾರೆ. ರಾಷ್ಟ್ರೀಯ ತನಿಖಾ ದಳ (ಎನ್.ಐ.ಎ.ಯಿಂದ) ಸೆಪ್ಟೆಂಬರ್ ತಿಂಗಳಿನಲ್ಲಿ ಬಂದಿಸಲಾಗಿರುವ ಈ ಸಂಘಟನೆಯ ೫ ಕಾರ್ಯಕರ್ತರ ವಿಚಾರಣೆಯಲ್ಲಿ ಈ ಮಾಹಿತಿ ಬಹಿರಂಗವಾಗಿದೆ. ಸಂಪೂರ್ಣ ಭಾರತ ಇಸ್ಲಾಮಿ ರಾಷ್ಟ್ರ ಮಾಡುವುದಕ್ಕಾಗಿ ಬಾಬರಿ ಮಸೀದಿ ಮತ್ತೆ ಕಟ್ಟುವ ಉದ್ದೇಶವಾಗಿತ್ತು, ಎಂದು ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ. ಸಪ್ಟೆಂಬರ್ ತಿಂಗಳಿನಲ್ಲಿ ಸಂಪೂರ್ಣ ದೇಶಾದ್ಯಂತ ದಾಳಿ ನಡೆಸಿ ಪಿ.ಎಫ್.ಐ.ನ ನೂರಾರು ಜಿಹಾದಿ ಕಾರ್ಯಕರ್ತರನ್ನು ಬಂದಿಸಲಾಗಿತ್ತು. ಅದರ ನಂತರ ಕೇಂದ್ರ ಸರಕಾರ ಅದನ್ನು ನಿಷೇಧಿಸಿತ್ತು. ಈ ಸಂಘಟನೆಯಿಂದ ೨೦೪೭ ರಲ್ಲಿ ಭಾರತವನ್ನು ಇಸ್ಲಾಮಿ ರಾಷ್ಟ್ರ ಮಾಡುವ ಷಡ್ಯಂತ್ರ ರೂಪಿಸಿದ್ದರು, ಇದು ಬಹಿರಂಗವಾಗಿತ್ತು. ಹಾಗೂ ಪ್ರಧಾನಿ ಮೋದಿ ಅವರ ಹತ್ಯೆಯ ಪ್ರಯತ್ನ ಕೂಡ ಅವರು ಮಾಡಿದ್ದರು ಇದು ಕೂಡ ಬಹಿರಂಗವಾಗಿದೆ.
पीएफआयबाबत धक्कादायक माहिती; राम मंदिर पाडून पुन्हा बाबरी मशिद उभारण्याचा डाव#PFI #ATS #maharashtra #RamMandir @mieknathshinde @Dev_Fadnavis @maharashtra_hmo @ShivSena @NCPspeaks @INCIndia @BJP4Maharashtra @mnsadhikrut @RajThackeray #nashikhttps://t.co/rvgyTQfwBJ
— Lokshahi News (@news_lokshahi) October 18, 2022
ರಾಜ್ಯದಿಂದ ಬಂಧಿಸಲಾಗಿರುವ ಈ ೫ ಕಾರ್ಯಕರ್ತರು ಪ್ರಸ್ತುತ ಉಗ್ರ ನಿಗ್ರಹ ದಳದ ವಶದಲ್ಲಿದ್ದಾರೆ. ಈ ೫ ಕಾರ್ಯಕರ್ತರು ವಿದೇಶಕ್ಕೆ ಹೋಗಿ ಬಂದಿದ್ದರು. ಅವರ ಖಾತೆಯಲ್ಲಿ ವಿದೇಶದಿಂದ ದೊಡ್ಡ ಪ್ರಮಾಣದಲ್ಲಿ ಹಣ ಕೂಡ ಜಮೆ ಆಗಿದೆ. ಈ ಎಲ್ಲಾ ಕಾರ್ಯಕರ್ತರ ವಾಟ್ಸಾಪ್ ಗ್ರೂಪ್ ತಯಾರಿಸಲಾಗಿತ್ತು. ಇದರ ಅಡ್ಮಿನ್ ಪಾಕಿಸ್ತಾನದಲ್ಲಿ ಇರುವ ಮಾಹಿತಿ ಬಹಿರಂಗವಾಗಿದೆ.
ಸಂಪಾದಕೀಯ ನಿಲುವು
|