ಕಳೆದ 6 ವರ್ಷಗಳಲ್ಲಿ ಕೇಂದ್ರೀಯ ಸಶಸ್ತ್ರ ಪೊಲೀಸ್ ದಳದ 680 ಸೈನಿಕರ ಆತ್ಮಹತ್ಯೆ !

ಅಪಘಾತಗಳಲ್ಲಿ 1 ಸಾವಿರ 764 ಸೈನಿಕರು ಮೃತರಾಗಿದ್ದು, ಹಾಗೂ 323 ಸೈನಿಕರು ಹುತಾತ್ಮರಾಗಿದ್ದಾರೆ!

* ಇಷ್ಟು ದೊಡ್ಡ ಸಂಖ್ಯೆಯಲ್ಲಿ ಸೈನಿಕರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ, ಎಂಬುದರ ಅರ್ಥ ಅವರ ಮನೋಧೈರ್ಯ ಹೆಚ್ಚಿಸಲು ಹಾಗೂ ಅವರ ಸಮಸ್ಯೆಗಳನ್ನು ಬಗೆಹರಿಸಲು ಸರಕಾರ ಹಾಗೂ ಆಡಳಿತ ಕಡಿಮೆ ಬೀಳುತ್ತಿದೆ, ಎಂಬುದು ಗಮನಕ್ಕೆ ಬರುತ್ತದೆ !

* ಮನೋಧೈರ್ಯ ಕಡಿಮೆಯಿರುವ ಸೈನಿಕರು ಎಂದಾದರೂ ಶತ್ರುಗಳೊಂದಿಗೆ ಹೋರಾಡಲು ಸಾಧ್ಯವೇ?

ನವದೆಹಲಿ – ವರ್ಷ 2015 ರಿಂದ 2020 ರ ಕಾಲದಲ್ಲಿ ಕೇಂದ್ರೀಯ ಸಶಸ್ತ್ರ ಪೊಲೀಸು ದಳದ (ಸಿ.ಎ.ಪಿ.ಎಫ್.ನ) 680 ಸೈನಿಕರು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಕೇಂದ್ರೀಯ ಗೃಹ ರಾಜ್ಯಮಂತ್ರಿಗಳಾದ ನಿತ್ಯಾನಂದ ರಾಯರವರು ರಾಜ್ಯಸಭೆಗೆ ಮಾಹಿತಿ ನೀಡಿದರು. ಆತ್ಮಹತ್ಯೆ ಮಾಡಿಕೊಂಡ ಸೈನಿಕರಲ್ಲಿ ಕೇಂದ್ರ ಮೀಸಲು ಪಡೆಯ (ಸಿ.ಆರ್.ಪಿ.ಆಫ್) ಹಾಗೂ ಗಡಿ ಭದ್ರತಾ ಪಡೆಯ (ಬಿ.ಎಸ್.ಎಫ್.)ನ ಸೈನಿಕರು ಒಳಗೊಂಡಿದ್ದಾರೆ. ಇದನ್ನು ಬಿಟ್ಟು ಬೇರೆ ಬೇರೆ ಅಪಘಾತಗಳಲ್ಲಿ 1 ಸಾವಿರ 764 ಸೈನಿಕರು ಮೃತಪಟ್ಟ ಮಾಹಿತಿಯನ್ನು ರಾಯರವರು ನೀಡಿದರು. ಈ ಸಮಯಮಿತಿಯಲ್ಲಿ ವಿವಿಧ ಚಕಮಕಿಯಲ್ಲಿ 323 ಸೈನಿಕರು ಹುತಾತ್ಮರಾಗಿದರು.

ಆತ್ಮಹತ್ಯೆಯ ಹಿಂದೆ ಕೌಟುಂಬಿಕ ಕಾರಣಗಳು ಪ್ರಮುಖವಾಗಿದ್ದು ಆರ್ಥಿಕ ಅಡಚಣೆ ಹಾಗೂ ಅನಾರೋಗ್ಯದಿಂದ ಬೇಸತ್ತು ಕೆಲವು ಸೈನಿಕರು ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಹೇಳಲಾಗಿದೆ.