ಅಸ್ಸಾಂನಲ್ಲಿ ೧೬ ಜಿಹಾದಿ ಉಗ್ರರ ಬಂಧನ
ಅಸ್ಸಾಂ ಪೊಲೀಸರು ಅಲ್ ಖಾಯಿದಾದೊಂದಿಗೆ ಸಂಬಂಧವಿರುವ ಬಾಂಗ್ಲಾದೇಶದ ‘ಅನ್ಸರ್ ಉಲ ಬಾಂಗ್ಲಾ ಟೀಂ’ ಎಂಬ ಜಿಹಾದಿ ಉಗ್ರ ಸಂಘಟನೆಯ ಅನೇಕ ತಾಣಗಳನ್ನು ಧ್ವಂಸ ಮಾಡಿದ್ದಾರೆ. ಪೊಲೀಸರು ಇಲ್ಲಿಯವರೆಗೆ ಈ ಸಂಘಟನೆಯ ೧೬ ಉಗ್ರರನ್ನು ಬಂಧಿಸಿದ್ದಾರೆ.
ಅಸ್ಸಾಂ ಪೊಲೀಸರು ಅಲ್ ಖಾಯಿದಾದೊಂದಿಗೆ ಸಂಬಂಧವಿರುವ ಬಾಂಗ್ಲಾದೇಶದ ‘ಅನ್ಸರ್ ಉಲ ಬಾಂಗ್ಲಾ ಟೀಂ’ ಎಂಬ ಜಿಹಾದಿ ಉಗ್ರ ಸಂಘಟನೆಯ ಅನೇಕ ತಾಣಗಳನ್ನು ಧ್ವಂಸ ಮಾಡಿದ್ದಾರೆ. ಪೊಲೀಸರು ಇಲ್ಲಿಯವರೆಗೆ ಈ ಸಂಘಟನೆಯ ೧೬ ಉಗ್ರರನ್ನು ಬಂಧಿಸಿದ್ದಾರೆ.
ಇಲ್ಲಿ ಏಪ್ರಿಲ ೧೬ ರಂದು ರಾಷ್ಟ್ರೀಯ ಸ್ವಯಂ ಸಂಘದ ಸ್ವಯಂಸೇವಕ ಶ್ರೀನಿವಾಸನರವರ ಹತ್ಯೆಗೆ ಸಂಬಂಧಿಸಿದಂತೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫಐ) ಮತ್ತು ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ ಇಂಡಿಯಾ(ಎಸಡಿಪಿಐ)ನ ನಾಲ್ವರು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.
ಪಾಕಿಸ್ತಾನದ ವಾಯುದಳವು ಏಪ್ರಿಲ್ ೧೬ರ ರಾತ್ರಿ ಅಫಘಾನಿಸ್ತಾನದ ಖೊಸ್ತ ಮತ್ತು ಕುನಾರ ಪ್ರಾಂತ್ಯದಲ್ಲಿ ನಡೆಸಿದ ‘ಏರ್ ಸ್ಟ್ರಾಯಿಕ್’ನಲ್ಲಿ (ನಿಯಂತ್ರಿತ ಆಕ್ರಮಣದಲ್ಲಿ) ೪೭ ಜನರು ಮೃತರಾದರು. ಇದರಲ್ಲಿ ಮಹಿಳೆಯರು ಮತ್ತು ಚಿಕ್ಕ ಮಕ್ಕಳು ದೊಡ್ಡ ಪ್ರಮಾಣದಲ್ಲಿರುವುದರಿಂದ ತಾಲಿಬಾನ ಸರಕಾರವು ರೊಚ್ಚಿಗೆದ್ದಿದೆ.
ಪಾಕಿಸ್ತಾನದ ವಾಯುದಳವು ಅಫಗಾನಿಸ್ತಾನದ ಖೊಸ್ತ ಪ್ರಾಂತ್ಯದಲ್ಲಿನ ಸಪುರಾ ಜಿಲ್ಲೆ ಹಾಗೂ ಕುನಾರ ಪ್ರಾಂತ್ಯದಲ್ಲಿ ನಡೆಸಿದ ದಾಳಿಯಲ್ಲಿ ೩೦ ಜನರು ಮೃತಪಟ್ಟಿದ್ದಾರೆ. ಅವರ ಪೈಕಿ ಮಹಿಳೆಯರು ಹಾಗೂ ಮಕ್ಕಳ ಸಮಾವೇಶವಿತ್ತು. ಉಗ್ರಗಾಮಿಗಳನ್ನು ನಾಶ ಮಾಡಲು ಈ ಕಾರ್ಯಾಚರಣೆ ನಡೆಸಿರುವುದಾಗಿ ಪಾಕಿಸ್ತಾನವು ಹೇಳಿಕೊಂಡಿದೆ.
ಬಾರಾಮುಲ್ಲಾದ ಮಂಜುರ ಅಹಮದ ಬಾಂಗರು, ಭಾಜಪ ಬೆಂಬಲಿಗ ಪಕ್ಷೇತರ ಸರಪಂಚನನ್ನು ಏಪ್ರಿಲ ೧೫ರಂದು ಸಂಜೆ ಜಿಹಾದಿ ಉಗ್ರರು ಗುಂಡಿಕ್ಕಿ ಕೊಂದಿದ್ದಾರೆ. ಬಂಗಾರು ಮನೆಯಿಂದ ಹೊರಬರುವುದನ್ನೇ ಕಾಯುತ್ತಿದ್ದ ಉಗ್ರರು ಅವರು ಹೊರ ಬರುತ್ತಿದ್ದಂತೆ ಗುಂಡಿನ ದಾಳಿ ನಡೆಸಿದ್ದಾರೆ.
ಜಿಹಾದಿ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್‌ಐ)ಯನ್ನು ಕೇಂದ್ರ ಸರಕಾರ ಶೀಘ್ರದಲ್ಲೇ ನಿಷೇಧಿಸಲಿದ್ದು, ಪ್ರಕ್ರಿಯೆ ಬಹುತೇಕ ಪೂರ್ಣಗೊಂಡಿದೆ ಎಂದು ಹೇಳಲಾಗುತ್ತಿದೆ. ಕೆಲವೆಡೆ ಶ್ರೀರಾಮ ನವಮಿಯ ಮೆರವಣಿಗೆಗಳ ಮೇಲೆ ನಡೆದ ದಾಳಿಯ ಹಿಂದೆ ಇದೇ ಸಂಘಟನೆಯ ಕೈವಾಡವಿದೆ ಎಂಬುದಕ್ಕೆ ಪುರಾವೆಗಳು ಲಭ್ಯವಾಗುತ್ತಿವೆ.
ಒಂದು ಸ್ಥಳೀಯ ನ್ಯಾಯಾಲಯವು ವಿಶ್ವವಿದ್ಯಾಲಯದ ಪ್ರಸಿದ್ಧ ಲೇಖಕ ಹಾಗೂ ಸಾಹಿತಿ ಪ್ರಾ. ಹುಮಾಯೂ ಆಜಾದ್ ಹತ್ಯೆಗೆ ಸಂಬಂಧಿಸಿದಂತೆ ೧೮ ವರ್ಷಗಳ ಹಿಂದಿನ ಪ್ರಕರಣದಲ್ಲಿ ನಾಲ್ವರು ಜಿಹಾದಿ ಭಯೋತ್ಪಾದಕರಿಗೆ ಮರಣದಂಡನೆ ವಿದಿಸಿದೆ.
ಮೇ ೩ ರಂದು ಪ್ರಳಯ ಬಂದರೂ ಬೋಂಗಾಗಳನ್ನು ತೆಗೆಯುವುದಿಲ್ಲ. ಇದು ಗಲಭೆ ಎಬ್ಬಿಸುವ ಸಂಚಾಗಿದೆ. ಇಲ್ಲಿ ಸರ್ವಾಧಿಕಾರ ನಡೆಯುವುದಿಲ್ಲ. ರಾಜ್ಯವು ಕಾನೂನಿನಿಂದ ನಡೆಯುತ್ತದೆ. ಇವರು (ಮನಸೆಯ ಅಧ್ಯಕ್ಷ ರಾಜ್ ಠಾಕ್ರೆ) ಭಾಜಪದಂತೆ ವರ್ತಿಸುತ್ತಿದೆ.
ಜಿಹಾದಿ ಭಯೋತ್ಪಾದಕರು ಮತ್ತು ಅವರ ಬೆಂಬಲಿಗರಿಗೆ ಧರ್ಮವಿರುತ್ತದೆ ಮತ್ತು ಅವರು ಅವರ ಧಾರ್ಮಿಕ ಸ್ಥಳಗಳಲ್ಲಿ ಭಾರತ ವಿರೋಧಿ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ ಅದರದೊಂದು ಉದಾಹರಣೆ ! ಈ ಕುರಿತು ದೇಶದ ಕಪಟ ಜಾತ್ಯತೀತವಾದಿಗಳು ಎಂದಿಗೂ ಮಾತನಾಡುವುದಿಲ್ಲ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !
ಉತ್ತರಪ್ರದೇಶದಲ್ಲಿನ ಗೋರಖಪುರದಲ್ಲಿನ ಶ್ರೀ ಗೋರಖನಾಥ ದೇವಸ್ಥಾನದ ಮೇಲೆ ಆಕ್ರಮಣ ಮಾಡಲು ಪ್ರಯತ್ನಿಸಿದ್ದ ಪ್ರಕರಣದಲ್ಲಿ ಬಂಧಿಸಲಾದ ಜಿಹಾದಿ ಅಹಮದ ಮುತರ್ಜಾ ಅಬ್ಬಾಸಿಯನ್ನು ಸಮಾಜವಾದಿ ಪಕ್ಷವು ರಕ್ಷಿಸಲು ಪ್ರಯತ್ನಿಸಿದೆ. ಸಮಾಜವಾದಿ ಪಕ್ಷವು ಮುರ್ತಜಾನನ್ನು ಮನೋರೋಗಿ ಎಂದು ನಿರ್ಧರಿಸಿದೆ.