ಆಗರಾ (ಉತ್ತರಪ್ರದೇಶ) – ವಿಶ್ವಹಿಂದೂ ಪರಿಷತ್ತಿನ ಕಾರ್ಯಕರ್ತರು ಹಿಜಾಬ್‌ನ ವಿರೋಧದಲ್ಲಿ ಇಲ್ಲಿಯ ತಾಜ್ ಮಹಲ್‌ನಲ್ಲಿ ಹನುಮಾನ್ ಚಾಲೀಸಾ ಪಠಣೆ ಮಾಡುವ ಪ್ರಯತ್ನ ಮಾಡಿದರು. ಪೊಲೀಸರು ಎಲ್ಲಾ ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ. ಅವರನ್ನು ಹರಿಪರ್ವತ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು. ಅಲ್ಲಿಯೂ ಅವರು ಹನುಮಾನ ಚಾಲೀಸಾದ ಪಠಣೆ ಮಾಡಿದರು. ಅವರಿಂದ ಮನವಿಯನ್ನು ಬರೆಸಿಕೊಂಡ ನಂತರ ಅವರನ್ನು ಬಿಡುಗಡೆಗೊಳಿಸಲಾಯಿತು.
आगरा: ताजमहल में हनुमान चालीसा का पाठ करने जा रहे विहिप कार्यकर्ताओं को पुलिस ने रोका, थाने में बैठाया#Agra #Tajmahal #HanumanChalisa https://t.co/54DqR30Rkt
— Amar Ujala (@AmarUjalaNews) February 15, 2022
ವಿಶ್ವಹಿಂದೂ ಪರಿಷತ್ತಿನ ಬ್ರಜ ಕ್ಷೇತ್ರದ ಉಪಾಧ್ಯಕ್ಷ ಆಶಿಷ ಆರ್ಯ ಇವರ ನೇತೃತ್ವದಡಿಯಲ್ಲಿ ಹನುಮಾನ್ ಚಾಲೀಸಾದ ಪಠಣೆ ನಡೆಸುವ ಯೋಜನೆ ಮಾಡಲಾಗಿತ್ತು. ಆಶಿಷ ಆರ್ಯ ಇವರು, ಪ್ರತಿಯೊಂದು ಶೈಕ್ಷಣಿಕ ಸಂಸ್ಥೆಗೆ ಅದರದೇ ಆದ ಸಮವಸ್ತ್ರ ಇರುತ್ತದೆ; ಆದರೆ ಕೆಲವು ಜನರು ಹೀಜಾಬ್‌ನ ಸಂದರ್ಭದಲ್ಲಿ ಉದ್ದೇಶಪೂರ್ವಕವಾಗಿ ಧಾರ್ಮಿಕ ಭಾವನೆಗಳ ಜೊತೆಗೆ ಸಂಬಂಧ ಜೋಡಿಸಿ ಜಾತಿವಾದ ಭುಗಿಲೆಬ್ಬಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.