ಅಮೆರಿಕನ್ ಸಂಸತ್ತಿನಲ್ಲಿ ಹೊಸ ಕಾಯ್ದೆ ಮಂಡನೆ

ವಾಷಿಂಗ್ಟನ್ (ಅಮೆರಿಕ) – ಅಮೆರಿಕದಲ್ಲಿ ವಾಸಿಸುವ ಖಾಲಿಸ್ತಾನಿ ಮತ್ತು ಇತರ ದೇಶಗಳ ಭಯೋತ್ಪಾದಕರನ್ನು ರಕ್ಷಿಸಲು ಅಮೆರಿಕ ಹೊಸ ಕಾಯ್ದೆಯನ್ನು ತರಲು ಸಿದ್ಧತೆ ನಡೆಸುತ್ತಿದೆ. ಈ ಕಾಯ್ದೆಯಡಿಯಲ್ಲಿ, ಅಮೆರಿಕದಲ್ಲಿ ವಾಸಿಸುವ ಕಲ್ಪಿತ ‘ರಾಜಕೀಯ ವಿರೋಧಿಗಳನ್ನು’ ಮತ್ತು ‘ಕಾರ್ಯಕರ್ತರನ್ನು’ ಹೆದರಿಸುವ ಅಥವಾ ಬೆದರಿಸುವ ವಿದೇಶಿ ಸರಕಾರಗಳ ಪ್ರಯತ್ನವನ್ನು ಅಪರಾಧದ ವರ್ಗಕ್ಕೆ ಸೇರಿಸಲಾಗುವುದು. ಇದಕ್ಕೆ ‘ಸ್ಟಾಪ್ ಟ್ರಾನ್ಸ್‌ನ್ಯಾಷನಲ್ ರಿಪ್ರೆಶನ್ ಆಕ್ಟ್ ೨೦೨೬’ ಎಂದು ಹೆಸರಿಡಲಾಗಿದೆ. ಖಾಲಿಸ್ತಾನಿ ಭಯೋತ್ಪಾದಕ ಗುರುಪತ್‌ವಂತ್ ಸಿಂಗ್ ಪನ್ನು ವಿವಾದದ ಬಗ್ಗೆ ಭಾರತದ ಜೊತೆ ಉದ್ವಿಗ್ನತೆ ಉಂಟಾಗಿರುವ ಬೆನ್ನಲ್ಲೇ ಅಮೆರಿಕ ಇಂತಹ ಕಾಯ್ದೆ ತರುತ್ತಿದೆ.
🚨 US Moves to Shield Khalistanis?
The US Congress has introduced the "Stop Transnational Repression Act of 2026", making alleged acts of transnational repression a separate federal offence.
The move comes amid the Gurpatwant Singh Pannun case, even as the US continues to… pic.twitter.com/Kr8gVc4HeO
— Sanatan Prabhat (@SanatanPrabhat) July 22, 2026
ಈ ವಿಧೇಯಕ ಮಂಡಿಸಿದವರಾರು?
ಈ ವಿಧೇಯಕವನ್ನು ಡೆಮಾಕ್ರಟಿಕ್ ಪಕ್ಷದ ಸಂಸದ ಆಡಮ್ ಶಿಫ್ ಮತ್ತು ರಿಪಬ್ಲಿಕನ್ ಪಕ್ಷದ ಸಂಸದ ಜಾನ್ ಕರ್ಟಿಸ್ ಮಂಡಿಸಿದ್ದಾರೆ. ಈ ಕಾಯ್ದೆ ಜಾರಿಗೆ ಬಂದರೆ, ಅಮೆರಿಕದಲ್ಲಿ ಮೊದಲ ಬಾರಿಗೆ ಗಡಿಯಾಚೆಗಿನ ದಮನಕಾರಿ ಕೆಲಸವನ್ನು (Transnational Repression) ನಿರ್ದಿಷ್ಟ ಅಪರಾಧವೆಂದು ಪರಿಗಣಿಸಲಾಗುವುದು. ಇದರಿಂದಾಗಿ ಅಮೆರಿಕದಲ್ಲಿನ ವಿರೋಧ ಹತೋಟಿಗೆ ತರುವ ವಿದೇಶಿ ಯತ್ನಗಳ ತನಿಖೆ ನಡೆಸಲು ಮತ್ತು ಅವರ ವಿರುದ್ಧ ಪ್ರಕರಣ ದಾಖಲಿಸಲು ನ್ಯಾಯಾಂಗ ಇಲಾಖೆ ಹಾಗೂ ಎಫ್.ಬಿ.ಐ. (FBI) ಅಧಿಕಾರ ವ್ಯಾಪ್ತಿ ವಿಸ್ತರಿಸಲಿದೆ.
ಈ ವಿಧೇಯಕದ ಪ್ರಕಾರ, ಯಾವುದಾದರೂ ವ್ಯಕ್ತಿ ದೋಷಿ ಎಂದು ಸಾಬೀತಾದರೆ, ಸಾಮಾನ್ಯ ಅಪರಾಧಗಳಿಗೆ ಸಿಗುವ ಶಿಕ್ಷೆಯ ಹೊರತಾಗಿ ಹೆಚ್ಚುವರಿ ೧೦ ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ೯೫ ಲಕ್ಷ ರೂಪಾಯಿಗಳವರೆಗೆ ದಂಡ ವಿಧಿಸಬಹುದಾಗಿದೆ.
ಒಬ್ಬ ಭಾರತೀಯ ಏಜೆಂಟ್ ಖಾಲಿಸ್ತಾನಿ ಭಯೋತ್ಪಾದಕ ಗುರುಪತ್‌ವಂತ್ ಸಿಂಗ್ ಪನ್ನು ಹತ್ಯೆಗೆ ಸಂಚು ರೂಪಿಸಿದ್ದನು, ಆದರೆ ಸಮಯಕ್ಕೆ ಸರಿಯಾಗಿ ಅದನ್ನು ವಿಫಲಗೊಳಿಸಲಾಯಿತು ಎಂದು ಅಮೆರಿಕ ಭಾರತದ ಮೇಲೆ ಆರೋಪ ಮಾಡಿತ್ತು. ಆದರೆ ಭಾರತವು ಈ ಆರೋಪಗಳನ್ನು ತಳ್ಳಿಹಾಕಿ, ಈ ಪ್ರಕರಣದ ತನಿಖೆಯನ್ನು ಪ್ರಾರಂಭಿಸಿತ್ತು.
ಅಮೆರಿಕ: ಧರ್ಮದತ್ತ ಒಲವು ತೋರುತ್ತಿರುವ ಜೆನ್-ಜ಼ಿ ಹುಡುಗರು!
ಬ್ರಿಟನ್ ಸಚಿವ ಸಂಪುಟದಲ್ಲಿ ಭಾರತೀಯ ಮೂಲದ ಕನಿಷ್ಕ ನಾರಾಯಣ ಮತ್ತು ಲಿಜಾ ನಂದಿ ಅವರಿಗೆ ಸ್ಥಾನ
ಜೆನೆರಿಕ್ ಔಷಧಗಳ ಮೇಲೆ ಶೇ.೨೦೦ ರಷ್ಟು ಆಮದು ಸುಂಕ ! – ಟ್ರಂಪ್ ಅವರ ಘೋಷಣೆ : Tax on Indian Drugs
ನೇಪಾಳದ ಹೊಸ ₹1 ನಾಣ್ಯದಿಂದ ವಿವಾದಿತ ನಕ್ಷೆ ತೆರವು : Nepal New Coin Map
ಭಾರತದ ಬಾಂಗ್ಲಾದೇಶ ಗಡಿಯ ಸಮೀಪ ಅಮೆರಿಕದ ಸೈನಿಕರೊಂದಿಗೆ ಬಾಂಗ್ಲಾದೇಶ ಸೇನೆಯ ಜಂಟೀ ಸಮರಾಭ್ಯಾಸ
‘ಭಾರತಕ್ಕೆ ಬಲವಂತವಾಗಿ ಜನರನ್ನು ನಮ್ಮ ದೇಶಕ್ಕೆ ಕಳುಹಿಸಲು ಬಿಡುವುದಿಲ್ಲ!’(ಅಂತೆ)