ಸನಾತನದ ಪ್ರೇರಣಾ ಸ್ಥಾನ ಪ.ಪೂ. ಭಕ್ತರಾಜ ಮಹಾರಾಜರ ಸುಪುತ್ರ ಶ್ರೀ. ರವಿ ಕಸರೇಕರ ಅವರ ವಂದನೀಯ ಉಪಸ್ಥಿತಿ

ರಾಮನಾಥಿ (ಗೋವಾ) – ಮರಾಠಿ ಚಲನಚಿತ್ರರಂಗದ ಪ್ರಸಿದ್ಧ ನಟ ಶ್ರೀ. ಚಿನ್ಮಯ ಉದಗೀರಕರ್ ಮತ್ತು ನಟಿ ಸೌ. ಮೋಹಿನಿ ಪೋತದಾರ್ ಅವರು ಇತ್ತೀಚೆಗೆ ಸನಾತನದ ರಾಮನಾಥಿ (ಗೋವಾ)ಯಲ್ಲಿನ ಆಶ್ರಮಕ್ಕೆ ಸೌಹಾರ್ದಯುತ ಭೇಟಿ ನೀಡಿದರು. ಈ ಸಮಯದಲ್ಲಿ ಸನಾತನದ ಪ್ರೇರಣಾಸ್ಥಾನ ಪ.ಪೂ. ಭಕ್ತರಾಜ ಮಹಾರಾಜರ ಸುಪುತ್ರ ಶ್ರೀ. ರವಿ ಕಸರೇಕರ್ ಅವರ ವಂದನೀಯ ಉಪಸ್ಥಿತಿ ಲಭಿಸಿತು. ಆಶ್ರಮದಲ್ಲಿ ನಡೆಯುತ್ತಿರುವ ರಾಷ್ಟ್ರ ಮತ್ತು ಧರ್ಮದ ಪ್ರಸಾರ ಕಾರ್ಯದ ಕುರಿತು ‘ಸನಾತನ ಪ್ರಭಾತ’ ಮಾಧ್ಯಮ ಸಮೂಹದ ಉಪಸಂಪಾದಕರಾದ ಶ್ರೀ. ವಿಕ್ರಮ ಡೊಂಗರೆ ಅವರು ಅವರಿಗೆ ಮಾಹಿತಿ ನೀಡಿದರು. ಸುಶ್ರೀ ಮಿಲ್ಕಿ ಅಗರವಾಲ್, ಸುಶ್ರೀ ತೇಜಲ ಪಾತ್ರೀಕರ ಮತ್ತು ಸೌ. ಶುಭಾಂಗಿ ಶೇಳಕೆ ಅವರು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ವತಿಯಿಂದ ನಡೆಯುತ್ತಿರುವ ಸಂಗೀತ ಕ್ಷೇತ್ರ ಹಾಗೂ ಆಧ್ಯಾತ್ಮಿಕ ಸಂಶೋಧನಾ ಕಾರ್ಯದ ಕುರಿತು ಅವರಿಗೆ ವಿವರವಾಗಿ ಮಾಹಿತಿ ನೀಡಿದರು. ಅವರು ಅತ್ಯಂತ ಜಿಜ್ಞಾಸೆಯಿಂದ ಕಾರ್ಯವನ್ನು ತಿಳಿದುಕೊಂಡರು.
Blessed moments at Sanatan Sanstha Ramnathi Ashram, Goa. 🙏
P. P. Bhaktaraj Maharaj's younger son, Ravi Kasarekar Ji, renowned Marathi actor Chinmay Udgirkar Ji, and actress Mohini Potdar Ji visited the Sanatan Sanstha Ramnathi Ashram in #Goa and experienced its serene,… pic.twitter.com/rd1PVNZ1fJ
— Sanatan Sanstha (@SanatanSanstha) July 22, 2026
ಈ ಸಮಯದಲ್ಲಿ ಶ್ರೀ. ಉದಗೀರಕರ ಅವರು ಮಾತನಾಡಿ, “ಇಂದು ಸಮಾಜಕ್ಕೆ ಮಾರ್ಗದರ್ಶನದ ಅಗತ್ಯವಿದೆ. ಆ ದೃಷ್ಟಿಯಿಂದ ನೀವು ಮಾಡುತ್ತಿರುವ ಕಾರ್ಯ ಅತ್ಯಂತ ಮೌಲ್ಯಯುತವಾಗಿದೆ. ಮುಂದಿನ ೧೦ ವರ್ಷಗಳಲ್ಲಿ ಸಮಾಜಕ್ಕೆ ನಾವು ಏನನ್ನು ನೀಡಬೇಕು?, ಎಂಬ ಮಾರ್ಗದರ್ಶನ ನೀಡುವ ನೀತಿಯು ನಿಶ್ಚಯವಾಗಬೇಕು. ಇಂದು ಬರವಣಿಗೆಯ ಕ್ಷೇತ್ರದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುವ ಅತೀ ಕಡಿಮೆ ಜನರಿದ್ದಾರೆ. ಈ ದೃಷ್ಟಿಯಿಂದ ನಾವು ಯೋಜನೆಯನ್ನು ರೂಪಿಸುವುದು ಕಾಲದ ಅಗತ್ಯವಾಗಿದೆ” ಎಂದರು.
ಸೌ. ಪೋತದಾರ ಅವರಿಗೆ ಆಶ್ರಮವನ್ನು ವೀಕ್ಷಿಸುವಾಗ ವಿವಿಧ ಅನುಭೂತಿಗಳು ಬಂದವು ಹಾಗೂ ತಾವು ಮಧ್ಯೆ ಮಧ್ಯೆ ಧ್ಯಾನಾವಸ್ಥೆಯನ್ನು ಅನುಭವಿಸಿದ್ದಾಗಿ ಅವರು ಹೇಳಿದರು.

ಆಶ್ರಮವನ್ನು ವೀಕ್ಷಿಸಿದ ನಂತರ ಸನಾತನ ಧರ್ಮದ ಹಿತಕ್ಕಾಗಿ ಮಾತ್ರ ಕಾರ್ಯನಿರ್ವಹಿಸಲು ನಾನು ನಿರ್ಧರಿಸಿದೆ! – ನಟ ಚಿನ್ಮಯ ಉದಗೀರಕರ
ಈ ಸಂದರ್ಭದಲ್ಲಿ ಶ್ರೀ. ಉದಗೀರಕರ ಅವರು ಮಾತನಾಡಿ, ಆಶ್ರಮಕ್ಕೆ ಬಂದ ಮೇಲೆ ನನಗೆ ಅರಿವಾಯಿತು ಎಂದರೆ, ನಾನು ಇದುವರೆಗೆ ಮೊದಲು ಸಾಧಕ ಮತ್ತು ಉಪಾಸಕನಾಗಿದ್ದೆ ಮತ್ತು ನಂತರ ನಟನಾದೆ. ಇನ್ನು ಮುಂದೆ ನನಗೆ ಸನಾತನ ಧರ್ಮದ ಹಿತಕ್ಕಾಗಿ ಮಾತ್ರ ಕಾರ್ಯನಿರ್ವಹಿಸಬೇಕಾಗಿದೆ. ಇದರ ಬಗ್ಗೆ ನಾನು ನಿರ್ಧರಿಸಿದ್ದೇನೆ ಎಂದರು. ಸನಾತನ ಆಶ್ರಮದ ಕುರಿತು ಮಾತನಾಡುತ್ತಾ ಅವರು, ಭಾರತದಲ್ಲಿ ಅನೇಕ ಆಶ್ರಮಗಳಿವೆ, ಆದರೆ ಇಂತಹ ಆಶ್ರಮವನ್ನು ನಾನು ನೋಡಿಲ್ಲ. ಇಲ್ಲಿನ ಮಹತ್ವವೆಂದರೆ ಇಲ್ಲಿ ‘ತನ್ನನ್ನು ತಾನು ಹೇಗೆ ಸ್ವೀಕರಿಸಿಕೊಳ್ಳಬೇಕು’, ‘ತನ್ನ ಮೇಲೆ ಪ್ರಯೋಗಗಳನ್ನು ಹೇಗೆ ಮಾಡಿಕೊಳ್ಳಬೇಕು’ ಎಂಬುದು ಇಲ್ಲಿ ಕಲಿಯಲು ಸಿಗುತ್ತದೆ. ಇಲ್ಲಿ ಸೋಲಿನ ಪ್ರಶ್ನೆಯಿಲ್ಲ, ಬದಲಿಗೆ (ಸಾಧನೆಗಾಗಿ) ಪ್ರಯತ್ನಿಸುತ್ತಲೇ ಇರಬೇಕು. ಇಲ್ಲಿನ ಸಾಧಕರು ಸ್ವತಃ ಸಿದ್ಧರಾಗುತ್ತಿದ್ದಾರೆ ಮತ್ತು ಇತರರನ್ನೂ ಸಿದ್ಧಗೊಳಿಸುತ್ತಿದ್ದಾರೆ. ಭಾರತದಾದ್ಯಂತ ಇಂತಹ ಕಾರ್ಯ ಎಲ್ಲೂ ಇಲ್ಲ. ನಾನು ಪದಗಳಾಚೆಗಿನ ಅನುಭೂತಿಯನ್ನು ಪಡೆಯುತ್ತಿದ್ದೇನೆ ಎಂದರು.
ಅವರು ಮಾತು ಮುಂದುವರೆಸಿ, ಇಂದು ಸಮಾಜಕ್ಕೆ ದಿಕ್ಕು ತೋರಿಸುವ ಅವಶ್ಯಕತೆಯಿದೆ. ಆ ದೃಷ್ಟಿಯಿಂದ ನಾವು ಮಾಡುತ್ತಿರುವ ಕಾರ್ಯ ಅತ್ಯಂತ ಅಮೂಲ್ಯವಾಗಿದೆ. ಮುಂದಿನ 10 ವರ್ಷಗಳಲ್ಲಿ ಸಮಾಜಕ್ಕೆ ನಾವು ಏನು ನೀಡಬೇಕು?, ಇದರ ದಿಕ್ಕು ಮತ್ತು ಧೋರಣೆ ನಿಗದಿಯಾಗಬೇಕು. ಇಂದು ಬರವಣಿಗೆಯ ಕ್ಷೇತ್ರದಲ್ಲಿ ಉತ್ತಮ ಕಾರ್ಯ ಮಾಡುವವರು ಅತ್ಯಂತ ಕಡಿಮೆ ಜನ ಇದ್ದಾರೆ. ಈ ದೃಷ್ಟಿಯಿಂದ ನಾವು ಯೋಜಿಸುವುದು ಕಾಲದ ಅವಶ್ಯಕತೆಯಾಗಿದೆ ಎಂದರು.
ಸನಾತನ ಆಶ್ರಮ ಬಹಳ ಅದ್ಭುತ! – ನಟಿ ಮೋಹಿನಿ ಪೋತದಾರ
ಈ ವೇಳೆ ನಟಿ ಸೌ. ಪೋತದಾರ ಅವರು ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದರು. ಅವರು, ಸನಾತನ ಆಶ್ರಮ ಬಹಳ ಅದ್ಭುತವಾಗಿದೆ. ನನಗೆ ಮನೆಗೆ ಹೋಗಲು ಸ್ವಲ್ಪವೂ ಇಷ್ಟವಿಲ್ಲ. ಇಲ್ಲಿಯೇ ಇರಬೇಕೆನಿಸುತ್ತದೆ. ನಾನು ಇಲ್ಲಿಗೆ ಮತ್ತೆ ಬರುತ್ತೇನೆ ಎಂದರು.
ನಟಿ ಮೋಹಿನಿ ಪೋತದಾರ ಅವರ ಸಂಕ್ಷಿಪ್ತ ಪರಿಚಯ!ನಟಿ ಸೌ. ಮೋಹಿನಿ ಪೋತದಾರ ಅವರು ಮೂಲತಃ ನಾಸಿಕ್‌ನವರು. ಅವರು ‘ಕರ್ತವ್ಯ’, ‘ಅಶಿ ಹೀ ಭಾವಬೀಜ’, ‘ಜಗತ್ ಜನನಿ ಶ್ರೀ ಮಹಾಲಕ್ಷ್ಮಿ’, ‘ರಘುಪತಿ ರಾಘವ ರಾಜಾರಾಮ’, ‘ಸಂಭಾಜಿ 1689 (ಛತ್ರಪತಿ ಸಂಭಾಜಿ)’ ಮುಂತಾದ ಜನಪ್ರಿಯ ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ನಟಿಯಾಗಿರುವುದರ ಜೊತೆಗೆ ಅವರು ‘ಆರಾ ಹೀಲರ್’ ಹಾಗೂ ಕಲಾವಿದರೂ ಆಗಿದ್ದಾರೆ. ಅವರಿಗೆ ಅಭಿನಯದ ಜೊತೆಗೆ ಗಾಯನ, ನೃತ್ಯ, ಚಿತ್ರಕಲೆ ಮುಂತಾದ ಅನೇಕ ಕಲೆಗಳು ತಿಳಿದಿವೆ. ಹಾಗೆಯೇ ಅವರು ಆಧ್ಯಾತ್ಮಿಕ ಸಾಧನೆಯನ್ನೂ ಮಾಡುತ್ತಾರೆ. |
ನಟ ಚಿನ್ಮಯ ಉದಗೀರಕರ ಅವರ ಸಂಕ್ಷಿಪ್ತ ಪರಿಚಯ!ನಟ ಮತ್ತು ಚಲನಚಿತ್ರ ನಿರ್ಮಾಪಕ ಶ್ರೀ. ಚಿನ್ಮಯ ಉದಗೀರಕರ ಅವರು ಕೂಡ ಮೂಲತಃ ನಾಸಿಕ್‌ನವರು. ಅವರು ‘ನಂದಾ ಸೌಖ್ಯ ಭರೆ’, ‘ಸಖ್ಖೆ ಶೇಜಾರಿ’, ‘ಘಾಡಗೆ ಆ್ಯಂಡ್ ಸೂನ್’ ಮುಂತಾದ ದೂರದರ್ಶನದ ಅನೇಕ ಜನಪ್ರಿಯ ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. ಅವರು ಶಂಕರ ಮಹಾರಾಜರ ಚರಿತ್ರೆಯನ್ನು ಬಿಂಬಿಸುವ ‘ಯೋಗ ಯೋಗೇಶ್ವರ ಜಯ ಶಂಕರ’ ಚಲನಚಿತ್ರವನ್ನು ನಿರ್ಮಿಸಿದ್ದಾರೆ. ಪ್ರಸ್ತುತ ಅವರು ಆಧ್ಯಾತ್ಮಿಕ ನದಿಯಾಗಿರುವ ನರ್ಮದೆಯ ಕುರಿತಾದ ಚಲನಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಇದಕ್ಕಾಗಿ ಅವರಿಗೆ ಶ್ರೀ. ರವಿ ಕಸರೆಕರ್ ಅವರ ಅಮೂಲ್ಯ ಆಧ್ಯಾತ್ಮಿಕ ಮಾರ್ಗದರ್ಶನ ದೊರೆಯುತ್ತಿದೆ. ಶ್ರೀ. ಉದಗೀರಕರ ಅವರು ಸ್ವತಃ ಆಧ್ಯಾತ್ಮಿಕ ಸಾಧನೆಯನ್ನು ಮಾಡುತ್ತಾರೆ. |
‘ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್’ ಸಂಸ್ಥೆಗೆ ಗ್ರಾಹಕನಿಗೆ ೫೦ ಸಾವಿರ ರೂಪಾಯಿ ನಷ್ಟ ಪರಿಹಾರ ನೀಡುವಂತೆ ಆದೇಶ : Hindustan Unilever Compensation
‘ಮಾವುಲಿ-ಮಾವುಲಿ’ಯ ಭಕ್ತಿಮಯ ಜಯಘೋಷದೊಂದಿಗೆ ಮಾಳಶಿರಸ ತಾಲೂಕಿನ ಠಾಕೂರಬುವಾ ಸಮಾಧಿಯ ಬಳಿ ನೆರವೇರಿದ ಮಾವುಲಿ ಪಲ್ಲಕ್ಕಿಯ ಮೂರನೇ ಗೋಲಾಕಾರದ ರಿಂಗಣ! : Sant Dnyaneshwar
ಕ್ಷುಲ್ಲಕ ಕಾರಣಕ್ಕೆ ಮುಸಲ್ಮಾನರಿಂದ ಹಿಂದೂಗಳ ಮೇಲೆ ಭೀಕರ ಹಲ್ಲೆ : Sewri Mumbai Muslims Attack
ಛತ್ತೀಸ್ಗಢದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ವಾರಸ್ದಾರಿಯ ಸಂರಕ್ಷಣೆಗಾಗಿ ರಾಜ್ಯ ಸರಕಾರದಿಂದ ಸನಾತನ ಸಂಸ್ಥೆಗೆ ಬೆಂಬಲ ! ಮುಖ್ಯಮಂತ್ರಿ ವಿಷ್ಣುದೇವ ಸಾಯ
ಕೊಲೆ ಪ್ರಕರಣ ವಿರೋಧಿಸಿದವರ ವಿರುದ್ಧದ ಕೇಸ್ಗೆ ಹೈಕೋರ್ಟ್ ತಡೆ : Karnataka HC Stays Case
‘ನ್ಯಾಯಾಲಯವನ್ನು ಇದರಲ್ಲಿ ಎಳೆಯಬೇಡಿ’, ಎಂದು ಹೇಳುತ್ತ ತಕ್ಷಣದ ವಿಚಾರಣೆಗೆ ನ್ಯಾಯಾಲಯದ ನಿರಾಕರಣೆ