ಭಾರತದಲ್ಲಿ ‘ಡಿಜಿಟಲ್ ಕರೆನ್ಸಿ’ಯ ಆರಂಭ !

  • ನಗದು ಹಣ ಇಟ್ಟುಕೊಳ್ಳುವ ಅವಶ್ಯಕತೆ ಇಲ್ಲ !

  • ‘ಸಿಬಿಡಿಸಿ ಹೋಲಸೇಲ್’ ಈ ಪ್ರಾರ್ಥಮಿಕ ಯೋಜನೆಗಾಗಿ ೯ ಬ್ಯಾಂಕುಗಳ ಆಯ್ಕೆ !

ಮುಂಬಯಿ – ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ನವೆಂಬರ್ ೧ ರಂದು ದೇಶದ ಮೊದಲ ‘ಡಿಜಿಟಲ್ ಕರೆನ್ಸಿ’ಯ ಎಂದರೆ ಕ್ರಿಪ್ಟೋ ಕರೆನ್ಸಿ ಪ್ರಾರಂಭಿಸಿದೆ. ಈ ಪ್ರಕರಣದಲ್ಲಿ ಮಾರ್ಗಸೂಚಿ ಯೋಜನೆ (ಪೈಲೆಟ್ ಪ್ರಾಜೆಕ್ಟ್) ಎಂದು ರಿಸರ್ವ್ ಬ್ಯಾಂಕಿನಿಂದ ‘ಸಿಬಿಡಿಸಿ’ ಎಂದರೆ ‘ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ ಹೋಲಸೇಲ್’ ಜಾರಿ ಮಾಡಿದೆ. ಇದಕ್ಕಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಬಡೋದಾ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಎಚ್.ಡಿ.ಎಫ್.ಸಿ, ಐ.ಸಿ.ಐ.ಸಿ.ಐ., ಕೋಟಕ್ ಮಹೀಂದ್ರಾ, ಎಸ್ ಬ್ಯಾಂಕ್, ಐ.ಡಿ.ಎಫ್.ಸಿ. ಫಸ್ಟ್ ಮತ್ತು ಎಚ್.ಎಸ್.ಬಿ.ಸಿ. ಈ ೯ ಬ್ಯಾಂಕುಗಳನ್ನು ಆಯ್ಕೆ ಮಾಡಿಕೊಂಡಿದೆ.

೧. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇವರು ಫೆಬ್ರವರಿ ೧, ೨೦೨೨ ರಂದು ದೇಶದ ಬಜೆಟ ಮಂಡಿಸುವಾಗ ‘ಡಿಜಿಟಲ್ ಕರೆನ್ಸಿ’ಯ ಘೋಷಣೆ ಮಾಡಿದ್ದರು.

೨. ಡಿಜಿಟಲ್ ಕರೆನ್ಸಿ ೨ ರೀತಿಯದಾಗಿರುವುದು – ಸಿಬಿಡಿಸಿ ಹೋಲ್‌ಸೇಲ್ ಮತ್ತು ಸಿಬಿಡಿಸಿ ರಿಟೇಲ್. ನವೆಂಬರ್ ೧ ರಿಂದ ‘ಸಿಬಿಡಿಸಿ ಹೋಲ್‌ಸೇಲ್’ ಅನ್ನು ಪ್ರಾರಂಭ ಮಾಡಲಾಗಿದೆ. ಇದರ ಉಪಯೋಗ ಬ್ಯಾಂಕಗಳು, ದೊಡ್ಡ ‘ನಾನ್ ಬ್ಯಾಂಕಿಂಗ್ ಫೈನಾನ್ಸ್’ ಕಂಪನಿಗಳು ಮತ್ತು ಇತರ ದೊಡ್ಡ ಆರ್ಥಿಕ ವ್ಯವಹಾರ ನಡೆಸುವ ದೊಡ್ಡ ಆರ್ಥಿಕ ಸಂಸ್ಥೆಗಳು ಇವರು ಮಾಡಬಹುದು. ಅದರ ನಂತರ ‘ಸಿಬಿಡಿಸಿ ರಿಟೇಲ್’ ಜಾರಿ ಮಾಡಲಾಗುವುದು. ಅದರ ಉಪಯೋಗ ಸಾಮಾನ್ಯ ಜನರು ದಿನನಿತ್ಯದ ವ್ಯವಹಾರಕ್ಕಾಗಿ ಮಾಡಬಹುದು.

ಏನಿದು ಡಿಜಿಟಲ್ ಕರೆನ್ಸಿ ?

‘e’ ಎಂದರೆ ಡಿಜಿಟಲ್ ಕರೆನ್ಸಿಯ ಮೌಲ್ಯ ವಿದ್ಯಮಾನ ಕರೆನ್ಸಿಯ ಹಾಗೆ ಇರುವುದು. ಅದಕ್ಕೆ ‘ಫಿಸಿಕಲ್ ಕರೆನ್ಸಿ’ ಎಂದರೆ ಪ್ರತ್ಯಕ್ಷ ಹಣದ ಮಾನ್ಯತೆ ಇರುವುದು. ‘e’ ಇಂದಾಗಿ ಜೇಬಿನಲ್ಲಿ ನಗದು ಹಣ ಇಟ್ಟುಕೊಳ್ಳುವ ಅವಶ್ಯಕತೆ ಇಲ್ಲ. ಅದು ‘ಮೊಬೈಲ್ ವಾಲೆಟ್’ ಹಾಗೆ ಕೆಲಸ ಮಾಡುವುದು. ಅದು ಜಮಾ ಮಾಡುವುದಕ್ಕಾಗಿ ಬ್ಯಾಂಕ್ ಖಾತೆಯ ಅವಶ್ಯಕತೆ ಇರುವುದಿಲ್ಲ; ಆದರೂ ಕೂಡ ‘ಕ್ಯಾಶ್‌ಲೆಸ್ ಪೇಮೆಂಟ್’ ಮಾಡಲು ಸಾಧ್ಯವಾಗುವುದು. ಅಪರಿಚಿತ ವ್ಯಕ್ತಿಗೆ ಹಣ ಕಳಿಸಲು ವೈಯಕ್ತಿಕ ಬ್ಯಾಂಕಿನ ಖಾತೆ ಮುಂತಾದ ಮಾಹಿತಿ ಶೇರ್ ಮಾಡುವ ಅವಶ್ಯಕತೆ ಉಳಿಯುವುದಿಲ್ಲ. ಈ ಮಾಧ್ಯಮದಿಂದ ಸಹಜವಾಗಿ ಗೌಪ್ಯತೆ ಇರುವುದು. ಎಲ್ಲಕ್ಕಿಂತ ಮಹತ್ವ ಎಂದರೆ ನಗದು ಹಣದ ಮೇಲೆ ಅವಲಂಬನೆ ಕಡಿಮೆ ಆಗುವುದು. ನೋಟುಗಳ ಮುದ್ರಣ ಖರ್ಚ ಕೂಡ ಕಡಿಮೆಯಾಗುವುದು.

ಡಿಜಿಟಲ್ ಕರೆನ್ಸಿಯ ಲಾಭ !

1. ರಿಸರ್ವ್ ಬ್ಯಾಂಕ್‌ನಿಂದ ಜಾರಿ ಮಾಡಲಾದ ಡಿಜಿಟಲ್ ಸ್ವರೂಪದಲ್ಲಿನ ಕರೆನ್ಸಿ ಒಂದು ‘ಲೀಗಲ್ ಟೆಂಡರ್’ ಇರುವುದು.

2. ಅದು ಸಾಮಾನ್ಯ ಕರನ್ಸಿಯ ಹಾಗೆ ಇರುವುದು; ಆದರೆ ಅದು ನೋಟಿನ ಹಾಗೆ ಕಿಸೆಯಲ್ಲಿ ಇಡಲು ಸಾಧ್ಯವಿಲ್ಲ. ಅದು ಕರೆನ್ಸಿ ಹಾಗೆ ಕೆಲಸ ಮಾಡುವುದು.

3. ಅದು ನೋಟಿನ ಹಾಗೆ ಬದಲಾಯಿಸಲು ಬರುವುದು. ಆದರೆ ಅದು ಎಲೆಕ್ಟ್ರಾನಿಕ್ಸ್ ಸ್ವರೂಪದಲ್ಲಿ ನಿಮ್ಮ ಖಾತೆಯಲ್ಲಿ ಕಾಣುವುದು.

4. ಇದರ ಮೂಲಕ ನಿಮಗೆ ಎಲ್ಲಾ ಕಡೆ ಸುಲಭ ಮತ್ತು ಸುರಕ್ಷಿತವಾಗಿ ವ್ಯವಹಾರ ಮಾಡಲು ಸಾಧ್ಯವಾಗುವುದು.