ದೇಶದಲ್ಲಿರುವ ಪ್ರತಿಯೊಂದು ಮಸೀದಿಯ ಸಮೀಕ್ಷೆ ನಡೆಸಬೇಕು ! – ಭಾಜಪದ ಶಾಸಕ
ಭಾಜಪದ ಶಾಸಕರು ಹೀಗೆ ಮನವಿ ಮಾಡುವುದರೊಂದಿಗೆ ಕೇಂದ್ರದಲ್ಲಿ ತಮ್ಮ ಪಕ್ಷವೇ ಅಧಿಕಾರದಲ್ಲಿರುವುದರಿಂದ ಕೇಂದ್ರ ಸರಕಾರವು ಭಾರತದ ಪ್ರತಿಯೊಂದು ಮಸೀದಿಯ ಸಮೀಕ್ಷೆ ನಡೆಸುವ ಆದೇಶವನ್ನು ನೀಡುವಂತೆ ಪ್ರಯತ್ನಿಸುವುದು ಆವಶ್ಯಕವಾಗಿದೆ !
ಭಾಜಪದ ಶಾಸಕರು ಹೀಗೆ ಮನವಿ ಮಾಡುವುದರೊಂದಿಗೆ ಕೇಂದ್ರದಲ್ಲಿ ತಮ್ಮ ಪಕ್ಷವೇ ಅಧಿಕಾರದಲ್ಲಿರುವುದರಿಂದ ಕೇಂದ್ರ ಸರಕಾರವು ಭಾರತದ ಪ್ರತಿಯೊಂದು ಮಸೀದಿಯ ಸಮೀಕ್ಷೆ ನಡೆಸುವ ಆದೇಶವನ್ನು ನೀಡುವಂತೆ ಪ್ರಯತ್ನಿಸುವುದು ಆವಶ್ಯಕವಾಗಿದೆ !
ಇಲ್ಲಿನ ರಾಮದೇವ ದೇವಾಲಯದ ಎದುರಿಗೆ ಕುಳಿತುಕೊಂಡಿದ್ದ ಮುಸಲ್ಮಾನ ಯುವಕನು ದೇವಾಲಯಕ್ಕೆ ಹೋಗುವ ಯುವತಿಯನ್ನು ಚುಡಾಯಿಸಿದ ಬಗ್ಗೆ ಪ್ರಶ್ನಿಸಲು ಹೋದ ವಿಶ್ವ ಹಿಂದು ಪರಿಷತ್ತಿನ ಸ್ಥಳೀಯ ಮುಖಂಡ ಸತವೀರ ಸಹಾರಣರವರ ಮೇಲೆ ಕಬ್ಬಿಣದ ಸಲಾಕೆಯಿಂದ ದಾಳಿ ಮಾಡಿದ್ದರಿಂದ ಸತವೀರರವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಹನುಮಾನ ದೇವಸ್ಥಾನದ ಮೇಲಿನ ಧ್ವನಿವರ್ಧಕ ತೆರವುಗೊಳಿಸುವುದಕ್ಕೆ ವಿಶ್ವಹಿಂದೂ ಪರಿಷತ್ತಿನ ಕಾರ್ಯಕರ್ತ ಮಹೇಂದ್ರ ಮಾಲಿ ಇವರಿಗೆ ಕೊಲೆ ಬೆದರಿಕೆ ನೀಡಿರುವ ಪ್ರಕರಣದಲ್ಲಿ ಪೊಲೀಸರು ಸಿರಾಜ್ ಅಲಿಯಾಸ್ ಸಿರೋ ಡಾನ್ ಎಂಬವನನ್ನು ಬಂಧಿಸಿದ್ದಾರೆ.
ಇಲ್ಲಿನ ಹರಿಹರಗಂಜ್ ಮೊಹಲ್ಲಾದ ಚುನಾವಾಲಿ ಗಲ್ಲಿಯಲ್ಲಿರುವ ಚರ್ಚ್‌ನಲ್ಲಿ ಪ್ರಾರ್ಥನೆಯ ಹೆಸರಿನಲ್ಲಿ ಬಡ ಹಿಂದೂಗಳನ್ನು ಆಸೆ ತೋರಿಸಿ ಅವರನ್ನು ಮತಾಂತರಿಸಲು ಪ್ರಯತ್ನಿಸುತ್ತಿದ್ದ ಮಾಹಿತಿ ಸಿಕ್ಕಿದನಂತರ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಅಲ್ಲಿಗೆ ತಲುಪಿದರು.
ಇಲ್ಲಿನ ಕುತುಬಮಿನಾರಿನ ಪರಿಸರದಲ್ಲಿರುವ ಶ್ರೀ ಗಣೇಶನ ಮೂರ್ತಿಯನ್ನು ಸ್ಥಳಾಂತರಿಸಿ ಅಲ್ಲಿ ಸಂಗ್ರಹಾಲಯವನ್ನು ಇಡುವ ಬಗ್ಗೆ ಮನವಿ ಮಾಡಿರುವ ಹಿನ್ನೆಲೆಯಲ್ಲಿ ವಿಶ್ವ ಹಿಂದೂ ಪರಿಷತ್ತಿನ ಕೆಲವು ಪದಾಧಿಕಾರಿಗಳು ಈ ಸ್ಥಳಕ್ಕೆ ಭೇಟಿ ನೀಡಿದರು.
‘ಕಪೋದರಾ ಕ್ರಾಸಿಂಗ್’ ಹತ್ತಿರ ಇರುವ ಒಂದು ಸಾರ್ವಜನಿಕ ಶೌಚಾಲಯದ ಗೋಡೆಯ ಮೇಲೆ ಶ್ರೀ ಗಣೇಶನ ಚಿತ್ರ ಬಿಡಿಸಲಾಗಿತ್ತು. ಅದಕ್ಕೆ ಹಿಂದುತ್ವನಿಷ್ಠ ಸಂಘಟನೆಯು ವಿರೋಧ ವ್ಯಕ್ತಪಡಿಸಿದನಂತರ ಅದರ ಮೇಲೆ ಬಿಳಿಯ ಬಣ್ಣ ಹಚ್ಚಿ ಅದನ್ನು ಅಳಿಸಲಾಯಿತು.
ಫುಲಬಡಿಯಾ ಗ್ರಾಮದ ಕಾಲಿಬಾಡಿ ದುರ್ಗಾದೇವಿ ದೇವಾಲಯದಲ್ಲಿ ಅಪರಿಚಿತರಿಂದ ಗೋಮಾಂಸ ಎಸೆದ ಘಟನೆ ಬೆಳಕಿಗೆ ಬಂದಿದೆ. ಈ ಬಗ್ಗೆ ವಿಶ್ವ ಹಿಂದು ಪರಿಷತ್ ಪೊಲೀಸರಿಗೆ ದೂರು ನೀಡುತ್ತಾ ‘ಆರೋಪಿಗಳನ್ನು ತಕ್ಷಣ ಬಂಧಿಸದೆ ಹೋದರೆ, ನಾವು ಆಂದೋಲನ ನಡೆಸುವೆವು’, ಎಂದು ಎಚ್ಚರಿಕೆ ನೀಡಿದರು.
ಮತಾಂತರ ಮಾಡಿರುವ ಆರೋಪದ ಮೇಲೆ ೩ ಕ್ರೈಸ್ತರನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರು ಆರೋಪಿಗಳನ್ನು ಬಂಧಿಸುವ ವೇಳೆ ಅಲ್ಲಿ ವಿಎಚ್‌ಪಿ ಕಾಂiಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಇಲ್ಲಿನ ಚರ್ಚ್ ಪರಿಸರದಲ್ಲಿ ಹಿಂದೂ ಕುಟುಂಬವನ್ನು ಮತಾಂತರವಾಗಲು ಒತ್ತಡ ಹೇರಲಾಗಿತ್ತು,
ವಿಶ್ವಹಿಂದೂ ಪರಿಷತ್ತಿನ ಕಾರ್ಯಕರ್ತರು ಹಿಜಾಬ್‌ನ ವಿರೋಧದಲ್ಲಿ ಇಲ್ಲಿಯ ತಾಜ್ ಮಹಲ್‌ನಲ್ಲಿ ಹನುಮಾನ್ ಚಾಲೀಸಾ ಪಠಣೆ ಮಾಡುವ ಪ್ರಯತ್ನ ಮಾಡಿದರು. ಪೊಲೀಸರು ಎಲ್ಲಾ ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ. ಅವರನ್ನು ಹರಿಪರ್ವತ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು.
ಯಾವುದೇ ದೂರಗಳಿಲ್ಲದಿದ್ದರೂ ಫಲಕ ತೆಗೆಯಲು `ತತ್ಪರತೆ’ ತೋರಿಸುವ ಪೊಲೀಸರು ಹಿಂದೂಗಳು ದೂರು ನೀಡಿದಾಗ ಕ್ರಮಕೈಗೊಳ್ಳುವುದು ತಪ್ಪಿಸಿಕೊಳ್ಳುತ್ತಾರೆ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ ! ಉತ್ತರಪ್ರದೇಶದಲ್ಲಿ ಭಾಜಪದ ಸರಕಾರ ಇರುವಾಗ ಈ ರೀತಿ ನಡೆಯುವುದು ಹಿಂದುಗಳಿಗೆ ಅಪೇಕ್ಷಿತವಿಲ್ಲ !