೯೦ ಗ್ರಾಮ್ ನ ‘ಸರ್ಫ್ ಎಕ್ಸೆಲ್’ ಪ್ಯಾಕೆಟ್ ನಲ್ಲಿ ಕೇವಲ ೭೦ ಗ್ರಾಂ ಪೌಡರ್ !

ಡೆಹ್ರಾಡೂನ್ (ಉತ್ತರಾಖಂಡ) – ‘ಉತ್ತರಾಖಂಡ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ’ವು ‘ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್’ ಸಂಸ್ಥೆಗೆ ಪ್ಯಾಕೆಟ್ ಮೇಲೆ ೯೦ ಗ್ರಾಂ ತೂಕವನ್ನು ಮುದ್ರಿಸಿ ವಾಸ್ತವವಾಗಿ ೭೦ ಗ್ರಾಂ ‘ಡಿಟರ್ಜೆಂಟ್ ಪೌಡರ್’ ಮಾರಾಟ ಮಾಡಿದ ಪ್ರಕರಣದಲ್ಲಿ ದೋಷಿ ಎಂದು ತೀರ್ಮಾನಿಸಿ ಗ್ರಾಹಕನಿಗೆ ೫೦ ಸಾವಿರ ರೂಪಾಯಿಗಳ ನಷ್ಟಪರಿಹಾರ ನೀಡುವಂತೆ ಆದೇಶಿಸಿದೆ.
ಸೆಪ್ಟೆಂಬರ್ ೨೦೨೦ ರಲ್ಲಿ ನೈನಿತಾಲ್ ಜಿಲ್ಲೆಯ ರಾಮನಗರದ ನಿವಾಸಿ ಜ್ಞಾನಚಂದ್ರ ಗರ್ಗ್ ಅವರು ೫೧೨ ರೂಪಾಯಿಗೆ ‘ಸರ್ಫ್ ಎಕ್ಸೆಲ್ ಇಡಬ್ಲ್ಯೂ’ನ ಒಂದು ಬಾಕ್ಸ್ ಖರೀದಿಸಿದ್ದರು. ಅವರು ಇದರಲ್ಲಿನ ಪ್ಯಾಕೆಟ್‌ಗಳ ತೂಕವನ್ನು ಪರಿಶೀಲಿಸಿದಾಗ, ಪ್ಯಾಕೆಟ್ ಮೇಲೆ ೯೦ ಗ್ರಾಂ ಎಂದು ಬರೆದಿದ್ದರೂ ವಾಸ್ತವವಾಗಿ ಅದರಲ್ಲಿ ೭೦ ಗ್ರಾಂ ಡಿಟರ್ಜೆಂಟ್ ಕಂಡುಬಂದಿದೆ. ಈ ವಂಚನೆಯ ವಿರುದ್ಧ ಅವರು ಮೊದಲು ಸಂಸ್ಥೆಗೆ ಕಾನೂನು ನೋಟಿಸ್ ಕಳುಹಿಸಿದರು ಮತ್ತು ನಂತರ ‘ನೈನಿತಾಲ್ ಜಿಲ್ಲಾ ಗ್ರಾಹಕ ವೇದಿಕೆ’ಗೆ ದೂರು ನೀಡಿ ೧ ಲಕ್ಷ ರೂಪಾಯಿ ಪರಿಹಾರಕ್ಕೆ ಆಗ್ರಹಿಸಿದರು. ಜಿಲ್ಲಾ ವೇದಿಕೆಯ ವಿಚಾರಣೆಯ ಸಮಯದಲ್ಲಿ ಸಂಸ್ಥೆಯ ವಕೀಲರ ಸಮ್ಮುಖದಲ್ಲೇ ಆ ಸೀಲ್ ಮಾಡಿದ ಪ್ಯಾಕೆಟ್ ಅನ್ನು ಎಲೆಕ್ಟ್ರಾನಿಕ್ ತೂಕದ ಯಂತ್ರದಲ್ಲಿ ತೂಗಿದಾಗ, ಅದರ ತೂಕ ೭೦ ಗ್ರಾಮ್ ಮಾತ್ರ ಇತ್ತು. ಈ ಕುರಿತು ಸಂಸ್ಥೆಯ ವಕೀಲರು ಯಾವುದೇ ಆಕ್ಷೇಪ ಎತ್ತಲು ಸಾಧ್ಯವಾಗಲಿಲ್ಲ.
‘ಮಾವುಲಿ-ಮಾವುಲಿ’ಯ ಭಕ್ತಿಮಯ ಜಯಘೋಷದೊಂದಿಗೆ ಮಾಳಶಿರಸ ತಾಲೂಕಿನ ಠಾಕೂರಬುವಾ ಸಮಾಧಿಯ ಬಳಿ ನೆರವೇರಿದ ಮಾವುಲಿ ಪಲ್ಲಕ್ಕಿಯ ಮೂರನೇ ಗೋಲಾಕಾರದ ರಿಂಗಣ! : Sant Dnyaneshwar
ಕ್ಷುಲ್ಲಕ ಕಾರಣಕ್ಕೆ ಮುಸಲ್ಮಾನರಿಂದ ಹಿಂದೂಗಳ ಮೇಲೆ ಭೀಕರ ಹಲ್ಲೆ : Sewri Mumbai Muslims Attack
ಪ್ರಸಿದ್ಧ ಚಲನಚಿತ್ರ ನಟ ಚಿನ್ಮಯ ಉದಗೀರಕರ ಮತ್ತು ನಟಿ ಮೋಹಿನಿ ಪೋತದಾರ ಅವರಿಂದ ಸನಾತನದ ಆಶ್ರಮಕ್ಕೆ ಸೌಹಾರ್ದಯುತ ಭೇಟಿ!
ಛತ್ತೀಸ್ಗಢದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ವಾರಸ್ದಾರಿಯ ಸಂರಕ್ಷಣೆಗಾಗಿ ರಾಜ್ಯ ಸರಕಾರದಿಂದ ಸನಾತನ ಸಂಸ್ಥೆಗೆ ಬೆಂಬಲ ! ಮುಖ್ಯಮಂತ್ರಿ ವಿಷ್ಣುದೇವ ಸಾಯ
ನೇಪಾಳದ ಹೊಸ ₹1 ನಾಣ್ಯದಿಂದ ವಿವಾದಿತ ನಕ್ಷೆ ತೆರವು : Nepal New Coin Map
ಕೊಲೆ ಪ್ರಕರಣ ವಿರೋಧಿಸಿದವರ ವಿರುದ್ಧದ ಕೇಸ್ಗೆ ಹೈಕೋರ್ಟ್ ತಡೆ : Karnataka HC Stays Case