ನವದೆಹಲಿ : 2030 ನೇ ವರ್ಷವನ್ನು ಎದುರು ನೋಡುತ್ತಿರುವಾಗ, ಭಾರತವು ಪ್ರಪಂಚದ ಎಲ್ಲ ಕ್ಷೇತ್ರಗಳಲ್ಲಿ ನೇತೃತ್ವ ವಹಿಸಬಹುದೆಂದು ಕಂಡುಬರುತ್ತಿದೆ, ಎಂದು ಭಾರತದ ಮಾಜಿ ಅಮೆರಿಕಾದ ರಾಯಭಾರಿ ರಿಚರ್ಡ್ ವರ್ಮಾ ಹೇಳಿದರು. ‘ವಿಶ್ವದ ಎರಡು ಅತಿದೊಡ್ಡ ಪ್ರಜಾಪ್ರಭುತ್ವಗಳು (ಭಾರತ ಮತ್ತು ಅಮೇರಿಕಾ) ಒಟ್ಟಾದರೆ ಬಹಳಷ್ಟು ಮಾಡಬಹುದು’ ಎಂದು ಅವರು ಹೇಳಿದರು. ‘ಜಿಂದಾಲ್ ಯೂನಿವರ್ಸಿಟಿ ಸ್ಕೂಲ್ ಆಫ್ ಬ್ಯಾಂಕಿಂಗ್ ಮತ್ತು ಫೈನಾನ್ಸ್’ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
The first ever Indian-American envoy to India said the modern US-India relationship was quite younghttps://t.co/LOMzc8dj8t
— India TV (@indiatvnews) August 3, 2021
ರಿಚರ್ಡ್ ವರ್ಮಾ ತಮ್ಮ ಮಾತನ್ನು ಮುಂದುವರೆಸುತ್ತಾ, ಭಾರತವು ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿದೆ, ಅತಿಹೆಚ್ಚು ಮಹಾವಿದ್ಯಾಲಯದ ಪದವೀಧರರು, ಅತಿದೊಡ್ಡ ಮಧ್ಯಮ ವರ್ಗದವರು, ಅತಿ ಹೆಚ್ಚು ಸಂಚಾರವಾಣಿ ಬಳಕೆದಾರರು ಮತ್ತು ಅತಿ ಹೆಚ್ಚು ಇಂಟರನೆಟ್ ಬಳಕೆದಾರರು ಭಾರತದಲ್ಲಿ ಇದ್ದಾರೆ. ವಿಶ್ವದ ಅತಿದೊಡ್ಡ ಸೈನ್ಯಬಲವಿರುವ ಪಟ್ಟಿಯಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ. ಭಾರತವು ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು, 60 ಕೋಟಿಯಷ್ಟು ಜನರು 25 ಕ್ಕಿಂತ ಕಡಿಮೆ ವಯಸ್ಸಿನವರು ಇಲ್ಲಿದ್ದಾರೆ. ಏಷ್ಯಾದಲ್ಲಿ ಅತ್ಯಂತ ಹೆಚ್ಚು ಯುವ ಸಿಬ್ಬಂದಿಯು ಭಾರತದಲ್ಲಿದೆ. 2050 ರವರೆಗೂ ಭಾರತಕ್ಕೆ ಅದರ ಲಾಭವಾಗುತ್ತಲೇ ಇರುವುದು.