ನೇಪಾಳದ ಹೊಸ ₹1 ನಾಣ್ಯದಿಂದ ವಿವಾದಿತ ನಕ್ಷೆ ತೆರವು : Nepal New Coin Map

ಕಠ್ಮಂಡು (ನೇಪಾಳ) – ನೇಪಾಳ ಸರಕಾರವು ಒಂದು ರೂಪಾಯಿಯ ಹೊಸ ನಾಣ್ಯಕ್ಕೆ ಒಪ್ಪಿಗೆ ನೀಡಿದ್ದು, ಇದರಿಂದ ಹಿಂದಿನ ನಕ್ಷೆಯನ್ನು ತೆಗೆದುಹಾಕಲಾಗಿದೆ. ಈ ನಕ್ಷೆಯಲ್ಲಿ ಲಿಂಪಿಯಾಧುರಾ, ಲಿಪುಲೇಖ್ ಮತ್ತು ಕಾಲಾಪಾನಿ ಎಂಬ ಭಾರತದ ಭಾಗಗಳನ್ನು ನೇಪಾಳಕ್ಕೆ ಸೇರಿದ್ದು ಎಂದು ತೋರಿಸಲಾಗಿತ್ತು. ನೇಪಾಳದ ಅಂದಿನ ಪ್ರಧಾನಮಂತ್ರಿ ಕೆ.ಪಿ. ಶರ್ಮಾ ಓಲಿ ಅವರ ಸರಕಾರವು ೨೦೨೦ ರ ಮೇನಲ್ಲಿ ಹೊಸ ರಾಜಕೀಯ ನಕ್ಷೆಯನ್ನು ಪ್ರಕಟಿಸಿತ್ತು. ಈಗ ಈ ನಕ್ಷೆಯ ಬದಲಿಗೆ ‘ಲೋ ಗ್ಯಾಕರ್ ಮಠ’ದ ಚಿತ್ರವು ನಾಣ್ಯದ ಮೇಲಿರಲಿದೆ. ಇದನ್ನು ನೇಪಾಳದ ಅತ್ಯಂತ ಹಳೆಯ ಬೌದ್ಧ ಮಠಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. (ನೇಪಾಳವು ಬಹುಸಂಖ್ಯಾತ ಹಿಂದೂಗಳಿರುವ ದೇಶವಾಗಿದ್ದರೂ, ನಾಣ್ಯದ ಮೇಲೆ ಹಿಂದೂಗಳ ಚಿಹ್ನೆ ಏಕೆ ಇಲ್ಲ? ಎಂಬ ಪ್ರಶ್ನೆಯನ್ನು ನೇಪಾಳಿ ಹಿಂದೂಗಳು ಸರಕಾರವನ್ನು ವಿಚಾರಿಸಬೇಕು! – ಸಂಪಾದಕರು)

ಭಾರತ ಮತ್ತು ನೇಪಾಳದ ನಡುವೆ ಲಿಪುಲೇಖ್, ಕಾಲಾಪಾನಿ ಮತ್ತು ಲಿಂಪಿಯಾಧುರಾ ಪ್ರದೇಶಗಳ ಕುರಿತು ದೀರ್ಘಕಾಲದಿಂದ ಗಡಿ ವಿವಾದವಿದೆ. ನೇಪಾಳವು ಈ ಪ್ರದೇಶಗಳ ಮೇಲೆ ತನ್ನ ಹಕ್ಕನ್ನು ಪ್ರತಿಪಾದಿಸಿದರೆ, ಭಾರತವು ಅವುಗಳನ್ನು ತನ್ನದೇ ಭೂಭಾಗವೆಂದು ಪರಿಗಣಿಸುತ್ತದೆ.