ರಾಜಸ್ಥಾನದಲ್ಲಿ ೧೯೯೬ ರಲ್ಲಿ ನಡೆದ ಬಾಂಬ್ ಸ್ಪೋಟ ಪ್ರಕರಣದ ತೀರ್ಪನ್ನು ರದ್ದುಗೊಳಿಸಿದ ಸರ್ವೋಚ್ಛ ನ್ಯಾಯಾಲಯ

  • ಅಪರಾಧಿ ಅಬ್ದುಲ್ ಹಮೀದ್‌ನ ಗಲ್ಲು ಶಿಕ್ಷೆ ಮತ್ತು ದೋಷಾರೋಪಣೆ ರದ್ದು

  • ಮತ್ತೆ ನಡೆಯಲಿದೆ ಮರು ವಿಚಾರಣೆ

ಸರ್ವೋಚ್ಚ ನ್ಯಾಯಾಲಯ

ನವದೆಹಲಿ – ಸರ್ವೋಚ್ಛ ನ್ಯಾಯಾಲಯವು ೧೯೯೬ ರ ರಾಜಸ್ಥಾನದ ಸಮಲೇಟಿ ಬಳಿ ಬಸ್‌ನಲ್ಲಿ ನಡೆದ ಬಾಂಬ್ ಸ್ಪೋಟದ ಪ್ರಕರಣದಲ್ಲಿ ೨೦೧೯ ರಲ್ಲಿ ರಾಜಸ್ಥಾನ ಹೈಕೋರ್ಟ್‌ನಿಂದ ಅಪರಾಧಿ ಎಂದು ಸಾಬೀತಾಗಿದ್ದ ಡಾ. ಅಬ್ದುಲ್ ಹಮೀದ್‌ನ ಗಲ್ಲು ಶಿಕ್ಷೆ ಮತ್ತು ದೋಷಾರೋಪಣೆಯನ್ನು ರದ್ದುಗೊಳಿಸಿದೆ. ವಿಚಾರಣೆಯ ಸಮಯದಲ್ಲಿ ಅವರಿಗೆ ಸೂಕ್ತ ಕಾನೂನು ನೆರವು ಸಿಗಲಿಲ್ಲ, ಇದರಿಂದಾಗಿ ಅವರ ನಿಷ್ಪಕ್ಷಪಾತ ವಿಚಾರಣೆಯ ಮೂಲಭೂತ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ನ್ಯಾಯಾಲಯವು ಹೇಳಿದೆ.

 ವಿಶೇಷ ತ್ವರಿತ ವಿಚಾರಣೆ ನಡೆಸುವ ನ್ಯಾಯಾಲಯ (ಫಾಸ್ಟ್ ಟ್ರ್ಯಾಕ್ ಕೋರ್ಟ್) ಸ್ಥಾಪಿಸಲು ಆದೇಶ

ಸರ್ವೋಚ್ಛ ನ್ಯಾಯಾಲಯವು ಈಗ ರಾಜಸ್ಥಾನ ಹೈಕೋರ್ಟ್‌ಗೆ ಈ ಪ್ರಕರಣದ ವಿಚಾರಣೆಗಾಗಿ ವಿಶೇಷ ಫಾಸ್ಟ್ ಟ್ರ್ಯಾಕ್ ಕೋರ್ಟ್ ಸ್ಥಾಪಿಸುವಂತೆ ನಿರ್ದೇಶನ ನೀಡಿದೆ. ಈ ನ್ಯಾಯಾಲಯವು ಎಲ್ಲಾ ಸಾಕ್ಷ್ಯಗಳನ್ನು ಹೊಸದಾಗಿ ಮತ್ತು ಸ್ವತಂತ್ರವಾಗಿ ಮೌಲ್ಯಮಾಪನ ಮಾಡಿ ಮತ್ತೆ ವಿಚಾರಣೆ ನಡೆಸಲಿದೆ.

೧೯೯೬ ರಲ್ಲಿ ಉತ್ತರ ಪ್ರದೇಶದ ಆಗ್ರಾದಿಂದ ರಾಜಸ್ಥಾನದ ಬಿಕಾನೇರ್‌ಗೆ ಹೋಗುತ್ತಿದ್ದ ಬಸ್‌ನಲ್ಲಿ ರಾಜಸ್ಥಾನದ ಸಮಲೇಟಿ ಗ್ರಾಮದ ಬಳಿ ಬಾಂಬ್ ಸ್ಪೋಟವಾಗಿತ್ತು. ಈ ಸ್ಪೋಟದಲ್ಲಿ ೧೪ ಜನರು ಸಾವನ್ನಪ್ಪಿದ್ದರು ಮತ್ತು ೩೭ ಜನರು ಗಾಯಗೊಂಡಿದ್ದರು.

ಸಂಪಾದಕೀಯ ನಿಲುವು

ತಲೆಕೆಳಗಾಗಿಸುವ ನ್ಯಾಯ!