ದೇಶದ 24 ವಿಶ್ವವಿದ್ಯಾಲಯಗಳು ಬೋಗಸ್ ಎಂದು ಘೋಷಣೆ

ಮಹಾರಾಷ್ಟ್ರದ ಒಂದು ವಿಶ್ವವಿದ್ಯಾಲಯದ ಸಮಾವೇಶ

ಬೋಗಸ್ (ಖೋಟಾ) ವಿಶ್ವವಿದ್ಯಾಲಯಗಳು ಸ್ಥಾಪನೆಯಾಗಿ ಕಾರ್ಯಾಚರಿಸುತ್ತಿರುವ ತನಕ ಆಡಳಿತವು ನಿದ್ರೆಗೆ ಜಾರಿತ್ತೇನು ?

ನವ ದೆಹಲಿ : ವಿದ್ಯಾರ್ಥಿಗಳು, ಪೋಷಕರು, ಸಾಮಾನ್ಯ ಜನರು ಮತ್ತು ಮಾಧ್ಯಮಗಳಿಂದ ಬಂದ ದೂರುಗಳ ಆಧಾರದ ಮೇಲೆ ದೇಶದ 24 ಸ್ವಯಂ ಘೋಷಿತ ವಿಶ್ವವಿದ್ಯಾಲಯಗಳನ್ನು ವಿದ್ಯಾಪೀಠ ಅನುದಾನ ಆಯೋಗ (‘ಯು.ಜಿ.ಸಿ.’ಯು) ಖೋಟಾ ಎಂದು ಘೋಷಿಸಿದೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ಇವರು ಈ ಘೋಷಣೆಯನ್ನು ಮಾಡಿದ್ದಾರೆ. (ದೂರುಗಳು ಬಂದನಂತರ ಅಲ್ಲ, ಸ್ವಯಂಪ್ರೇರಿತವಾಗಿ ಸತರ್ಕವಾಗಿದ್ದು ಮಾಹಿತಿ ಪಡೆದುಕೊಂಡು ಕ್ರಮ ಕೈಗೊಳ್ಳುವುದು ಅಗತ್ಯವಿದೆ ! – ಸಂಪಾದಕರು)

1. ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು 8 ಬೋಗಸ್ ವಿಶ್ವವಿದ್ಯಾಲಯಗಳಿವೆ. ಇವುಗಳಲ್ಲಿ ವಾರಣಾಸಿಯ ವಾರಣಾಸಿ ಸಂಸ್ಕೃತ ವಿಶ್ವವಿದ್ಯಾಲಯ, ಪ್ರಯಾಗರಾಜ್‍ನಲ್ಲಿನ ಮಹಿಳಾ ಗ್ರಾಮ ವಿದ್ಯಾಪೀಠ, ಅಲಿಗಡನಲ್ಲಿನ ನೇತಾಜಿ ಸುಭಾಷ್ ಚಂದ್ರ ಬೋಸ್ ಮುಕ್ತ ವಿಶ್ವವಿದ್ಯಾಲಯ, ಪ್ರತಾಪಗಡದಲ್ಲಿನ ಮಹಾರಾಣಾ ಪ್ರತಾಪ ಶಿಕ್ಷಾ ನಿಕೇತನ ವಿಶ್ವವಿದ್ಯಾಲಯ, ನೋಯ್ಡಾದ ಇಂದ್ರಪ್ರಸ್ಥ ಶಿಕ್ಷಣ ಪರಿಷದ ಸೇರಿವೆ.

2. ದೆಹಲಿಯಲ್ಲಿ 7, ಒಡಿಶಾ ಮತ್ತು ಬಂಗಾಳದಲ್ಲಿ ತಲಾ 2, ಮಹಾರಾಷ್ಟ್ರ, ಕರ್ನಾಟಕ, ಕೇರಳ ಮತ್ತು ಪುದುಚೇರಿಯಲ್ಲಿ ತಲಾ 1 ಬೋಗಸ್ ವಿಶ್ವವಿದ್ಯಾಲಯಗಳಿವೆ. ಇದು ಮಹಾರಾಷ್ಟ್ರದ ನಾಗಪುರದ ಸೇಂಟ್ ಜಾನ್ಸ್ ವಿಶ್ವವಿದ್ಯಾಲಯವನ್ನು ಒಳಗೊಂಡಿದೆ.