ಹಿಂದೂ ಕುಟುಂಬಕ್ಕೆ ಆಮೀಷ ತೋರಿಸಿ ಮತಾಂತರ ಗೊಳಿಸಿದ ಆರೋಪದ ಮೇರೆಗೆ ೩ ಕ್ರೈಸ್ತರ ಬಂಧನ

ಕ್ರೈಸ್ತ ಧರ್ಮಪ್ರಚಾರಕರು ಯಾವುದರ ಭಯವಿಲ್ಲದ ಕಾರಣ ಆಮೀಷ ತೋರಿಸಿ ಹಿಂದೂಗಳನ್ನು ಮತಾಂತರ ಮಾಡಲು ಧೈರ್ಯ ಮಾಡುತ್ತಾರೆ. ಇಂಥಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸರಕಾರ ಕ್ರಮಕೈಗೊಳ್ಳಬೇಕು !

ಮೌದಹಾ (ಉತ್ತರ ಪ್ರದೇಶ) – ಮತಾಂತರ ಮಾಡಿರುವ ಆರೋಪದ ಮೇಲೆ ೩ ಕ್ರೈಸ್ತರನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರು ಆರೋಪಿಗಳನ್ನು ಬಂಧಿಸುವ ವೇಳೆ ಅಲ್ಲಿ ವಿಎಚ್‌ಪಿ ಕಾಂiಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಇಲ್ಲಿನ ಚರ್ಚ್ ಪರಿಸರದಲ್ಲಿ ಹಿಂದೂ ಕುಟುಂಬವನ್ನು ಮತಾಂತರವಾಗಲು ಒತ್ತಡ ಹೇರಲಾಗಿತ್ತು, ಎಂದು ಹಿಂದೂ ಪರಿಷತ್ ಕಾರ್ಯಕರ್ತರು ಆರೋಪಿಸಿದ್ದಾರೆ. ‘ಈ ಹಿಂದೆಯು ಈ ಚರ್ಚ್‌ನಲ್ಲಿ ಹಿಂದೂಗಳನ್ನು ಮತಾಂತರ ಮಾಡಲಾಗುತ್ತಿತ್ತು. ಪ್ರತಿ ಭಾನುವಾರ ಈ ಚರ್ಚ್‌ನಲ್ಲಿ ಯೇಸುವನ್ನು ಪ್ರಾರ್ಥಿಸಲಾಗುತ್ತದೆ ಮತ್ತು ಪ್ರವಚನ ನೀಡಲಾಗುತ್ತದೆ. ಈ ಚರ್ಚ್‌ನ ಪಾದ್ರಿ ವಿರುದ್ದವೂ ಕ್ರಮ ಕೈಗೊಳ್ಳಬೇಕು’, ಎಂದು ವಿಎಚ್‌ಪಿ ಅಗ್ರಹಿಸಿದೆ.