ಕಳೆದ ಮೂರು ವರ್ಷಗಳಲ್ಲಿ ಪೊಲೀಸ್ ಕಸ್ಟಡಿಯಲ್ಲಿ 348 ಜನರ ಮೃತ್ಯು ! – ಕೇಂದ್ರ ಸರಕಾರ

ಈ ಸಾವಿನ ಹಿಂದಿನ ನಿರ್ದಿಷ್ಟವಾದ ಕಾರಣಗಳೇನು? ಒಂದು ವೇಳೆ ದೌರ್ಜನ್ಯದಿಂದ ಮೃತ್ಯುವಾಗಿದ್ದಲ್ಲಿ, ಸಂಬಂಧಪಟ್ಟವರ ಮೇಲೆ ಯಾವ ಕ್ರಮ ಕೈ ಗೊಳ್ಳಲಾಯಿತು ಎಂಬ ಮಾಹಿತಿಯನ್ನು ಸಹ ಕೇಂದ್ರ ಸರಕಾರವು ಜನತೆಗೆ ನೀಡಬೇಕು !

( ಸಾಂಕೇತಿಕ ಛಾಯಾಚಿತ್ರ )

ನವ ದೆಹಲಿ – ಕಳೆದ ಮೂರು ವರ್ಷಗಳಲ್ಲಿ ಸೆರೆಮನೆಯಲ್ಲಿ 348 ಕೈದಿಗಳು ಸಾವನ್ನಪ್ಪಿದ್ದಾರೆ. ಹಾಗೂ 1 ಸಾವಿರದ 189 ಜನರನ್ನು ಥಳಿಸಲಾಗಿದೆ, ಎಂಬ ಮಾಹಿತಿಯನ್ನು ಲೋಕಸಭೆಯಲ್ಲಿ ಕೆಂದ್ರಿಯ ಗೃಹರಾಜ್ಯ ಮಂತ್ರಿ ನಿತ್ಯಾನಂದ ರಾಯ್ ಇವರು ಒಂದು ಪ್ರಶ್ನೆಗೆ ಉತ್ತರಿಸುವಾಗ ನೀಡಿದರು.

ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ನೀಡಿದ ಮಾಹಿತಿಯ ಪ್ರಕಾರ ಪೊಲೀಸ್ ಕಸ್ಟಡಿಯಲ್ಲಿ 2018 ರಲ್ಲಿ 136, 2019 ರಲ್ಲಿ 112 ಮತ್ತು 2020 ರಲ್ಲಿ 100 ಜನರು ಸಾವನ್ನಪ್ಪಿದ್ದಾರೆ. ಹಾಗೂ 2018 ರಲ್ಲಿ 542, 2019 ರಲ್ಲಿ 411 ಮತ್ತು 2020 ರಲ್ಲಿ 236 ಜನರ ಮೇಲೆ ವಿಚಾರಣೆಯ ಸಮಯದಲ್ಲಿ ದೌರ್ಜನ್ಯ ಮಾಡಲಾಗಿತ್ತು.