ಭಾರತ ಮುಂದಿನ ವರ್ಷ ಏಷ್ಯಾ ಕಪ್ ಕ್ರಿಕೆಟ್ ಸ್ಪರ್ಧೆಗೆ ಪಾಕಿಸ್ತಾನಕ್ಕೆ ಹೋಗುವುದಿಲ್ಲ !

ತಟಸ್ಥ ದೇಶದಲ್ಲಿ ಸ್ಪರ್ಧೆಯ ಆ ಯೋಜನೆ ಮಾಡಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಬೇಡಿಕೆ

ಮುಂಬೈ/ಇಸ್ಲಾಮಾಬಾದ – ಏಷ್ಯಾ ಕಪ್ ಕ್ರಿಕೆಟ್ ಸ್ಪರ್ಧೆ ಪಾಕಿಸ್ತಾನದಲ್ಲಿ ಆಡಲಾಗುವುದು. ಈ ಸ್ಪರ್ಧೆಗಾಗಿ ಭಾರತೀಯ ಸಂಘ ಪಾಕಿಸ್ತಾನಕ್ಕೆ ಹೋಗುವುದಿಲ್ಲ. ಅದರ ಬದಲು ಈ ಸ್ಪರ್ಧೆ ತಟಸ್ಥ ದೇಶದಲ್ಲಿ ಆಡಬೇಕು, ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿ.ಸಿ.ಸಿ.ಐ) ಇಂದ ಒತ್ತಾಯಿಸಲಾಗಿದೆ. ಈ ಬೇಡಿಕೆಯ ಬಗ್ಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಟೀಕಿಸಿದೆ. ಹಾಗೂ ಪಾಕಿಸ್ತಾನದ ಮಾಜಿ ಕ್ಯಾಪ್ಟನ್ ಶಾಹಿತ ಆಫ್ರಿದಿ ಮತ್ತು ಮಾಜಿ ಆಟಗಾರ ಸೈದ್ ಅನ್ವರ್ ಇವರು ಕೂಡ ಟೀಕಿಸಿದ್ದಾರೆ.

೧. ಪಾಕಿಸ್ತಾನಿ ಕ್ರಿಕೆಟ ಮಂಡಳಿ (ಪಿ.ಸಿ. ಬಿ. ಯಿಂದ) ಭಾರತದಲ್ಲಿ ೨೦೨೩ ರಲ್ಲಿ ನಡೆಯುವ ವಿಶ್ವಕಪ್ ಕ್ರಿಕೆಟ್ ಪಂದ್ಯದ ಮೇಲೆ ಬಹಿಷ್ಕಾರ ಹೇರುವ ಬೆದರಿಕೆ ಹಾಕಿದೆ. ೨೦೧೩ ರಿಂದ ಎರಡು ದೇಶಗಳ ಸರಣಿ ಆಟ ನಡೆದಿಲ್ಲ.೨೦೦೮ ರಲ್ಲಿ ಭಾರತವು ಏಷ್ಯಾ ಕಪ್ ಸ್ಪರ್ಧೆಗಾಗಿ ಪಾಕಿಸ್ತಾನಕ್ಕೆ ಕೊನೆಯ ಪ್ರವಾಸ ಮಾಡಿತ್ತು.

೨. ಶಾಹಿದ್ ಆಫ್ರಿದಿ ಇವರು ಟ್ವೀಟ್ ಮಾಡಿ ಹೇಳಿರುವುದು, ಇದರಿಂದ ಭಾರತದಲ್ಲಿ ಕ್ರಿಕೆಟ್ ಆಡಳಿತದ ಅನುಭವದ ಕೊರತೆ ಇದೆ, ಇದು ಗಮನಕ್ಕೆ ಬರುತ್ತದೆ.

೩. ಸೈದ್ ಅನ್ವರ್ ಇವರು ಟ್ವೀಟ್ ಮಾಡುತ್ತಾ ಎಲ್ಲಾ ಅಂತರಾಷ್ಟ್ರೀಯ ಸಂಘಗಳು ಮತ್ತು ಅಂತರ್ರಾಷ್ಟ್ರೀಯ ಕ್ರಿಕೆಟ್ ಆಟಗಾರರು ಪಾಕಿಸ್ತಾನ ಪ್ರವಾಸಕ್ಕೆ ಬರುತ್ತಾರೆ. ಹಾಗಾದರೆ ಬಿ.ಸಿ.ಸಿ.ಐ.ಗೆ ಏನು ಸಮಸ್ಯೆ ಇದೆ ? ಬಿಸಿಸಿಐ ಏನಾದರೂ ಏಷಿಯಾ ಕಪ್ ಸ್ಪರ್ಧೆ ತಟಸ್ಥ ಸ್ಥಳದಲ್ಲಿ ಆಡಲು ಒತ್ತಾಯಿಸಿದರೆ, ಆಗ ಮುಂದಿನ ವರ್ಷ ಭಾರತದಲ್ಲಿ ನಡೆಯುವ ವಿಶ್ವಕಪ್ ಸ್ಪರ್ಧೆಯನ್ನು ಕೂಡ ತಟಸ್ಥ ಸ್ಥಳದಲ್ಲಿ ಆಡಲಾಗಬೇಕು ಎಂದು ಹೇಳಿದ್ದಾರೆ

ಸಂಪಾದಕೀಯ ನಿಲುವು

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಅಭಿನಂದನಾರ್ಹ ನಿರ್ಣಯ ! ಭಾರತವು ಪಾಕಿಸ್ತಾನದ ಮೇಲೆ ನೈತಿಕ ಬಹಿಷ್ಕಾರ ಹಾಕುವುದು ಅವಶ್ಯಕವಾಗಿದೆ. ಅವರ ಜೊತೆ ಯಾವುದೇ ರೀತಿಯ ಸಂಬಂಧ ಇಟ್ಟುಕೊಳ್ಳುವ ಅವಶ್ಯಕತೆಯಿಲ್ಲ.