ಜೂನ್ ೨೧ ರಿಂದ ಕೇಂದ್ರ ಸರಕಾರವು ದೇಶದಲ್ಲಿ ೧೮ ವರ್ಷಕ್ಕಿಂತ ಮೇಲ್ಪಟ್ಟ ಎಲ್ಲ ವ್ಯಕ್ತಿಗಳಿಗೆ ಉಚಿತ ಲಸಿಕೀಕರಣ ನೀಡಲಿದೆ ! – ಪ್ರಧಾನಿ ನರೇಂದ್ರ ಮೋದಿಯಿಂದ ಘೋಷಣೆ

ಜೂನ್ ೨೧ ರಿಂದ ೧೮ ವರ್ಷಕ್ಕಿಂತ ಮೇಲ್ಪಟ್ಟ ಎಲ್ಲ ನಾಗರಿಕರಿಗೆ ಕೊರೊನಾ ವಿರುದ್ಧ ಉಚಿತವಾಗಿ ಲಸಿಕೆ ನೀಡಲಾಗುವುದು, ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಜೂನ್ ೭ ರಂದು ಸಂಜೆ ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಪ್ರಕಟಿಸಿದರು. ಅಲ್ಲದೆ, ರಾಜ್ಯ ಸರಕಾರಗಳಿಗೆ ನೀಡಲಾಗಿರುವ ಚುಚ್ಚುಮದ್ದಿನ ಶೇ. ೨೫ ರಷ್ಟು ಭಾಗವನ್ನು ಕೇಂದ್ರ ಸರಕಾರವು ತನ್ನಲ್ಲಿ ತೆಗೆದುಕೊಳ್ಳಲಿದೆ

ಖಲಿಸ್ತಾನಿ ಭಯೋತ್ಪಾದಕ ಜರ್ನಲ್ ಸಿಂಗ್ ಭಿಂದ್ರನವಾಲೆಯನ್ನು ‘ಹುತಾತ್ಮ’ ಎಂದು ಹೇಳಿದ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ರು !

ಭಾರತದ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಇವರು ತಮ್ಮ ‘ಇನ್‍ಸ್ಟಾಗ್ರಾಮ್’ ಈ ಸಾಮಾಜಿಕ ಮಾಧ್ಯಮದಲ್ಲಿ ಖಲಿಸ್ತಾನಿ ಭಯೋತ್ಪಾದಕ ಜರ್ನಲ್ ಸಿಂಗ್ ಭಿಂದ್ರನವಾಲೆಯ ಮೃತ್ಯುದಿನದ ನಿಮಿತ್ತ ಶ್ರದ್ಧಾಂಜಲಿಯನ್ನು ಅರ್ಪಿಸುತ್ತಾ ಆತನನ್ನು ‘ಹುತಾತ್ಮ’ ಎಂದು ಕರೆದಿದ್ದಾರೆ.

ಎಲ್ಲಿಯವರೆಗೆ ಜನರನ್ನು ಪ್ರಚೋದಿಸಿ ಹಿಂಸಾಚಾರ ಮಾಡುವುದಿಲ್ಲವೋ ಅಲ್ಲಿಯವರೆಗೆ ಪ್ರತಿಯೊಬ್ಬ ನಾಗರಿಕನಿಗೂ ಸರಕಾರವನ್ನು ಟೀಕಿಸುವ ಹಕ್ಕಿದೆ ! – ಸರ್ವೋಚ್ಚ ನ್ಯಾಯಾಲಯ

ಸರಕಾರ ಮತ್ತು ಅದರ ಅಧಿಕಾರಿಗಳು ತೆಗೆದುಕೊಳ್ಳುವ ನಿರ್ಧಾರಗಳನ್ನು ಟೀಕಿಸುವ ಹಕ್ಕು ಪ್ರತಿಯೊಬ್ಬ ನಾಗರಿಕರಿಗೆ ಇದೆ. ಟೀಕೆಯಿಂದ ಸರಕಾರದ ವಿರುದ್ಧ ಹಿಂಸಾಚಾರ ಮಾಡಿ ಅಶಾಂತಿಯು ಉಂಟಾಗದಿರುವ ತನಕ ಈ ಹಕ್ಕು ಸೀಮಿತವಾಗಿದೆ ಎಂದು ಸರ್ವೋಚ್ಚ ನ್ಯಾಯಾಲಯವು ಅಭಿಪ್ರಾಯಪಟ್ಟಿದೆ. ಪತ್ರಕರ್ತ ವಿನೋದ ದುವಾ ವಿರುದ್ಧ ದೇಶದ್ರೋಹದ ಆರೋಪವನ್ನು ವಜಾಗೊಳಿಸಿ ನ್ಯಾಯಾಲಯವು ಈ ಆದೇಶವನ್ನು ಜಾರಿಗೊಳಿಸಿದೆ.

ಭಾರತದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರ ಖಾತೆಯಿಂದ ತೆಗೆದುಹಾಕಲಾಗಿದ್ದ ‘ಬ್ಲೂ ಟಿಕ್’ ಅನ್ನು ಮತ್ತೆ ಸೇರಿಸಿದ ಟ್ವಿಟರ್ !

ಹೇಗೆ ವಿರೋಧದ ನಂತರ ಟ್ವಿಟರ್ ನಿಂದ ‘ಬ್ಲೂ ಟಿಕ್’ ಅನ್ನು ಮರು ಹಾಕಲಾಗುತ್ತದೆಯೋ, ಅದೇರೀತಿ ಹಿಂದೂ ಸಂಘಟನೆಗಳ ಫೇಸ್‍ಬುಕ್ ಪುಟಗಳನ್ನು ನಿರ್ಬಂಧ ಹೇರಿದ ಫೇಸ್‍ಬುಕ್‍ನ ವಿರುದ್ಧವೂ ಹಿಂದೂಗಳು ಧ್ವನಿ ಎತ್ತಬೇಕು ಮತ್ತು ಅದರ ಮೇಲೆ ಒತ್ತಡ ಹೇರುವ ಮೂಲಕ, ಆ ಪುಟಗಳನ್ನು ಮರುಪ್ರಾರಂಭಿಸಲು ಫೇಸ್‍ಬುಕ್ ಅನ್ನು ಒತ್ತಾಯಿಸಬೇಕು ! ಅಲ್ಲದೆ ಸರಕಾರವು ಇದನ್ನು ಗಂಭೀರವಾಗಿ ಪರಿಗಣಿಸಿ ಫೇಸ್‍ಬುಕ್‍ಗೆ ಪಾಠಕಲಿಸಬೇಕು !

ಟ್ವಿಟರ್ ಗೆ ಕೇಂದ್ರ ಸರಕಾರದಿಂದ ಕೊನೆಯ ಎಚ್ಚರಿಕೆ ! 

ಕೇಂದ್ರ ಸರಕಾರವು ‘ಟ್ವಿಟರ್’, ‘ಫೇಸ್‍ಬುಕ್’ ಮತ್ತು ಇತರ ವಿದೇಶಿ ಸಾಮಾಜಿಕ ಮಾಧ್ಯಮಗಳ ಮನಬಂದಂತೆ ವರ್ತಿಸುವ ಮತ್ತು ಮೊಂಡುತನದ ವಿರುದ್ಧ ಕ್ರಮ ಕೈಗೊಳ್ಳುವ ಮೂಲಕ ಅವರನ್ನು ನೂಲಿನಂತೆ ನೇರಗೊಳಿಸಬೇಕು ಎಂದು ಹಿಂದೂಗಳಿಗೆ ಮತ್ತು ಅವರ ಸಂಘಟನೆಗಳಿಗೆ ಅನಿಸುತ್ತದೆ !

ಕೊರೊನಾ ಒಂದು ರೋಗವಲ್ಲ, ಅಲ್ಲಾನ ಎದುರು ಅಳುತ್ತಾ ಕ್ಷಮೆ ಕೇಳಿದರೆ ಅದು ನಾಶವಾಗುತ್ತದೆ !

ಮುಸಲ್ಮಾನ ಮತ್ತು ಕ್ರೈಸ್ತ ನಾಯಕರು ಕೊರೊನಾದ ನಾಶಕ್ಕಾಗಿ ದೇವರಿಗೆ ಶರಣಾಗುವ ಕರೆಯನ್ನು ನೀಡುತ್ತಾರೆ; ಆದರೆ ಯಾವುದೇ ಹಿಂದೂ ನಾಯಕನು ಇಂತಹ ಮನವಿಯನ್ನು ಮಾಡುವುದಿಲ್ಲ; ಏಕೆಂದರೆ ಅವರು ತಮ್ಮನ್ನು ಪ್ರಗತಿ(ಅಧೋಗತಿ)ಪರ ಹಾಗೂ ವಿಜ್ಞಾನನಿಷ್ಠರೆಂದು ತಿಳಿದುಕೊಳ್ಳುತ್ತಾರೆ !

ದೆಹಲಿಯ ‘ಅಖಿಲ ಭಾರತೀಯ ಆಯುರ್ವೇದ ಸಂಸ್ಥಾನ’ ಆಸ್ಪತ್ರೆಯಲ್ಲಿ ಆಯುರ್ವೇದ ಔಷಧಿಯಿಂದ ಗುಣಮುಖರಾದ ೬೦೦ ರೋಗಿಗಳು !

ಅಖಿಲ ಭಾರತೀಯ ಆಯುರ್ವೇದ ಸಂಸ್ಥಾನ (ಆಲ್ ಇಂಡಿಯಾ ಇನ್ಸ್‍ಸ್ಟಿಟ್ಯೂಟ್ ಆಫ್ ಆಯುರ್ವೇದ – ಎಐಐಎ) ಈ ಆಸ್ಪತ್ರೆಯಲ್ಲಿ ಈವರೆಗೆ ೬೦೦ ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ. ವಿಶೇಷವೆಂದರೆ, ಒಟ್ಟು ರೋಗಿಗಳಲ್ಲಿ ಯಾರೂ ಸಾಯಲಿಲ್ಲ. ದಾಖಲಾದ ಶೇ. ೯೪ ರಷ್ಟು ರೋಗಿಗಳಿಗೆ ಆಯುರ್ವೇದ ಚಿಕಿತ್ಸೆಯನ್ನು ನೀಡಲಾಯಿತು.

ದೆಹಲಿ ಪುರಸಭೆಯು ಕೊರೊನಾದಿಂದ ಗುಣಮುಖರಾದವರಿಗೆ ಆಯುರ್ವೇದ ಮತ್ತು ಪಂಚಕರ್ಮದಿಂದ ಮುಂದಿನ ಚಿಕಿತ್ಸೆ ನೀಡಲಿದೆ

ಈಗ ಆಯುರ್ವೇದದ ಮಹತ್ವವು ಗಮನಕ್ಕೆ ಬರುತ್ತಿರುವುದರಿಂದ, ಇಂತಹ ಚಿಕಿತ್ಸೆಗಳು ಸರಕಾರಿ ಹಂತದಲ್ಲಿ ನಡೆಯುತ್ತಿದ್ದರೆ ಅದು ಶ್ಲಾಘನೀಯವಾಗಿದೆ! ಇಂತಹ ಪ್ರಯತ್ನಗಳು ದೇಶದೆಲ್ಲೆಡೆ ಆಗಬೇಕು !

ಕನ್ನಡ ಭಾಷೆಯ ಬಗ್ಗೆ ಅಪಶಬ್ದವನ್ನು ಬಳಸಿದ್ದಕ್ಕಾಗಿ ಗೂಗಲ್‍ನಿಂದ ಕ್ಷಮೆಯಾಚನೆ !

ವಿಶ್ವದ ಅತಿದೊಡ್ಡ ಆನ್‍ಲೈನ್ `ಸರ್ಚ್ ಎಂಜಿನ್’ ಗೂಗಲ್, ಕನ್ನಡ ಭಾಷೆಯನ್ನು ‘ಭಾರತದ ಅತ್ಯಂತ ಕೆಟ್ಟ ಭಾಷೆ’ ಎಂದು ಹೇಳಿತ್ತು. ಇದಕ್ಕೆ ಭಾರತೀಯರು ಮತ್ತು ಕರ್ನಾಟಕ ಸರಕಾರದಿಂದ ವಿರೋಧವಾದ ನಂತರ ಗೂಗಲ್ ಭಾರತೀಯರಲ್ಲಿ ಕ್ಷಮೆಯಾಚಿಸಿದೆ.

ಭಾರತದಲ್ಲಿ ‘ಪೆಟಾ’ ಸಂಸ್ಥೆಯನ್ನು ನಿಷೇಧಿಸಿ ! – ಅಮೂಲ ಸಂಸ್ಥೆಯಿಂದ ಪ್ರಧಾನಿ ಮೋದಿಗೆ ಪತ್ರದ ಮೂಲಕ ಬೇಡಿಕೆ

ಭಾರತದಲ್ಲಿ ‘ಪೆಟಾ’ (ಪೀಪಲ್ ಆಫ್ ದಿ ಎಥಿಕಲ್ ಟ್ರೀಟ್ ಮೆಂಟ್ ಆಫ್ ಅನಿಮಲ್ಸ್) ಈ ಪ್ರಾಣಿ ಸಂರಕ್ಷಕ ಸಂಘಟನೆಯ ಮೇಲೆ ನಿಷೇಧ ಹೇರುವಂತೆ ಕೋರಿ ಭಾರತದ ಹಾಲು ಉದ್ಯಮ ನಡೆಸುವ `ಅಮೂಲ್’ ಸಂಸ್ಥೆಯು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಬೇಡಿಕೆ ಮಾಡಿದ್ದಾರೆ.