ಗಂಗಾನದಿಯ ದಡದಲ್ಲಿ ಅಹಿಂದೂಗಳಿಗೆ ಪ್ರವೇಶವಿಲ್ಲ ಎಂಬ ಸೂಚನೆ ನೀಡುವ ಫಲಕಗಳನ್ನು ದೂರು ಇಲ್ಲದಿದ್ದರೂ ಪೊಲೀಸರು ತೆರವುಗೊಳಿಸಿದರು !

ಯಾವುದೇ ದೂರಗಳಿಲ್ಲದಿದ್ದರೂ ಫಲಕ ತೆಗೆಯಲು `ತತ್ಪರತೆ’ ತೋರಿಸುವ ಪೊಲೀಸರು ಹಿಂದೂಗಳು ದೂರು ನೀಡಿದಾಗ ಕ್ರಮಕೈಗೊಳ್ಳುವುದು ತಪ್ಪಿಸಿಕೊಳ್ಳುತ್ತಾರೆ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ ! ಉತ್ತರಪ್ರದೇಶದಲ್ಲಿ ಭಾಜಪದ ಸರಕಾರ ಇರುವಾಗ ಈ ರೀತಿ ನಡೆಯುವುದು ಹಿಂದೂಗಳಿಗೆ ಅಪೇಕ್ಷಿತವಿಲ್ಲ !- ಸಂಪಾದಕರು

ವಾರಣಾಸಿ (ಉತ್ತರಪ್ರದೇಶ) – ಹಿಂದೂರೇತರರಿಗೆ ವಾರಣಾಸಿಯ ಗಂಗಾನದಿಯ ದಡಗಳಲ್ಲಿ ಪ್ರವೇಶ ಇಲ್ಲದಿರುವ ಎಚ್ಚರಿಕೆ ನೀಡುವ ಹಿಂದಿ ಭಾಷೆಯ ಫಲಕಗಳು ಸಂಪೂರ್ಣ ನಗರಗಳಲ್ಲಿ ಕಾಣುತ್ತಿರುವುದು ಬೆಳಕಿಗೆ ಬಂದಿದೆ. ಈ ಫಲಕಗಳು ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದಿಂದ ಹಾಕಲಾಗಿತ್ತು ಎಂದು ಹೇಳಲಾಗುತ್ತದೆ. ಈ ಫಲಕಗಳ ಮೇಲೆ ಎರಡು ಸಂಸ್ಥೆಯ ಹೆಸರುಗಳು ಬರೆಯಲಾಗಿದೆ. ಪೊಲೀಸರು ಈ ಎಲ್ಲಾ ಫಲಕಗಳನ್ನು ತೆರವುಗೊಳಿಸಿದ್ದಾರೆ. ಈ ಪ್ರಕರಣದಲ್ಲಿ ಯಾರಿಂದಲೂ ದೂರು ದಾಖಲಾಗಿಲ್ಲ. ಫಲಕ ಹಾಕುತ್ತಿರುವ ವಿಡಿಯೋ ಪ್ರಸಾರವಾದ ನಂತರ ಅದನ್ನು ಆಧಾರವಾಗಿಟ್ಟುಕೊಂಡು ಪೊಲೀಸರು ಫಲಕ ಹಾಕಿರುವವರನ್ನು ಹುಡುಕುತ್ತಿದ್ದಾರೆ.

ಈ ಫಲಕಗಳ ಮೇಲೆ, ಹಿಂರೇತರರಿಗೆ ಪ್ರವೇಶವಿಲ್ಲ, ಗಂಗಾಮಾತೆ, ಕಾಶಿಯ ದಡಗಳು, ಮತ್ತು ದೇವಸ್ಥಾನಗಳು ಇದು ಸನಾತನ ಧರ್ಮ, ಭಾರತೀಯ ಸಂಸ್ಕೃತಿ, ಶ್ರದ್ಧೆ ಮತ್ತು ನಂಬಿಕೆಯ ಪ್ರತೀಕವಾಗಿದೆ. ಯಾರಿಗೆ ಸನಾತನ ಧರ್ಮದ ಮೇಲೆ ಶ್ರದ್ಧೆ ಇದೆ, ಅವರಿಗೆ ಇಲ್ಲಿ ಸ್ವಾಗತವಿದೆ. ಇಲ್ಲದಿದ್ದರೆ ಈ ಸ್ಥಳ ಪ್ರವಾಸಿ ತಾಣವಲ್ಲ. ಇದು ವಿನಂತಿ ಅಲ್ಲ ಎಚ್ಚರಿಕೆ ಇದೆ ಎಂದು ಬರೆಯಲಾಗಿದೆ.

ಹಿಂದೂರೇತರ ವ್ಯಕ್ತಿ ಕಾಶಿಯಲ್ಲಿನ ದಡಗಳ ಪಾವಿತ್ರ್ಯತೆಯನ್ನು ಭಂಗ ಮಾಡುತ್ತಾರೆ ! – ಬಜರಂಗ ದಳ

ಬಜರಂಗ ದಳದ ಕಾಶಿಯಲ್ಲಿನ ವ್ಯವಸ್ಥಾಪಕ ನಿಖಿಲ ತ್ರಿಪಾಟಿ ರುದ್ರ ಇವರು ಪಿ.ಟಿ.ಐ. ವಾರ್ತಾವಾಹಿನಿಯೊಂದಿಗೆ ಮಾತನಾಡುವಾಗ, ಹಿಂದೂರೇತರ ವ್ಯಕ್ತಿ ಕಾಶಿಯಲ್ಲಿನ ದಡಗಳ ಪಾವಿತ್ಯ್ರತೆಯನ್ನು ಭಂಗ ಮಾಡುತ್ತಾರೆ, ಆದ್ದರಿಂದ ಅವರಿಗೆ ಎಚ್ಚರಿಕೆ ನೀಡಲಾಗಿದೆ. ಸನಾತನ ಧರ್ಮದ ಮೇಲೆ ಶ್ರದ್ಧೆ ಇಲ್ಲದವರಿಗೆ ಇದು ಎಚ್ಚರಿಕೆಯಾಗಿದೆ. ಕೆಲವು ದಿನಗಳ ಹಿಂದೆ ದಡದಲ್ಲಿ ಒಂದು ಹುಡುಗಿ ಬಿಯರ್ ಕುಡಿಯುವ ಛಾಯಾಚಿತ್ರ ಬೆಳಕಿಗೆ ಬಂದಿತ್ತು. ಇಲ್ಲಿಯ ದಡ ಮತ್ತು ದೇವಸ್ಥಾನ ಸನಾತನ ಧರ್ಮದ ಪ್ರತೀಕವಾಗಿದೆ. ಆದ್ದರಿಂದ ಒಂದು ವೇಳೆ ಈ ರೀತಿಯ ವ್ಯಕ್ತಿ ದಡದಲ್ಲಿ ಕಂಡರೆ, ಆಗ ನಾವು ವ್ಯಕ್ತಿಯನ್ನು ಹಿಡಿದು ಪೊಲೀಸರ ವಶಕ್ಕೆ ಒಪ್ಪಿಸುತ್ತೇವೆ. (ಈ ಕಾರ್ಯ ಪೊಲೀಸರು ಮತ್ತು ಸರಕಾರ ಮಾಡಬೇಕಾಗಿರುವಾಗ ಇಂತಹ ಸಮಯದಲ್ಲಿ ಅವರು ನಿದ್ದೆ ಮಾಡುತ್ತಿರುತ್ತಾರೆಯೇ ? – ಸಂಪಾದಕರು)