
ಢಾಕಾ (ಬಾಂಗ್ಲಾದೇಶ) – ಭಾರತದ ಗಡಿಗೆ ತೀರಾ ಹತ್ತಿರದಲ್ಲಿರುವ ಬಾಂಗ್ಲಾದೇಶದ ಸಿಲ್ಹಟ್‌ನಲ್ಲಿ ಅಮೆರಿಕದ ಸೈನ್ಯವು ಬಾಂಗ್ಲಾದೇಶದ ಸೇನೆಯೊಂದಿಗೆ ಜಂಟಿ ಸಮರಾಭ್ಯಾಸವನ್ನು ಪ್ರಾರಂಭಿಸಿದೆ. ಬಾಂಗ್ಲಾದೇಶ ಮತ್ತು ಅಮೆರಿಕವು ಕಾರ್ಯತಂತ್ರದ ಪಾಲುದಾರಿಕೆ ಮತ್ತು ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಸಹಕಾರವನ್ನು ಹೆಚ್ಚಿಸಲು ಈ ಜಂಟಿ ಮಿಲಿಟರಿ ಅಭ್ಯಾಸವನ್ನು ಪ್ರಾರಂಭಿಸಿವೆ ಎಂದು ಎರಡೂ ದೇಶಗಳು ತಿಳಿಸಿವೆ. ಬಾಂಗ್ಲಾದೇಶ ಸಶಸ್ತ್ರ ಪಡೆಗಳ ಜನಸಂಪರ್ಕ ವಿಭಾಗವು ನೀಡಿದ ಮಾಹಿತಿಯ ಪ್ರಕಾರ, ೧೩ ದಿನಗಳು ನಡೆಯುವ ಈ ಅಭ್ಯಾಸವು ಜುಲೈ ೧೯ ರಿಂದ ಪ್ರಾರಂಭವಾಗಿದ್ದು, ಜುಲೈ ೩೧ ರಂದು ಮುಕ್ತಾಯಗೊಳ್ಳಲಿದೆ. ಈ ಅಭ್ಯಾಸವು ಬಾಂಗ್ಲಾದೇಶ ಸೇನೆಯ ವಿಶೇಷ ಯುನಿಟ್ ‘ಪ್ಯಾರಾ ಕಮಾಂಡೋ ಬ್ರಿಗೇಡ್’ ಮೇಲ್ವಿಚಾರಣೆಯಲ್ಲಿ ನಡೆಯುತ್ತಿದೆ.
ಸಿಲ್ಹಟ್ ಭಾರತಕ್ಕೆ ಅತ್ಯಂತ ಸೂಕ್ಷ್ಮ ಪ್ರದೇಶ
ಸಿಲ್ಹಟ್ ಪ್ರದೇಶವು ಭಾರತದ ಈಶಾನ್ಯ ರಾಜ್ಯಗಳಾದ ಮುಖ್ಯವಾಗಿ ಮೇಘಾಲಯ ಮತ್ತು ಅಸ್ಸಾಂನ ಅಂತರರಾಷ್ಟ್ರೀಯ ಗಡಿಗೆ ತೀರಾ ಹೊಂದಿಕೊಂಡಿದೆ. ಇಂತಹ ಪರಿಸ್ಥಿತಿಯಲ್ಲಿ ಭಾರತದ ಗಡಿಯ ಬಳಿ ಅಮೆರಿಕನ್ ಸೈನ್ಯದ ಸಕ್ರಿಯತೆ ಮತ್ತು ವಿಶೇಷ ‘ಜಂಗಲ್ ಆಪರೇಷನ್ಸ್ ಟ್ರೇನಿಂಗ್’ ನಿಂದಾಗಿ ಭದ್ರತಾ ಸಂಸ್ಥೆಗಳು ಜಾಗರೂಕವಾಗಿವೆ. ಈಶಾನ್ಯ ಭಾರತದ ಭದ್ರತೆ ಮತ್ತು ಭೂ-ರಾಜಕೀಯ ಸ್ಥಿರತೆಯ ದೃಷ್ಟಿಯಿಂದ ಸಿಲ್ಹಟ್ ಅತ್ಯಂತ ಮಹತ್ವದ ಪ್ರದೇಶವಾಗಿದೆ.
ನೇಪಾಳದ ಹೊಸ ₹1 ನಾಣ್ಯದಿಂದ ವಿವಾದಿತ ನಕ್ಷೆ ತೆರವು : Nepal New Coin Map
‘ಭಾರತಕ್ಕೆ ಬಲವಂತವಾಗಿ ಜನರನ್ನು ನಮ್ಮ ದೇಶಕ್ಕೆ ಕಳುಹಿಸಲು ಬಿಡುವುದಿಲ್ಲ!’(ಅಂತೆ)
ರಷ್ಯಾದ ರಾಯಭಾರಿಯನ್ನು ಕರೆಸಿ ತೀವ್ರ ವಿರೋಧಿಸಿದ ಭಾರತ !
ರಷ್ಯಾ: ಕಳೆದ ೬ ತಿಂಗಳುಗಳಲ್ಲಿ ೪೪ ಟನ್ ಚಿನ್ನ ಮಾರಾಟ!
ಪಾಕಿಸ್ತಾನಕ್ಕೆ ನೀಡಲಾಗುವ ಆರ್ಥಿಕ ನೆರವು ಮತ್ತು ಪಾಕಿಸ್ತಾನಿಗಳಿಗೆ ನೀಡಲಾಗುವ ವೀಸಾವನ್ನು ತಡೆಹಿಡಿಯಬೇಕು!
೧೨ ವರ್ಷಗಳ ನಂತರ ಎಲ್ಲಾ ಆರೋಪಿಗಳನ್ನು ಪಾಕಿಸ್ತಾನದ ಸರ್ವೋಚ್ಚ ನ್ಯಾಯಾಲಯದಿಂದ ಖುಲಾಸೆ!