‘ಪ್ರಳಯ ಬಂದರೂ, ಬೋಂಗಾ ತೆಗೆಯುವುದಿಲ್ಲ !’ (ಅಂತೆ) – ಮಾಲೆಗಾವನಲ್ಲಿನ ಮೌಲ್ವಿಗಳ ಪ್ರತಿಕ್ರಿಯೆ

‘ಅನಧಿಕೃತ ಬೊಂಗಾಗಳನ್ನು ಹಾಕುವಂತಿಲ್ಲ ಅದೇ ರೀತಿ ಕೇವಲ ೬ ರಿಂದ ೧೦ ಗಂಟೆಯ ನಡುವೆ ೭೫ ಡೆಸಿಬಲ್‌ಗಿಂತ ಕಡಿಮೆ ಧ್ವನಿಯಲ್ಲಿ ಬೋಂಗಾ ಹಾಕಬಹುದು’, ಎಂದು ನ್ಯಾಯಾಲಯ ತೀರ್ಪು ನೀಡಿದೆ. ಆದರೂ ಮೌಲ್ವಿಗಳು ದುರಹಂಕಾರದಿಂದ ಇಂತಹ ಹೇಳಿಕೆಗಳನ್ನು ನೀಡುತ್ತಾರೆ. ಇಂತಹ ಕಾನೂನು ದ್ರೋಹ ಮಾಡುವವರ ವಿರುದ್ಧ ಮೊದಲು ಕ್ರಮ ಕೈಗೊಳ್ಳಿ !

ಮಾಲೆಗಾಂವ್ – ಮೇ ೩ ರಂದು ಪ್ರಳಯ ಬಂದರೂ ಬೋಂಗಾಗಳನ್ನು ತೆಗೆಯುವುದಿಲ್ಲ. ಇದು ಗಲಭೆ ಎಬ್ಬಿಸುವ ಸಂಚಾಗಿದೆ. ಇಲ್ಲಿ ಸರ್ವಾಧಿಕಾರ ನಡೆಯುವುದಿಲ್ಲ. ರಾಜ್ಯವು ಕಾನೂನಿನಿಂದ ನಡೆಯುತ್ತದೆ. ಇವರು (ಮನಸೆಯ ಅಧ್ಯಕ್ಷ ರಾಜ್ ಠಾಕ್ರೆ) ಭಾಜಪದಂತೆ ವರ್ತಿಸುತ್ತಿದೆ.

ಯಾರ ಧರ್ಮದಲ್ಲೂ ಹಸ್ತಕ್ಷೇಪ ಮಾಡಬೇಡಿ, ಎಂದು ದುರಹಂಕಾರದಿಂದ ಮಾಲೆಗಾಂವ್‌ನಲ್ಲಿ ಮೌಲ್ವಿಗಳು (ಇಸ್ಲಾಂ ಧರ್ಮದ ಮುಖಂಡರು) ಮಾಧ್ಯಮಗಳಿಗೆ ಹೇಳಿದ್ದಾರೆ. ಏಪ್ರಿಲ್ ೧೨ ರಂದು, ಠಾಣೆಯಲ್ಲಿ ನಡೆದ ಸಭೆಯಲ್ಲಿ ರಾಜ್ ಠಾಕ್ರೆ ಮಸೀದಿಗಳ ಮೇಲಿನ ಬೊಂಗಾಗಳನ್ನು ಕಡಿಮೆ ಮಾಡಲು ಮೇ ೩ ರವರೆಗೆ ಕಾಲಮಿತಿಯನ್ನು ನೀಡಿದ್ದಾರೆ. ಆ ಹಿನ್ನೆಲೆಯಲ್ಲಿ ಅವರು ಮಾತನಾಡುತ್ತಿದ್ದರು.