ಮುಸಲ್ಮಾನ ಯುವಕನಿಂದ ವಿಹಂಪದ ಮುಖಂಡರ ಮೇಲೆ ಮಾರಣಾಂತಿಕ ಹಲ್ಲೆ

ಹನುಮಾನಗಡ (ರಾಜಸ್ಥಾನ) ಇಲ್ಲಿ ದೇವಾಲಯಕ್ಕೆ ಹೋಗುವ ಯುವತಿಯನ್ನು ಚುಡಾಯಿಸಿದ್ದನ್ನು ಪ್ರಶ್ನಿಸಿದ ಪರಿಣಾಮ !

ಹನುಮಾನಗಡ (ರಾಜಸ್ಥಾನ) – ಇಲ್ಲಿನ ರಾಮದೇವ ದೇವಾಲಯದ ಎದುರಿಗೆ ಕುಳಿತುಕೊಂಡಿದ್ದ ಮುಸಲ್ಮಾನ ಯುವಕನು ದೇವಾಲಯಕ್ಕೆ ಹೋಗುವ ಯುವತಿಯನ್ನು ಚುಡಾಯಿಸಿದ ಬಗ್ಗೆ ಪ್ರಶ್ನಿಸಲು ಹೋದ ವಿಶ್ವ ಹಿಂದು ಪರಿಷತ್ತಿನ ಸ್ಥಳೀಯ ಮುಖಂಡ ಸತವೀರ ಸಹಾರಣರವರ ಮೇಲೆ ಕಬ್ಬಿಣದ ಸಲಾಕೆಯಿಂದ ದಾಳಿ ಮಾಡಿದ್ದರಿಂದ ಸತವೀರರವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಬಿಕಾನೆರನಲ್ಲಿನ ಆಸ್ಪತ್ರೆಗೆ ಸೇರಿಸಲಾಗಿದೆ. ಮೆ ೧೧ರಂದು ಮೇಲಿನ ಘಟನೆ ನಡೆಯಿತು. ಘಟನೆಯ ಬಳಿಕ ಇಲ್ಲಿ ವಿಹಂಪವು ಪ್ರತಿಭಟನೆ ನಡೆಸಿದ್ದರಿಂದ ಅಲ್ಲಿ ಬಿಗುವಿನ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಇಲ್ಲಿ ಇಂಟರನೆಟ್ ಸೇವೆಯನ್ನು ನಿಲ್ಲಿಸಲಾಗಿದೆ. ಪೊಲೀಸರು ಸೂಕ್ಷ್ಮ ಪ್ರದೇಶದಲ್ಲಿ ಸಂಚಲನೆ ನಡೆಸಿದರು.

ಇದೊಂದು ಸಣ್ಣ ಘಟನೆ ಪೊಲೀಸ್ ಅಧೀಕ್ಷಕರ ಹೇಳಿಕೆ !

ವಿಹಂಪದ ಪ್ರಾಂತ್ಯ ಸಂಯೋಜಕರಾದ ಆಶೀಷ ಪೊರೆಖರವರು ‘ಆರೋಪಿಗಳನ್ನು ತಕ್ಷಣ ಬಂಧಿಸಿ ಇಲ್ಲದಿದ್ದರೆ ನಾವು ಮುಂದಿನ ಕ್ರಮ ಕೈಗೊಳ್ಳುವೆವು’, ಎಂದು ಎಚ್ಚರಿಕೆ ನೀಡಿದ್ದಾರೆ. ಮತ್ತೊಂದು ಕಡೆ ಪೊಲೀಸ್ ಅಧಿಕ್ಷಕರು ‘ಇದೊಂದು ಸಣ್ಣ ಘಟನೆಯಷ್ಟೇ’, ಎಂದು ಹೇಳಿದರು. (ಯಾರ ಮೇಲಾದರೂ ಮಾರಣಾಂತಿಕ ಹಲ್ಲೆ ನಡೆದರೆ ಅದನ್ನು ಸಣ್ಣ ಘಟನೆ, ಎಂದು ಹೇಳುವ ಪೊಲೀಸ್ ಅಧಿಕ್ಷಕರ ಮೇಲೆ ಕಾರ್ಯಾಚರಣೆ ನಡೆಯಬೇಕು; ಆದರೆ ಕಾಂಗ್ರೆಸ ರಾಜ್ಯದಲ್ಲಿ ಅದು ನಡೆಯುವುದು ಅಸಾಧ್ಯ ! – ಸಂಪಾದಕರು) ಜಿಲ್ಲಾಧಿಕಾರಿಗಳು ‘ಆರೋಪಿಯ ಮೇಲೆ ಕಠಿಣ ಕ್ರಮಕೈಗೊಳ್ಳುವೆವು’ ಎಂದು ಆಶ್ವಾಸನೆ ನೀಡಿದರು.

ಸಂಪಾದಕೀಯ ನಿಲುವು

ಇದು ರಾಜಸ್ಥಾನವೇ ಅಥವಾ ಪಾಕಿಸ್ತಾನವೇ ? ಕಳೆದ ೧-೨ ತಿಂಗಳಿನಲ್ಲಿ ಕಾಂಗ್ರೆಸನ ಆಢಳಿತವಿರುವ ರಾಜಸ್ಥಾನದಲ್ಲಿ ಹಿಂದೂಗಳ ಮೇಲೆ ನಿರಂತರವಾಗಿ ನಡೆಯುತ್ತಿರುವ ದಾಳಿಯನ್ನು ನೋಡಿದಾಗ ಕೇಂದ್ರ ಸರಕಾರವು ತಕ್ಷಣ ಗಮನದಲ್ಲಿಟ್ಟು ಕಾಯಿದೆ ಹಾಗೂ ಸುವ್ಯವಸ್ಥೆಯ ಸ್ಥಿತಿಯ ಮೇರಿಗೆ ರಾಜ್ಯ ಸರಕಾರವನ್ನು ಪ್ರಶ್ನಿಸಬೇಕು, ಎಂದು ಹಿಂದೂಗಳಿಗೆ ಅನಿಸುತ್ತದೆ !