ಕನಿಷ್ಠ ನ್ಯಾಯಾಲಯದಲ್ಲಿ ಮನವಿ ಮಾಡಲು ಸೂಚನೆಪಾದ್ರಿಗೆ 20 ವರ್ಷ ಕಾರಾಗೃಹವಾಸದ ಶಿಕ್ಷೆ |
20 ವರ್ಷಗಳ ಶಿಕ್ಷೆಗೆ ರಿಯಾಯತಿ ಸಿಗಬಹುದು ಎಂಬ ವಿಚಾರ ಮಾಡಿ ಪಾದ್ರಿಯು ಶೋಷಿತೆಯನ್ನು ವಿವಾಹವಾಗಲು ಪ್ರಯತ್ನಿಸುತ್ತಿರುವುದು ಇದರಿಂದ ಗಮನಕ್ಕೆ ಬರುತ್ತದೆ !
ನವ ದೆಹಲಿ – ಕೇರಳದಲ್ಲಿ ಕೊಟ್ಟಿಯೂರಿನಲ್ಲಿ 49 ವರ್ಷದ ಕ್ಯಾಥಲಿಕ್ ಪಾದ್ರಿ ರ್ಯಾಬಿನ್ ವಡಕ್ಕಮಚೆರಿಯವರು 25 ವರ್ಷದ ಯುವತಿಯ ಮೇಲೆ ಬಲಾತ್ಕಾರ ನಡೆಸಿದ್ದನು. ನಂತರ ಆ ಶೋಷಿತೆಯನ್ನು ವಿವಾಹವಾಗಲು ಅನುಮತಿ ನೀಡಬೇಕೆಂಬ ಯಾಚಿಕೆಯ ಮೇಲೆ ವಿಚಾರಣೆ ನಡೆಸಲು ಸರ್ವೋಚ್ಚ ನ್ಯಾಯಾಲಯವು ನಿರಾಕರಿಸಿದೆ. ಹಾಗೂ ಪಾದ್ರಿ ರಾಬಿನ್‍ನು ಪೀಡಿತೆಯೊಂದಿಗೆ ವಿವಾಹವಾಗಲು ಜಾಮೀನು ನೀಡಬೇಕೆಂಬ ಸಲ್ಲಿಸಿದ ಬೇಡಿಕೆಯ ಸ್ವತಂತ್ರ್ಯ ಯಾಚಿಕೆಯನ್ನು ಸಹ ತಳ್ಳಿಹಾಕಿದೆ. ಪಾದ್ರಿ ರಾಬಿನ್‍ಗೆ ಈ ಪ್ರಕರಣದಲ್ಲಿ ಕೇರಳದ ನ್ಯಾಯಾಲಯವು 20 ವರ್ಷಗಳ ಕಾರಗೃಹವಾಸದ ಶಿಕ್ಷೆ ನೀಡಿದೆ. ಪೀಡಿತೆಯು ಚಿಕ್ಕ ವಯಸ್ಸಿನವಳಾಗಿದ್ದರೂ ಅವನು ಅವಳ ಮೇಲೆ ಬಲಾತ್ಕಾರ ಮಾಡಿದ್ದನು ಹಾಗೂ ಅದರಿಂದ ಅವಳು ಒಂದು ಮಗುವಿಗೆ ಜನ್ಮ ನೀಡಿದ್ದಾಳೆ.
Sr Adv Kiran Suri: I am challenging the order so that the accused and the girl can get married so that the legitimacy can be granted to the child in the relationship.#supremecourt
— Bar & Bench (@barandbench) August 2, 2021
ಶೋಷಿತೆಯು ಕೇರಳ ಉಚ್ಚ ನ್ಯಾಯಾಲಯದಲ್ಲಿ ಪಾದ್ರಿ ರಾಬಿನ್‍ನೊಂದಿಗೆ ವಿವಾಹವಾಗಲು ಅನುಮತಿ ಕೇಳುವ ಯಾಚಿಕೆಯನ್ನು ಹೂಡಿದ್ದಳು. ನ್ಯಾಯಾಲಯವು ಅದನ್ನು ತಳ್ಳಿ ಹಾಕಿತ್ತು. ಅನಂತರ ರಾಬಿನ್ ಸರ್ವೋಚ್ಚ ನ್ಯಾಯಾಲಯದಲ್ಲಿ ವಿವಾಹಕ್ಕಾಗಿ ಅನುಮತಿ ನೀಡುವಂತೆ ಯಾಚಿಕೆ ಸಲ್ಲಿಸಿದ್ದನು. ಅದಕ್ಕೆ ನ್ಯಾಯಾಲಯವು ಉಚ್ಚ ನ್ಯಾಯಾಲಯವು ವಿಚಾರ ಪೂರ್ವಕವಾಗಿ ತೀರ್ಮಾನ ನೀಡಿರುವುದರಿಂದ ನಾವು ಅದರಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಈ ವಿಷಯವಾಗಿ ಕನಿಷ್ಠ ನ್ಯಾಯಾಲಯದಲ್ಲಿ ಮನವಿ ಮಾಡಿ ಎಂದು ಹೇಳಿದೆ.