ನಿವೃತ್ತ ಚಾರ್ಟರ್ಡ್ ಅಕೌಂಟೆಂಟ್ (ಲೆಕ್ಕ ಪರಿಶೋಧಕ) ವಿಜಯ ಗೋಖಲೆಯವರ ಪುಸ್ತಕದ ಮೂಲಕ ಆರೋಪ !
* ಭಾರತದ ಕಮ್ಯುನಿಸ್ಟ್ ಪಕ್ಷವು ಯಾವಾಗಲೂ ಚೀನಾ ಮತ್ತು ರಷ್ಯಾದ ಹಿಂಬಾಲಕವಾಗಿದೆ ಎಂಬ ಇತಿಹಾಸವೇ ಇದೆ. ಇಂತಹ ಪಕ್ಷಗಳನ್ನು ಭಾರತದಲ್ಲಿ ನಿಷೇಧಿಸಬೇಕು! ಗೋಖಲೆಯವರು ಮಾಡಿರುವ ಆರೋಪಗಳ ಬಗ್ಗೆ ತನಿಖೆಯಾಗಬೇಕು ಮತ್ತು ಅದರ ಸತ್ಯಾಸತ್ಯತೆಯನ್ನು ಬೆಳಕಿಗೆ ತರಬೇಕು! * ಈ ಮಾಹಿತಿಯನ್ನು ವಿಜಯ ಗೋಖಲೆಯವರು ಆ ಸಮಯದಲ್ಲಿಯೇ ಏಕೆ ಬಹಿರಂಗಪಡಿಸಲಿಲ್ಲ? ಈಗ ಪುಸ್ತಕವನ್ನು ಪ್ರಕಟಿಸುವ ಮೂಲಕ ಪುಸ್ತಕಕ್ಕೆ ಪ್ರತಿಕ್ರಿಯೆ ಸಿಗಬೇಕು ಎಂಬುದಕ್ಕಾಗಿ ಅವರು ಇದನ್ನು ಬಹಿರಂಗಪಡಿಸಿದ್ದಾರೆಯೇ ? |
ನವ ದೆಹಲಿ – 2007-08 ರಲ್ಲಿ ಭಾರತ ಮತ್ತು ಅಮೆರಿಕದ ನಡುವಿನ ಪರಮಾಣು ಒಪ್ಪಂದವನ್ನು ತಡೆಯಲು ಚೀನಾವು ಭಾರತದ ಕಮ್ಯುನಿಸ್ಟ್ ನಾಯಕರೊಂದಿಗೆ ಕೈ ಜೋಡಿಸಿತ್ತು. ಅದೇ ರೀತಿ ಭಾರತದ ಈ ನಾಯಕರ ಮೂಲಕ ಚೀನಾವು ಭಾರತ ದೇಶದಲ್ಲಿ ವಿರೋಧವನ್ನು ಸೃಷ್ಟಿಸಲು ಪ್ರಯತ್ನಿಸಿತ್ತು, ಎಂದು ಭಾರತದ ನಿವೃತ್ತ ವಿದೇಶಾಂಗ ಕಾರ್ಯದರ್ಶಿ ವಿಜಯ ಗೋಖಲೆಯವರು ಹೇಳಿದ್ದಾರೆ. ಗೋಖಲೆಯವರ `ದಿ ಲಾಂಗ್ ಗೇಮ್ : ಹೌ ದ ಚೈನಿಸ್ ನಿಗೊಶಿಎಟ್ ವಿಥ ಇಂಡಿಯಾ’ (ದೀರ್ಘ ಆಟ : ಚೀನಿಯರು ಭಾರತದ ಜೊತೆ ಹೇಗೆ ಸಂಧಾನ ನಡೆಸುತ್ತಾರೆ ?) ಎಂಬ ಪುಸ್ತಕ ಪ್ರಕಾಶನಗೊಂಡಿದ್ದು ಅದರಲ್ಲಿ ಅನೇಕ ಸ್ಪಷ್ಟೀಕರಣಗಳನ್ನು ನೀಡಲಾಗಿದೆ ಎಂದು ಹೇಳಲಾಗುತ್ತಿದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿ 2007-09 ರ ಅವಧಿಯಲ್ಲಿ ಗೋಖಲೆಯವರು ಹೆಚ್ಚುವರಿ ಸಚಿವರಾಗಿ ಕೆಲಸ ಮಾಡುತ್ತಿದ್ದರು. ಭಾರತ ಮತ್ತು ಅಮೇರಿಕಾದ ನಡುವಿನ ಪರಮಾಣು ಒಪ್ಪಂದದಲ್ಲಿ ಅಣ್ವಸ್ತ್ರ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಉಭಯ ದೇಶಗಳ ನಡುವೆ ಸಹಕಾರದ ಏರ್ಪಾಡು ಇತ್ತು. ಈ ಒಪ್ಪಂದದಿಂದ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧವು ವೃದ್ಧಿಯಾಗತೊಡಗಿತ್ತು.
In his exclusive interview to CNN-News18’s @rupashreenanda, CPI(M) general secretary Sitaram Yechury rubbishes claims made by former foreign secretary Vijay Gokhale in his book, ‘The Long Game’.https://t.co/FCCt1x8S6e
— News18.com (@news18dotcom) August 3, 2021
ಗೋಖಲೆಯವರು ಈ ಪುಸ್ತಕದಲ್ಲಿ ಹೇಳಿದ ವಿಷಯಗಳು :
1. ಚೀನಾಕ್ಕೆ ಭಾರತದ `ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ಮತ್ತು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾಕ್ರ್ಸ್ ವಾದಿ)’ ಎರಡರೊಂದಿಗೂ ನಿಕಟ ಸಂಬಂಧವಿತ್ತು. ಚೀನಾವು ಕಮ್ಯುನಿಸ್ಟ್ ಪಕ್ಷಗಳ ಮೂಲಕ ಪರಮಾಣು ಒಪ್ಪಂದವನ್ನು ವಿರೋಧಿಸಲು ಪ್ರಯತ್ನಿಸಿತ್ತು. ಭಾರತದ ಆಂತರಿಕ ರಾಜಕೀಯದಲ್ಲಿ ಚೀನಾದಿಂದ ಹಸ್ತಕ್ಷೇಪ ಮಾಡುವ ಮೊದಲ ಪ್ರಯತ್ನ ಇದಾಗಿತ್ತು.
2. ಗಡಿವಿವಾದ ಮತ್ತು ದ್ವಿಪಕ್ಷೀಯ ಸಂಬಂಧಗಳು ಸೇರಿದಂತೆ ಇತರ ವಿಷಯಗಳಲ್ಲಿ ಎರಡೂ ಕಮ್ಯುನಿಸ್ಟ್ ಪಕ್ಷಗಳ ನಿಲುವು ರಾಷ್ಟ್ರೀಯವಾದಿಯಾಗಿತ್ತು; ಆದರೆ ಚೀನಾಕ್ಕೆ ಭಾರತ ಮತ್ತು ಅಮೆರಿಕ ನಡುವಿನ ಪರಮಾಣು ಒಪ್ಪಂದದ ಬಗ್ಗೆ ಚಿಂತೆಯು ಕಾಡುತ್ತಿತ್ತು. ಆದ್ದರಿಂದ ಭಾರತ ಮತ್ತು ಅಮೆರಿಕ ನಡುವಿನ ಪರಮಾಣು ಒಪ್ಪಂದದಲ್ಲಿ ಚೀನಾದಿಂದ ಮೂಗು ತೂರಿಸುವ ಪ್ರಯತ್ನವಾಯಿತು.
3. ಆಗಿನ ಪ್ರಧಾನಿ ಡಾ. ಮನಮೋಹನ್ ಸಿಂಗ್ ನೇತೃತ್ವದ ಸಂಯುಕ್ತ ಪ್ರಗತಿಪರ ಜಂಟಿ ಸರಕಾರದಲ್ಲಿ ಕಮ್ಯುನಿಸ್ಟ್‍ರ ಪ್ರಭಾವ ಎಷ್ಟಿದೆ, ಈ ಬಗ್ಗೆ ಚೀನಾಗೆ ಕಲ್ಪನೆ ಇತ್ತು ಮತ್ತು ಭಾರತೀಯರು ಅಮೆರಿಕದ ಕಡೆಗೆ ವಾಲುತ್ತಾರೆ ಎಂಬ ಭಯದಿಂದ ಚೀನಾವು ಈ ಆಟವನ್ನು ಆಡಿತು. ಇದನ್ನು ಮಾಡುವಾಗ, ಚೀನಾ `ತೆರೆಮರೆಯಲ್ಲಿ ಇರುವ’ ಮುನ್ನೆಚ್ಚರಿಕೆಯನ್ನು ವಹಿಸಿತ್ತು.
4. ಚೀನಾ ಇದರ ಜೊತೆಯಲ್ಲಿ, ಕಮ್ಯುನಿಸ್ಟರಿಗೆ ಆತ್ಮೀಯವೆಂದು ಪರಿಗಣಿಸಲ್ಪಟ್ಟ ಪ್ರಸಾರಮಾಧ್ಯಮಗಳನ್ನು ಬಳಸಿತು. ಈ ಒಪ್ಪಂದದ ಬಗ್ಗೆ ಮಾಧ್ಯಮಗಳಲ್ಲಿ ವೈಚಾರಿಕ ಗೊಂದಲವಿತ್ತು. (ರಾಷ್ಟ್ರಘಾತುಕ ಮಾಧ್ಯಮವನ್ನು ಕಂಡುಹಿಡಿದು ಅದನ್ನು ದೇಶದ ಜನರ ಮುಂದೆ ಬಹಿರಂಗಪಡಿಸಬೇಕು ಮತ್ತು ಜನರು ಇಂತಹವುಗಳನ್ನು ಬಹಿಷ್ಕರಿಸಬೇಕು ! – ಸಂಪಾದಕರು)
‘ಚೀನಾದಿಂದ ನಾವು ಪರಮಾಣು ಒಪ್ಪಂದವನ್ನು ವಿರೋಧಿಸಿಲ್ಲ !’ – ಮಾಕಪನ ಪ್ರಧಾನ ಕಾರ್ಯದರ್ಶಿ ಪ್ರಕಾಶ ಕರಾತ ಇವರಿಂದ ನಿರಾಕರಣೆ.
ಭಾರತದ ವಿರುದ್ಧ ಕಮ್ಯುನಿಸ್ಟ್ ಪಕ್ಷಗಳು ಚೀನಾಕ್ಕೆ ಸಹಾಯ ಮಾಡಿದರೂ, ಅವರು ಎಂದಾದರೂ ಒಪ್ಪಿಕೊಳ್ಳುತ್ತಾರೆಯೇ ?
ವಿಜಯ ಗೋಖಲೆಯವರ ಹೇಳಿಕೆಯನ್ನು ಮಾಕಪನ ಪ್ರಧಾನ ಕಾರ್ಯದರ್ಶಿ ಪ್ರಕಾಶ ಕರಾತರು ನಿರಾಕರಿಸುತ್ತಾ, ‘ಪರಮಾಣು ಒಪ್ಪಂದವನ್ನು ವಿರೋಧಿಸುವ ಕುರಿತು ನಾವು ಚೀನಾದೊಂದಿಗೆ ಯಾವುದೇ ಚರ್ಚೆಗಳನ್ನು ನಡೆಸಿಲ್ಲ, ಈ ಒಪ್ಪಂದದಿಂದ ಭಾರತ ಮತ್ತು ಅಮೆರಿಕದ ನಡುವಿನ ಸಂಬಂಧವು ಇನ್ನಷ್ಟು ಸುದೃಢವಾಗುತ್ತಿತ್ತು; ಅದಕ್ಕಾಗಿಯೇ ನಾವು ಪರಮಾಣು ಒಪ್ಪಂದವನ್ನು ವಿರೋಧಿಸಿದೆವು ಎಂದರು. (ಭಾರತ ಮತ್ತು ಅಮೇರಿಕಾ ನಡುವಿನ ಸಂಬಂಧಗಳು ಸುಧಾರಿಸಿದರೆ, ಅದರಿಂದ ಕಮ್ಯುನಿಸ್ಟ್ ಪಕ್ಷಕ್ಕೆ ಏಕೆ ಹೊಟ್ಟೆ ಉರಿಯುತ್ತದೆ? ಭಾರತವು ಚೀನಾವನ್ನು ಬಿಟ್ಟು ಅಮೇರಿಕಾದ ಹತ್ತಿರ ಹೋಗುತ್ತಿರುವುದರಿಂದ ಹಾಗೂ ಅಮೇರಿಕಾ ಮತ್ತು ಚೀನಾ ಇವು ಶತ್ರುಗಳಾಗಿರುವುದರಿಂದ ಕಮ್ಯುನಿಸ್ಟ್ ಪಕ್ಷಗಳು ಅದನ್ನು ವಿರೋಧಿಸಿದವು ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ ! – ಸಂಪಾದಕರು) ಈ ಒಪ್ಪಂದದಿಂದ ಭಾರತಕ್ಕೆ ಯಾವುದೇ ಲಾಭವಾಗಲಿಲ್ಲ.