ನಾಗಪುರ – ವಿದೇಶೀಯರ ಆಕ್ರಮಣದಿಂದ ಆಯುರ್ವೇದದ ಪ್ರಸಾರವನ್ನು ತಡೆಹಿಡಯಲಾಗಿತ್ತು. ಈಗ ಆಯುರ್ವೇದಕ್ಕೆ ಪುನಃ ಗೌರವ ಸಿಗುತ್ತಿದೆ. ಆಯುರ್ವೇದದ ಪ್ರಸಾರ ಮಾಡುವ ಸಮಯ ಬಂದಿದೆ. ಆಯುರ್ವೇದಕ್ಕೆ ಜಾಗತಿಕ ಗೌರವ ಸಿಗಲು ಹೆಜ್ಜೆ ಇಡುವ ಆವಶ್ಯಕತೆಯಿದೆ, ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ.ಪೂ. ಸರಸಂಘಚಾಲಕ ಡಾ. ಮೋಹನ ಭಾಗವತ ಇವರು ನವೆಂಬರ ೧೨ ರಂದು ಇಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಕೇಂದ್ರೀಯ ಆಯುಷ ಸಚಿವಾಲಯದ ಸಹಕಾರದೊಂದಿಗೆ ೩ ದಿನಗಳ ‘ಆಯುರ್ವೇದ ಹಬ್ಬ’ ಮತ್ತು ಅಂತರರಾಷ್ಟ್ರೀಯ ಪರಿಷತ್ತಿನ ಆಯೋಜನೆಯನ್ನು ಪೂರ್ವ ನಾಗಪುರದ ಸುರೇಶ ಭಟ ಸಭಾಗೃಹದಲ್ಲಿ ಮಾಡಲಾಗಿತ್ತು. ಈ ಪರಿಷತ್ತಿನ ಉದ್ಘಾಟನೆಯ ಸಂದರ್ಭದಲ್ಲಿ ಅವರು ಮಾತನಾಡುತ್ತಿದ್ದರು.
(ಸೌಜನ್ಯ : ucn news)