ಪ್ರಧಾನಿ ಮೋದಿ ಅವರ ನಿವಾಸದ ಹೊರಗೆ ಕಾಂಗ್ರೆಸ್ ಆಂದೋಲನ : Delhi Congress Protest

ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ವಾದ್ರಾ ಅವರ ಭಾಗಿ

ಪ್ರಧಾನ ಮಂತ್ರಿಯವರ ನಿವಾಸದ ಬಳಿ ಕಾಂಗ್ರೆಸ್ ನಾಯಕರು ಧರಣಿ ನಡೆಸುತ್ತಿದ್ದಾರೆ

ನವ ದೆಹಲಿ – ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ರಾಜೀನಾಮೆಗೆ ಆಗ್ರಹಿಸಿ ಕಾಂಗ್ರೆಸ್ ಪಕ್ಷವು ಪ್ರಧಾನಿಗಳ ನಿವಾಸದ ಬಳಿ ಧರಣಿ ಆಂದೋಲನ ನಡೆಸಿತು. ಈ ವೇಳೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ವಾದ್ರಾ, ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಕಾಂಗ್ರೆಸ್ ನಾಯಕರು ಉಪಸ್ಥಿತರಿದ್ದರು. ವಿಶೇಷವೆಂದರೆ ಇದು ಭದ್ರತೆಯ ದೃಷ್ಟಿಯಿಂದ ಸೂಕ್ಷ್ಮ ಪ್ರದೇಶವಾಗಿರುವುದರಿಂದ ಅಲ್ಲಿ ಆಂದೋಲನಗಳಿಗೆ ಅನುಮತಿ ನೀಡಲಾಗುವುದಿಲ್ಲ. ಆದ್ದರಿಂದ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರನ್ನು ಬಡಿದೆಬ್ಬಿಸಲು ಪೊಲೀಸರು ಬಂದರು; ಆದರೆ ಕಾಂಗ್ರೆಸ್ ಕಾರ್ಯಕರ್ತರು ಅಲ್ಲೇ ನಿಂತುಕೊಂಡರು. ಕಾಂಗ್ರೆಸ್ ಯಾರಿಗೂ ತಿಳಿಸದೆ ಅತ್ಯಂತ ರಹಸ್ಯವಾಗಿ ಈ ಆಂದೋಲನಕ್ಕೆ ಸಿದ್ಧತೆ ನಡೆಸಿತ್ತು. ಈ ಅನಿರೀಕ್ಷಿತ ಆಂದೋಲನದ ಮೇಲೆ ಕ್ರಮ ಕೈಗೊಂಡ ಪೊಲೀಸರು ಚರಣ್‌ಜಿತ್ ಸಿಂಗ್ ಚನ್ನಿ ಸೇರಿದಂತೆ ಅನೇಕ ನಾಯಕರನ್ನು ವಶಕ್ಕೆ ತೆಗೆದುಕೊಂಡರು. ಆದರೂ ಇಲ್ಲಿ ಆಂದೋಲನ ಮುಂದುವರಿದಿತ್ತು.

ಜಂತರ್‌ಮಂತರ್‌ನಲ್ಲಿ ‘ಕಾಕ್ರೋಚ್ ಜನತಾ ಪಾರ್ಟಿ’ಯ ಆಂದೋಲನ ಮುಂದುವರಿದಿದೆ

ಜಂತರ್‌ಮಂತರ್‌ನಲ್ಲಿ ‘ಕಾಕ್ರೋಚ್ ಜನತಾ ಪಾರ್ಟಿ’ಯ ಆಂದೋಲನವು ಜುಲೈ 21 ರಂದು 32 ನೇ ದಿನವೂ ನಡೆಯಿತು. ಮಧ್ಯಾಹ್ನ 12 ಗಂಟೆಯವರೆಗೆ ಸಾವಿರಾರು ಪ್ರತಿಭಟನಾಕಾರರು ಆಂದೋಲನ ಸ್ಥಳಕ್ಕೆ ತಲುಪಿದ್ದರು. ಬೆಳಿಗ್ಗೆ ಭದ್ರತೆ ಒದಗಿಸಲು ಪೊಲೀಸರು ಬಂದಾಗ ಪ್ರತಿಭಟನಾಕಾರರು ‘ದೆಹಲಿ ಪೊಲೀಸ್ ಮುರ್ದಾಬಾದ್!’ ಎಂದು ಘೋಷಣೆ ಕೂಗಿದರು. ಪೊಲೀಸರು ಜುಲೈ 20 ರಂದು ಸಂಜೆ ಪ್ರತಿಭಟನಾಕಾರರನ್ನು ಜಂತರ್‌ಮಂತರ್‌ನಿಂದ ಬಡಿದೆಬ್ಬಿಸಿದ್ದರು; ಆದರೆ ಅವರು ತಡರಾತ್ರಿ ಮತ್ತೆ ಒಂದೆಡೆ ಸೇರಿದರು.

‘ಕಾಕ್ರೋಚ್ ಜನತಾ ಪಾರ್ಟಿ’ಯ ಸಂಸ್ಥಾಪಕ ಅಭಿಜಿತ್ ದೀಪ್ಕೆ ಮಾತನಾಡಿ, ನಾವು ಇಂದು ಸಂಸತ್ತಿನ ಮೇಲೆ ಮೆರವಣಿಗೆ ನಡೆಸುವುದಿಲ್ಲ; ಏಕೆಂದರೆ ಈ ಸರಕಾರ ಮತ್ತು ಪೊಲೀಸರು ವಿದ್ಯಾರ್ಥಿಗಳ ರಕ್ತ ಹರಿಸಿದ್ದಾರೆ. ಅವರಿಗೆ ವಿದ್ಯಾರ್ಥಿಗಳ ಕಾಳಜಿ ಇಲ್ಲ; ಆದರೆ ನಮಗೆ ಇದೆ. (ವಿದ್ಯಾರ್ಥಿಗಳಿಗೆ ಪೊಲೀಸರ ಮತ್ತು ಸರಕಾರಿ ಆಸ್ತಿಯ ಕಾಳಜಿ ಇದೆಯೇ?, ಇದಕ್ಕೆ ದೀಪ್ಕೆ ಏಕೆ ಉತ್ತರಿಸುತ್ತಿಲ್ಲ? – ಸಂಪಾದಕರು)

ಸೋನಮ್ ವಾಂಗ್‌ಚುಕ್ ಅವರನ್ನು ಬೇರೆ ಆಸ್ಪತ್ರೆಗೆ ಸ್ಥಳಾಂತರಿಸಲು ನ್ಯಾಯಾಲಯದ ಆದೇಶ

ದೆಹಲಿ ಹೈಕೋರ್ಟ್ ಸೋನಮ್ ವಾಂಗ್‌ಚುಕ್ ಅವರನ್ನು ಸಫ್ದರಜಂಗ್ ಆಸ್ಪತ್ರೆಯಿಂದ ಮೇದಾಂತ ಆಸ್ಪತ್ರೆಗೆ ಸ್ಥಳಾಂತರಿಸುವಂತೆ ಆದೇಶಿಸಿತು. ಅವರ ಚಿಕಿತ್ಸೆಗಾಗಿ ಮೇದಾಂತ ವೈದ್ಯರ ಪ್ಯಾನೆಲ್ ಅನ್ನು ಸಿದ್ಧಪಡಿಸುತ್ತದೆ ಎಂದು ನ್ಯಾಯಾಲಯ ತಿಳಿಸಿತು. ವಾಂಗ್‌ಚುಕ್ ಅವರ ಪತ್ನಿ ಗೀತಾಂಜಲಿ ಆಂಗ್ಮೋ ಸಲ್ಲಿಸಿದ ಅರ್ಜಿಯ ನಂತರ ನ್ಯಾಯಾಲಯ ಈ ಆದೇಶ ನೀಡಿತು. ವಾಂಗ್‌ಚುಕ್ 24 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಜುಲೈ 20 ರಂದು ಅವರು, ಪೊಲೀಸರ ಕ್ರೌರ್ಯವನ್ನು ನೋಡಿದ ನಂತರ ನಾನು ನನ್ನ ಉಪವಾಸವನ್ನು ಮುಂದುವರಿಸುತ್ತೇನೆ ಎಂದಿದ್ದರು. (ಪ್ರತಿಭಟನಾಕಾರರು ನಡೆಸಿದ ಹಿಂಸಾಚಾರದಲ್ಲಿ 115 ಕ್ಕಿಂತ ಹೆಚ್ಚು ಪೊಲೀಸರು ಗಾಯಗೊಂಡಿದ್ದಾರೆ, ಪೊಲೀಸರ ಮತ್ತು ಖಾಸಗಿ ವಾಹನಗಳ ಧ್ವಂಸಗೊಳಿಸಲಾಗಿದೆ, ಇದು ಕ್ರೌರ್ಯವಲ್ಲವೇ? ಅದು ಗಾಂಧಿಗಿರಿ ಎಂದು ವಾಂಗ್‌ಚುಕ್ ಭಾವಿಸುತ್ತಾರೆಯೇ? – ಸಂಪಾದಕರು)

ಸಂಪಾದಕೀಯ ನಿಲುವು

ಪ್ರಧಾನಿಗಳ ನಿವಾಸವು ಅತ್ಯಂತ ಸೂಕ್ಷ್ಮ ಪ್ರದೇಶವಾಗಿದ್ದು, ಈ ಸ್ಥಳದಲ್ಲಿ ಯಾವುದೇ ಆಂದೋಲನ ಮಾಡಲು ಬರುವುದಿಲ್ಲ ಎಂಬುದು ತಿಳಿದಿದ್ದರೂ, ಕಾಂಗ್ರೆಸಿಗರು ಆಂದೋಲನ ನಡೆಸಿ ಅದು ಸಂವಿಧಾನ ವಿರೋಧಿಯಾಗಿದೆ ಎಂದು ತೋರಿಸಿಕೊಟ್ಟಿದ್ದಾರೆ!