ಮುಸಲ್ಮಾನ ಯುವಕರು ಮುಸಲ್ಮಾನ ಸಮುದಾಯದವರನ್ನೆ ವಿವಾಹವಾಗಬೇಕು ! – ಆಲ್ ಇಂಡಿಯಾ ಮುಸ್ಲೀಮ್ ಪರ್ಸನಲ್ ಲಾ ಬೋರ್ಡ್

ಮುಸಲ್ಮಾನ ಯುವಕ ಅಥವಾ ಯುವತಿಯು ಮುಸಲ್ಮಾನೇತರರೊಂದಿಗೆ ವಿವಾಹವಾಗುವುದು ಇಸ್ಲಾಂನಲ್ಲಿ ಅಮಾನ್ಯವಾಗಿದೆ !

* ಕಳೆದ ಅನೇಕ ವರ್ಷಗಳಿಂದ ದೇಶದಲ್ಲಿ ಲವ್ ಜಿಹಾದ್‍ನ ಘಟನೆಗಳು ನಡೆಯುತ್ತಿರುವಾಗ `ಆಲ್ ಇಂಡಿಯಾ ಪರ್ಸನಲ್ ಲಾ ಬೋರ್ಡ್’ ಇದನ್ನು ಆಗಲೇ ಏಕೆ ಹೇಳಲಿಲ್ಲ ? ಕೇವಲ ಹೀಗೆ ಹೇಳಿದರೆ ಮತಾಂಧರು ಇಂತಹ ಕೃತ್ಯಗಳನ್ನು ನಿಲ್ಲಿಸುವ ಸಾಧ್ಯತೆ ಇಲ್ಲ. ಹಾಗಾಗಿ ಬೋರ್ಡ್ ಇದಕ್ಕಾಗಿ ತಮ್ಮ ಧರ್ಮದಲ್ಲಿ ಚಳುವಳಿಯನ್ನು ಆರಂಭಿಸಬೇಕು ! -ಸಂಪಾದಕರು 

* ಬೋರ್ಡ್ ಈಗ ಇಂತಹ ವಿವಾಹಗಳನ್ನು ನಿಷೇಧಿಸುವ ಆದೇಶವನ್ನು ನೀಡಬೇಕು ! -ಸಂಪಾದಕರು 

* ಮುಸಲ್ಮಾನ ಯುವಕನು ಹಿಂದೂ ಹುಡುಗಿಯನ್ನು ಪ್ರೀತಿಯ ಬಲೆಯಲ್ಲಿ ಸಿಲುಕಿಸಿ ವಿವಾಹವಾದಾಗ, ಅದಕ್ಕೆ `ಪ್ರೀತಿ’ ಎಂದು ಕರೆಯುವವರು ಬೋರ್ಡ್‍ನ ಈ ಆದೇಶದ ಬಗ್ಗೆ ಏನನ್ನಾದರೂ ಹೇಳುತ್ತಾರೆಯೇ ? -ಸಂಪಾದಕರು 

( ಪ್ರಾತಿನಿಧಿಕ ಛಾಯಾಚಿತ್ರ )

ನವ ದೆಹಲಿ – ‘ಆಲ್ ಇಂಡಿಯಾ ಪರ್ಸನಲ್ ಲಾ ಬೋರ್ಡ್’ ಮುಸಲ್ಮಾನ ಯುವಕರಿಗೆ ಮುಸಲ್ಮಾನ ಸಮುದಾಯದೊಳಗೆ ವಿವಾಹ ಮಾಡಿಕೊಳ್ಳುವಂತೆ ಮನವಿ ಮಾಡಿದೆ. ಈ ನಿಟ್ಟಿನಲ್ಲಿ, ಬೋರ್ಡ್‍ನ ಪ್ರಧಾನ ಕಾರ್ಯದರ್ಶಿ ಮೌಲಾನಾ(ಮದರಸಾದಲ್ಲಿ ಇಸ್ಲಾಮ್‍ನ ಅಧಿಕೃತವಾಗಿ ಶಿಕ್ಷಣವನ್ನು ನೀಡುವ) ಖಾಲಿದ್ ಸೈಫುಲ್ಲಾ ರಹಮಾನಿಯು ಒಂದು ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿ ಮುಸಲ್ಮಾನ ಯುವಕರು, ಅವರ ಶಿಕ್ಷಕ ಮತ್ತು ಪೋಷಕರಿಗೆ ಮನವಿ ಮಾಡಿದ್ದಾರೆ. ದೇಶದಲ್ಲಿ ಲವ್ ಜಿಹಾದ್ ಘಟನೆಗಳನ್ನು ಆಧರಿಸಿ ಬೋರ್ಡ್ ಈ ಮನವಿಯನ್ನು ಮಾಡಿದೆ ಎಂದು ಹೇಳಲಾಗುತ್ತಿದೆ.
ಬೋರ್ಡ್ ಈ ಪ್ರಕಟಣೆಯಲ್ಲಿ, ಮುಸಲ್ಮಾನ ಯುವಕರು ಮತ್ತು ಯುವತಿಯರು ಮುಸಲ್ಮಾನೇತರರನ್ನು ವಿವಾಹವಾಗುವುದು ತಪ್ಪಾಗಿದೆ. ಷರಿಯತ ಪ್ರಕಾರ ಇಂತಹ ವಿವಾಹಗಳನ್ನು ಇಸ್ಲಾಂ ಅನುಮತಿಸುವುದಿಲ್ಲ. ಒಂದು ವೇಳೆ ಮುಸಲ್ಮಾನನು ಮುಸಲ್ಮಾನೇತರರನ್ನು ವಿವಾಹವಾದರೆ ಮತ್ತು ಜೀವನ ನಡೆಸಿದರೆ, ಅವನು ತನ್ನ ಜೀವನದುದ್ದಕ್ಕೂ ತಪ್ಪು ಮಾಡುತ್ತಲೇ ಇರುವನು. ಪ್ರಸ್ತುತ ಪೋಷಕರು ತಮ್ಮ ಮಕ್ಕಳಿಗೆ ಇಸ್ಲಾಂನ ಸರಿಯಾದ ಶಿಕ್ಷಣವನ್ನು ನೀಡುವುದಿಲ್ಲ. ಆದ್ದರಿಂದ ಮುಸಲ್ಮಾನ ಧರ್ಮಗುರುಗಳು, ಶಿಕ್ಷಕರು ಮತ್ತು ಪೋಷಕರು ತಮ್ಮ ಮಕ್ಕಳಿಗೆ ತಮ್ಮ ಧರ್ಮದೊಳಗೆ ವಿವಾಹವಾಗಲು ಹೇಳಬೇಕು ಕೇಳುವಂತೆ ಕರೆ ನೀಡುತ್ತೇವೆ ಎಂದು ಹೇಳಿದೆ.