ಸಾಹಿಬಗಂಜ (ಝಾರಖಂಡ) ಇಲ್ಲಿನ ಮುಸಲ್ಮಾನ ಬಹುಸಂಖ್ಯಾತ ಗ್ರಾಮದಲ್ಲಿ ಶ್ರೀ ದುರ್ಗಾದೇವಿ ದೇವಾಲಯದಲ್ಲಿ ಗೋಮಾಂಸ ಎಸೆದ ದುಶ್ಕರ್ಮಿಗಳು !

ಆರೋಪಿಗಳ ವಿರುದ್ಧ ಕ್ರಮ ಜರುಗಿಸದೇ ಇದ್ದಲ್ಲಿ ಆಂದೋಲನ ನಡೆಸುವುದಾಗಿ ವಿಹಂಪದ ಎಚ್ಚರಿಕೆ

ಝಾರಖಂಡನಲ್ಲಿ ಹಿಂದುದ್ವೇಷಿ ಝಾರಖಂಡ ಮುಕ್ತಿ ಮೋರ್ಚಾದ ಸರಕಾರವಿರುವಾಗ ಆರೋಪಿಗಳ ಮೇಲೆ ಕಾರ್ಯಾಚರಣೆ ನಡೆಯುವ ಸಾಧ್ಯತೆ ಅಲ್ಪವೇ ಎಂದು ಹೇಳಬಹುದು !

ಈ ಮೇಲಿನ ಚಿತ್ರ ಪ್ರಕಟಿಸುವುದರ ಉದ್ದೇಶ ಯಾರ ಭಾವನೆಗಳಿಗೆ ನೋವನ್ನು ಉಂಟುಮಾಡುವುದಾಗಿರದೇ ನಿಜ ಸ್ಥಿತಿ ತಿಳಿಸುವುದಾಗಿದೆ

ಸಾಹಿಬಗಂಜ (ಝಾರಖಂಡ) – ಇಲ್ಲಿನ ಫುಲಬಡಿಯಾ ಗ್ರಾಮದ ಕಾಲಿಬಾಡಿ ದುರ್ಗಾದೇವಿ ದೇವಾಲಯದಲ್ಲಿ ಅಪರಿಚಿತರಿಂದ ಗೋಮಾಂಸ ಎಸೆದ ಘಟನೆ ಬೆಳಕಿಗೆ ಬಂದಿದೆ. ಈ ಬಗ್ಗೆ ವಿಶ್ವ ಹಿಂದು ಪರಿಷತ್ ಪೊಲೀಸರಿಗೆ ದೂರು ನೀಡುತ್ತಾ ‘ಆರೋಪಿಗಳನ್ನು ತಕ್ಷಣ ಬಂಧಿಸದೆ ಹೋದರೆ, ನಾವು ಆಂದೋಲನ ನಡೆಸುವೆವು’, ಎಂದು ಎಚ್ಚರಿಕೆ ನೀಡಿದರು. ವಿಹಂಪನ ಪದಾಅಧಿಕಾರಿ ಕಾಲಿಚರಣ ಮಂಡಲರವರು ಮಾತನಾಡುತ್ತಾ, ಇಲ್ಲಿ ಹಿಂದುಗಳು ಅಲ್ಪಸಂಖ್ಯಾತರು ಹಾಗೂ ಮುಸಲ್ಮಾನರು ಬಹುಸಂಖ್ಯಾತರಾಗಿದ್ದಾರೆ. ಬೆಳಿಗ್ಗೆ ಓರ್ವ ಮಹಿಳೆಯು ಹೂವ ಕೀಳಲು ಇಲ್ಲಿಗೆ ಬಂದಾಗ ಅವಳಿಗೆ ದೇವಾಲಯದಲ್ಲಿ ಗೋಮಾಂಸ ಕಂಡು ಬಂದು ಕೂಗಾಡಲು ಪ್ರಾರಂಭಿಸಿದರು. ಆಗ ಅರಶದ ಅಲಿ ಎಂಬುವವನು ಗೋಮಾಂಸದ ತುಂಡನ್ನು ಹೊರಗೆ ಎಸೆದನು. ಅದು ಗೋಮಾಂಸವೇ ಆಗಿತ್ತೇ ಅಥವಾ ಬೇರೆ ಯಾವ ಮಾಂಸವಾಗಿತ್ತೋ, ಇನ್ನೂ ಅದು ಸ್ಪಷ್ಟವಾಗಿಲ್ಲ. ಗ್ರಾಮಸ್ಥರು ‘ಅರಶದ ಅಲಿಯು ದೇವಾಲಯದ ಹೊರಗೆ ಗೋಮಾಂಸ ಏಕೆ ಎಸೆದನು? ಆತ ಸಾಕ್ಷಿಗಳನ್ನು ನಾಶ ಮಾಡಲು ನೋಡುತ್ತಿದ್ದನೆ ?’, ಇತ್ಯಾದಿ ಪ್ರಶ್ನೆಗಳನ್ನು ಉಪಸ್ಥಿತ ಪಡಿಸಿದರು.