ಮಂಗಳೂರಿನ ಜುಮ್ಮಾ ಮಸೀದಿಯಲ್ಲಿ ದೇವಸ್ಥಾನದ ಅವಶೇಷಗಳು ದೊರೆತಿರುವ ಪ್ರಕರಣ
ಮಂಗಳೂರು – ದೇಶದ ಪ್ರತಿಯೊಂದು ಮಸೀದಿಯ ಸಮೀಕ್ಷೆ ನಡೆಯಬೇಕು; ಏಕೆಂದರೆ ಹೆಚ್ಚಿನ ಮಸೀದಿಗಳನ್ನು ಹಿಂದೂಗಳ ದೇವಸ್ಥಾನಗಳ ಮೇಲೆ ಕಟ್ಟಲಾಗಿದೆ. ಪ್ರತಿ ಬಾರಿ ‘ಧಾರ್ಮಿಕ ಸ್ಥಳ ೧೯೯೧ರ ಕಾನೂನಿನ’ ಆಧಾರ ಪಡೆಯುವುದು ಯೋಗ್ಯವಲ್ಲ, ಎಂದು ಭಾಜಪದ ಶಾಸಕರಾದ ಭರತ ಶೆಟ್ಟಿಯವರು ಹೇಳಿದ್ದಾರೆ. ಇಲ್ಲಿನ ಮಲಾಲಿ ಜುಮ್ಮಾ ಮಸೀದಿಯ ಪರಿಸರದಲ್ಲಿ ಪೊಲೀಸರು ಮೇ ೨೬ರ ವರೆಗೆ ಗುಂಪು ಸೇರದಂತೆ ಆದೇಶಿಸಿದ್ದಾರೆ. ಈ ಮಸೀದಿಯ ನೂತನೀಕರಣದ ಸಮಯದಲ್ಲಿ ಏಪ್ರಿಲ್ ೨೧ರಂದು ಹಿಂದೂ ದೇವಸ್ಥಾನದ ವಾಸ್ತುವಿನ ಅವಶೇಷಗಳು ದೊರೆತಿದ್ದವು. ಅನಂತರ ಹಿಂದೂಗಳು ಇಲ್ಲಿ ಪೂಜೆ ಮಾಡಲು ಅನುಮತಿ ನೀಡುವ ಹಾಗೂ ಈ ಮಸೀದಿಯನ್ನು ಸಂರಕ್ಷಿಸಲು ಮನವಿ ಮಾಡಿದ್ದರು. ಇನ್ನೊಂದೆಡೆ ಸ್ಥಳೀಯ ನ್ಯಾಯಾಲಯವು ಮಸೀದಿಯ ನೂತನೀಕರಣದ ಕೆಲಸವನ್ನು ಸ್ಥಗಿತಗೊಳಿಸಿದೆ. ಈ ಹಿನ್ನೆಲೆಯಲ್ಲಿ ಶಾಸಕ ಶೆಟ್ಟಿಯವರು ಮಾತನಾಡುತ್ತಿದ್ದರು. ಭಾಜಪವು ಪುರಾತತ್ತ್ವ ವಿಭಾಗದಿಂದ ಈ ಮಸೀದಿಯ ಸಮೀಕ್ಷೆ ನಡೆಸಬೇಕಾಗಿ ಮನವಿ ಮಾಡಿದೆ. ಈ ಹಿನ್ನೆಲೆಯಲ್ಲಿ ಮೇ ೨೫ರಂದು ವಿಶ್ವ ಹಿಂದೂ ಪರಿಷದ್ ಹಾಗೂ ಬಜರಂಗ ದಳವು ಇಲ್ಲಿನ ಶ್ರೀ ರಾಮಾಂಜನೇಯ ಭಜನಾ ಮಂದಿರದಲ್ಲಿ ಪೂಜಾರ್ಚನೆ ಮಾಡಿತು. ಈ ವಿಷಯದಲ್ಲಿ ರಾಜ್ಯದ ಗೃಹಮಂತ್ರಿಗಳಾದ ಅರಗಾ ಜ್ಞಾನೇಂದ್ರರವರು ಮಾತನಾಡುತ್ತ, ಜಿಲ್ಲಾಡಳಿತವು ಸ್ಥಿತಿಯನ್ನು ಗಮನಕ್ಕೆ ತೆಗೆದುಕೊಂಡಿದೆ, ಎಂದು ಹೇಳಿದರು.
Karnataka: Hindu Temple-like structure found inside a mosque in Mangaluru, locals suspect the presence of a temple in the pasthttps://t.co/QSiutJlpjC
— OpIndia.com (@OpIndia_com) April 22, 2022
ಕಾಂಗ್ರೆಸ್ ನೇತಾರ ಡಿ. ಕೆ. ಶಿವಕುಮಾರರವರು ಮಾತನಾಡುತ್ತ, ಭಾಜಪವು ಕರ್ನಾಟಕದ ಹೆಸರನ್ನು ಕೆಡಿಸುತ್ತಿದೆ. ಮಂಗಳೂರು ಆರ್ಥಿಕ ಹೂಡಿಕೆಗಾಗಿ ಒಳ್ಳೆಯ ಜಾಗವಾಗಿರುವುದರಿಂದ ಇಂತಹ ವಾದಗಳಿಂದ ಉದ್ಯೋಗದ ಮೇಲೆ ಪರಿಣಾಮವಾಗುತ್ತಿದೆ, ಎಂದು ಹೇಳಿದರು.
ಸಂಪಾದಕೀಯ ನಿಲುವುಭಾಜಪದ ಶಾಸಕರು ಹೀಗೆ ಮನವಿ ಮಾಡುವುದರೊಂದಿಗೆ ಕೇಂದ್ರದಲ್ಲಿ ತಮ್ಮ ಪಕ್ಷವೇ ಅಧಿಕಾರದಲ್ಲಿರುವುದರಿಂದ ಕೇಂದ್ರ ಸರಕಾರವು ಭಾರತದ ಪ್ರತಿಯೊಂದು ಮಸೀದಿಯ ಸಮೀಕ್ಷೆ ನಡೆಸುವ ಆದೇಶವನ್ನು ನೀಡುವಂತೆ ಪ್ರಯತ್ನಿಸುವುದು ಆವಶ್ಯಕವಾಗಿದೆ ! |