
ಶ್ರೀನಗರ (ಜಮ್ಮು-ಕಾಶ್ಮೀರ) – ಪಾಕಿಸ್ತಾನಿ ಭಯೋತ್ಪಾದಕರಿಗೆ ಆಶ್ರಯ ಮತ್ತು ನೆರವು ನೀಡುತ್ತಿದ್ದ ಮಹಮ್ಮದ್ ರಫೀಕ್ ನಾಯಕ್ ಎಂಬಾತನನ್ನು ಜಮ್ಮು-ಕಾಶ್ಮೀರದ ಕಿಶ್ತವಾರ್ ಜಿಲ್ಲೆಯ ಛಾತ್ರೂ (ಛಾತರೂ) ದಿಂದ ಪೊಲೀಸರು ಬಂಧಿಸಿದ್ದಾರೆ. ಈತ ಮಹಮ್ಮದ್ ಕಲಾಸೋಯಿ ಭಾಗದ ಮಸೀದಿಯೊಂದರಲ್ಲಿ ಮೌಲ್ವಿ (ಇಸ್ಲಾಂನ ಧಾರ್ಮಿಕ ಮುಖಂಡ) ಯಾಗಿ ಕೆಲಸ ಮಾಡುತ್ತಿದ್ದನು. ಈತ ‘ಜೈಶ್-ಎ-ಮೊಹಮ್ಮದ್’ ಮತ್ತು ‘ಲಷ್ಕರ್-ಎ-ತೊಯ್ಬಾ’ದ ಕಮಾಂಡರ್ ಸೈಫುಲ್ಲಾನ ನೇತೃತ್ವದಲ್ಲಿದ್ದ ‘ಸೈಫುಲ್ಲಾ ಗ್ರೂಪ್’ನ ಕೆಲಸ ಕಾರ್ಯಗಳನ್ನು ನಿರ್ವಹಿಸುತ್ತಿದ್ದನು.
೧. ಕಿಶ್ತವಾರ್ ನ ಹಿರಿಯ ಪೊಲೀಸ್ ಅಧೀಕ್ಷಕ ನರೇಶ್ ಸಿಂಗ್ ಅವರು ನೀಡಿದ ಮಾಹಿತಿಯಂತೆ, ಆರೋಪಿ ಮಹಮ್ಮದ್ ರಫೀಕ್ ನಾಯಕ್ ಪಾಕಿಸ್ತಾನಿ ಭಯೋತ್ಪಾದಕ ಕಮಾಂಡರ್ ಸೈಫುಲ್ಲಾ ಮತ್ತು ಆತನ ಸಹಚರರಿಗೆ ಸುರಕ್ಷಿತ ಆಶ್ರಯ, ಆಹಾರ, ಅಗತ್ಯ ಸಾಮಗ್ರಿಗಳು ಮತ್ತು ಪರಸ್ಪರ ಸಮನ್ವಯಕ್ಕಾಗಿ ಸಹಾಯ ಮಾಡಿದ್ದನು.
೨. ಈ ಮೌಲ್ವಿಯ ಸಹಾಯದಿಂದಲೇ ಭಯೋತ್ಪಾದಕರು ಸುಮಾರು ಎರಡು ವರ್ಷಗಳ ಕಾಲ ಛಾತ್ರೂ ಕಾಡಿನಲ್ಲಿ ಅಡಗಿಕೊಂಡಿದ್ದರು. ಭದ್ರತಾ ಪಡೆಗಳು ಒಂದು ದೊಡ್ಡ ಕಾರ್ಯಾಚರಣೆ ನಡೆಸಿ ಸೈಫುಲ್ಲಾ ಮತ್ತು ಆತನ ಗುಂಪಿನ ೭ ಭಯೋತ್ಪಾದಕರನ್ನು ಚಕಮಕಿಯಲ್ಲಿ ಹೊಡೆದುರುಳಿಸಿದವು.
೩. ರಫೀಕ್ ನಾಯಕ್ ನ ಬಂಧನಕ್ಕೂ ಮುನ್ನ ಪೊಲೀಸರು ಇದೇ ಪ್ರಕರಣದಲ್ಲಿ ಮುನೀರ್ ಅಹಮದ್ ಮತ್ತು ಮಶ್ಕೂರ್ ಅಹಮದ್ ಎಂಬುವವರನ್ನು ಬಂಧಿಸಿದ್ದರು. ಇವರಿಬ್ಬರ ಮೇಲೆ ಭಯೋತ್ಪಾದಕ ಗುಂಪಿಗೆ ಸಾಮಗ್ರಿ ಮತ್ತು ಸಂಪರ್ಕ ಸಾಧನೆಗೆ ಸಂಬಂಧಿಸಿದ ನೆರವು ನೀಡಿದ ಆರೋಪವಿತ್ತು.
ಶ್ರೀರಾಮ ಮಂದಿರದಲ್ಲಿ ದೇಣಿಗೆ ಕಳುವಾಗುವುದು, ಸಮಾಜದ ನೈತಿಕ ಅಧಃಪತನದ ಪರಾಕಾಷ್ಠೆ! – ನ್ಯಾಯಮೂರ್ತಿ ಅತುಲ್ ಶ್ರೀಧರನ್, ಅಲಹಾಬಾದ್ ಹೈಕೋರ್ಟ್
ಲಾಠಿಚಾರ್ಜ್ನ ವೀಡಿಯೊಗಳನ್ನು ನೋಡಲು ನಮ್ಮ ಬಳಿ ಸಮಯವಿಲ್ಲ!
ರಾಜಸ್ಥಾನದಲ್ಲಿ ೧೯೯೬ ರಲ್ಲಿ ನಡೆದ ಬಾಂಬ್ ಸ್ಪೋಟ ಪ್ರಕರಣದ ತೀರ್ಪನ್ನು ರದ್ದುಗೊಳಿಸಿದ ಸರ್ವೋಚ್ಛ ನ್ಯಾಯಾಲಯ
ಸಂಸತ್ತಿನಲ್ಲಿ ವಿರೋಧ ಪಕ್ಷಗಳಿಂದ ಗಲಾಟೆ : ಎರಡೂ ಸದನಗಳ ಕಲಾಪ ಕೆಲವು ಗಂಟೆಗಳ ಕಾಲ ಮುಂದೂಡಿಕೆ : Adjournment of both houses
‘ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್’ ಸಂಸ್ಥೆಗೆ ಗ್ರಾಹಕನಿಗೆ ೫೦ ಸಾವಿರ ರೂಪಾಯಿ ನಷ್ಟ ಪರಿಹಾರ ನೀಡುವಂತೆ ಆದೇಶ : Hindustan Unilever Compensation
ಠಾಕೂರಬುವಾ ಸಮಾಧಿಯಲ್ಲಿ ಭಕ್ತಿಭಾವದ ಮಾವುಲಿ ರಿಂಗಣ : Mauli Palkhi Ringan