ಪರಿಶಿಷ್ಟ ಜಾತಿ ಮತ್ತು ಪಂಗಡದ ವ್ಯಕ್ತಿಯು ಮತಾಂತರವಾದರೆ ಆತನಿಗೆ ಅವರಿಗಾಗಿರುವ ಯೋಜನೆಯ ಲಾಭ ಸಿಗಲಾರದು ! – ಕೇಂದ್ರ ಸರಕಾರ

ನವದೆಹಲಿ – ಪರಿಶಿಷ್ಟ ಜಾತಿ ಮತ್ತು ಪಂಗಡದವರಲ್ಲಿ ಯಾರಾದರೂ ಮತಾಂತರವಾದರೆ ಅವರಿಗೆ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗಾಗಿ ಇರುವ ಯೋಜನೆಯ ಲಾಭ ಸಿಗುವುದಿಲ್ಲ; ಎಂದು ಕೇಂದ್ರ ಸರಕಾರವು ಸಂಸತ್ತಿನಲ್ಲಿ ಒಂದು ಪ್ರಶ್ನೆಗೆ ಲಿಖಿತ ಉತ್ತರದಲ್ಲಿ ಹೇಳಿದೆ. ಕೇಂದ್ರ ಸರಕಾರವು, ಪರಿಶಿಷ್ಟ ಜಾತಿ ಮತ್ತು ಪಂಗಡದವರ ಕಲ್ಯಾಣ ಮತ್ತು ವಿಕಾಸ ಮಾಡುವುದು ಸರಕಾರಿ ಯೋಜನೆಯ ಉದ್ದೇಶವಾಗಿದೆ; ಅದರ ಲಾಭವನ್ನು ಮತಾಂತರಿತರಿಗೆ ಕೊಡಲು ಸಾಧ್ಯವಿಲ್ಲ ಎಂದು ಹೇಳಿದೆ.

ಆಂಧ್ರಪ್ರದೇಶದಲ್ಲಿ ಮತಾಂತರಗೊಂಡಿರುವವರಿಗೂ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಸಿಗುವ ಎಲ್ಲ ಸೌಲಭ್ಯಗಳು ಸಿಗಲಿವೆ !

ಆಂಧ್ರಪ್ರದೇಶದಲ್ಲಿ ಕ್ರೈಸ್ತ ಮುಖ್ಯಮಂತ್ರಿ ಜಗನಮೋಹನ್ ರೆಡ್ಡಿ ಇರುವುದರಿಂದ ಇಂತಹ ಆದೇಶವನ್ನು ಹೊರಡಿಸಿ ಕಾರ್ಯಾನ್ವಿತಗೊಳಿಸಲಾಗುತ್ತದೆ. ಜಾತ್ಯತೀತ ಭಾರತಕ್ಕೆ ಇದು ಲಜ್ಜಾಸ್ಪದವಾಗಿದೆ.
ಭಾಗ್ಯನಗರ – ಆಂಧ್ರಪ್ರದೇಶ ಸರಕಾರದಿಂದ ಜುಲೈ ೩೦ ರಂದು ಜಾರಿ ಮಾಡಿರುವ ಆದೇಶಕ್ಕನುಸಾರ ರಾಜ್ಯದಲ್ಲಿ ಹಿಂದುಗಳಲ್ಲಿನ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಕೊಡುವ ಸೌಲಭ್ಯಗಳನ್ನು ಕ್ರೈಸ್ತ ಮತ್ತು ಬೌದ್ಧ ಧರ್ಮವನ್ನು ಸ್ವೀಕಾರ ಮಾಡಿದ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೂ ಕೊಡಲಾಗುವುದು.

ಆಂಧ್ರಪ್ರದೇಶ ಸರಕಾರದ ಈ ಆದೇಶವು ಕೇಂದ್ರ ಸರಕಾರದ ಯೋಜನೆಗಳಿಗೆ ಅನ್ವಯಿಸುವುದಿಲ್ಲ. ಆಂಧ್ರಪ್ರದೇಶದಲ್ಲಿ ಕ್ರೈಸ್ತ ಧರ್ಮ ಸ್ವೀಕಾರ ಮಾಡುವವರಲ್ಲಿ ಶೇ. ೮೦ ರಷ್ಟು ಜನರು ಪರಿಶಿಷ್ಟ ಜಾತಿ ಮತ್ತು ಪಂಗಡದವರಾಗಿದ್ದಾರೆ. (ಇಂತಹವರಿಗೆ ಆಮಿಷವೊಡ್ಡಿ ಅವರನ್ನು ಮತಾಂತರಿಸಿರಬಹುದು, ಎಂಬುದು ಗಮನಕ್ಕೆ ಬರುತ್ತದೆ ! ಇಂತಹ ಘಟನೆಗಳನ್ನು ತಡೆಯಲು ಕೇಂದ್ರ ಸರಕಾರವು ತಕ್ಷಣವೇ ಮತಾಂತರ ವಿರೋಧಿ ಕಾಯ್ದೆಯನ್ನು ತರುವುದು ಅಗತ್ಯವಿದೆ – ಸಂಪಾದಕರು)