ದೆಹಲಿಯ ಒಂದು ಮೇಲು ಸೇತುವೆಯ ಮೇಲೆ ಕಾನೂನುಬಾಹಿರ ಮಜಾರ (ಗೋರಿ)!

ಮಜಾರ (ಗೋರಿ)ವು ಹಳೆಯದೆಂದು ಮುಸಲ್ಮಾನರ ಹೇಳಿಕೆ!

ಮೇಲು ಸೇತುವೆ ಮೇಲೆ ಮಜಾರ(ಗೋರಿ)ನ್ನು ಕಟ್ಟುವವರೆಗೆ ದೆಹಲಿ ಸರಕಾರವು ಏನು ಮಾಡುತ್ತಿತ್ತು ಹಾಗೂ ಇಂದಿಗೂ ಅಸ್ಥಿತ್ವದಲ್ಲಿರುವಾಗ ಸರಕಾರವು ಏನು ಮಾಡುತ್ತಿದೆ ಎಂಬುದನ್ನು ಜನತೆಗೆ ಗೊತ್ತಾಗಬೇಕು!

ನವದೆಹಲಿ – ಇಲ್ಲಿನ ಆಜಾದಪುರದಲ್ಲಿನ ಒಂದು ಮೇಲು ಸೇತುವೆ ಮೇಲೆ ಕಾನೂನುಬಾಹಿರವಾಗಿ ಚಿಕ್ಕ ಮಜಾರ (ಇಸ್ಲಾಮಿ ಪೀರ್ ಹಾಗೂ ಫಕೀರರ ಸಮಾಧಿ) ವನ್ನು ನಿರ್ಮಿಸಲಾಗಿರುವುದರಿಂದ ಸಾರಿಗೆಯ ಸಮಸ್ಯೆ ನಿರ್ಮಾಣವಾಗಿದೆ ಎಂಬ ವಾರ್ತೆಯನ್ನು ‘tv9 ಭಾರತವರ್ಷ’ ವಾರ್ತಾ ವಾಹಿನಿಯು ಪ್ರಸಾರ ಮಾಡಿದೆ. ‘ಇಲ್ಲಿ ಹಿಂದೂ ಮತ್ತು ಮುಸಲ್ಮಾನ ಎಂದು ನೋಡದೆ ಸಾರಿಗೆಯ ದೃಷ್ಟಿಯಿಂದ ನೋಡಬೇಕು’ ಎಂದು ವಾರ್ತೆಯಲ್ಲಿ ಹೇಳಲಾಗಿದೆ. ಮೇಲು ಸೇತುವೆಯು ಚಾಲ್ತಿಯಲ್ಲಿರುವಾಗಲೇ ಅಲ್ಲಿ ಮಜಾರವನ್ನು ಕಟ್ಟಲಾಗಿದೆ. ಮಜಾರದ ವ್ಯವಸ್ಥಾಪನೆಯು ಅದನ್ನು ದರ್ಗಾ ಎಂದು ಹೇಳಿದೆ. ಅವರು ಮುಂದುವರೆದು ಈ ದರ್ಗಾವು ಕಾನೂನುಬಾಹಿರವಲ್ಲ, ಮತ್ತು ಬಹಳ ಹಳೆಯದಾಗಿದೆ ಎಂದು ಹೇಳಿದೆ.

1. ಮುಸಲ್ಮಾನರ ಹೇಳಿಕೆಯಂತೆ 2009 ನೇ ಇಸವಿಯ ನಂತರ ಯಾವುದೇ ಕಟ್ಟಡ ಕಾಮಗಾರಿ ನಡೆದಿಲ್ಲ. ಇಲ್ಲಿ 1950ನೇ ಇಸವಿಯ ಮೊದಲೇ ಮಜಾರವನ್ನು ಕಟ್ಟಲಾಗಿತ್ತು. ಈಗ ಸೇತುವೆಯ ಕೆಳಗೆ ಪೀರ ಬಾಬಾರವರ ಗೋರಿ ಇದೆ.

2. ಇನ್ನೊಂದು ಘಟನೆಯಲ್ಲಿ ಜುಲೈ 24ರಂದು ಓರ್ವ ಮಹಿಳೆಯು ದೆಹಲಿಯಲ್ಲಿ ಒಂದು ರಸ್ತೆಯಲ್ಲಿದ್ದ ಮಜಾರ(ಗೋರಿ)ವನ್ನು ಸ್ವತಃ ಒಡೆದುಹಾಕಿದ್ದರು. ಇದರ ವಿಡಿಯೋ ಸಾಮಾಜಿಕ ಮಾಧ್ಯಮಗಳಿಂದ ಪ್ರಸಾರವಾಗಿತ್ತು. ಪೊಲೀಸರು ಆಕೆಯನ್ನು ವಿಚಾರಣೆಗಾಗಿ ಕರೆದಿದ್ದರು. ಆಕೆಗೆ ಹಿಂದೂ ಸಂಘಟನೆಗಳು ಸಮರ್ಥನೆ ನೀಡಿದ್ದವು. (ಓರ್ವ ಮಹಿಳೆಯು ಕಾನೂನುಬಾಹಿರ ಮಜಾರ(ಗೋರಿ)ವನ್ನು ಯಾರದೇ ಸಂರಕ್ಷಣೆಯನ್ನು ಪಡೆಯದೆ ತೆಗೆಯಬಹುದಾದರೆ, ಎಲ್ಲ ವ್ಯವಸ್ಥೆಯು ಕೈಯಲ್ಲಿರುವಾಗ ಪೊಲೀಸರು ಹಾಗೂ ಸರಕಾರ ಏಕೆ ಏನನ್ನೂ ಮಾಡುತ್ತಿಲ್ಲ, ಎಂದು ಜನತೆಯು ಅವರನ್ನು ವಿಚಾರಿಸಬೇಕು ! – ಸಂಪಾದಕರು)