‘ಆಕ್ರಮಣ ಮಾಡಿರುವ ಮುರ್ತಜಾ ಮನೋರೋಗಿಯಾಗಿದ್ದಾನೆ !’ (ಅಂತೆ)

ಶ್ರೀ ಗೋರಖನಾಥ ದೇವಸ್ಥಾನದ ಮೇಲಿನ ಆಕ್ರಮಣದ ಪ್ರಕರಣ

ಸಮಾಜವಾದಿ ಪಕ್ಷದ ಅಧ್ಯಕ್ಷರಾದ ಅಖಿಲೇಶ ಯಾದವರವರ ಮೂರ್ಖತೆ

ಸಮಾಜವಾದಿ ಪಕ್ಷವು ಜಿಹಾದಿ ಭಯೋತ್ಪಾದಕರನ್ನು ಬೆಂಬಲಿಸುವ ಪಕ್ಷವಾಗಿದೆ, ಇದು ಆಗಾಗ ಸ್ಪಷ್ಟವಾಗಿದೆ. ಇದೇ ಪಕ್ಷದ ಅಧಿಕಾರದ ಸಮಯದಲ್ಲಿ ಕರಸೇವಕರನ್ನು ಗುಂಡಿಟ್ಟು ಕೊಂದು ಅವರ ಮೃತದೇಹಗಳಿಗೆ ದೊಡ್ಡ ಕಲ್ಲನ್ನು ಕಟ್ಟಿ ಸರಯೂ ನದಿಯಲ್ಲಿ ಎಸೆಯಲಾಗಿತ್ತು. ಈಗ ಉತ್ತರಪ್ರದೇಶ ಸರಕಾರವು ಇಂತಹ ಜಿಹಾದಿಗಳ ಪರವಹಿಸುವ ಪಕ್ಷಗಳ ಮೇಲೆಯೂ ಕಾರ್ಯಾಚರಣೆಯನ್ನು ಮಾಡುವ ಕಾನೂನು ಮಾಡಬೇಕಿದೆ !

ಲಕ್ಷ್ಮಣಪುರಿ (ಉತ್ತರಪ್ರದೇಶ) – ಉತ್ತರಪ್ರದೇಶದಲ್ಲಿನ ಗೋರಖಪುರದಲ್ಲಿನ ಶ್ರೀ ಗೋರಖನಾಥ ದೇವಸ್ಥಾನದ ಮೇಲೆ ಆಕ್ರಮಣ ಮಾಡಲು ಪ್ರಯತ್ನಿಸಿದ್ದ ಪ್ರಕರಣದಲ್ಲಿ ಬಂಧಿಸಲಾದ ಜಿಹಾದಿ ಅಹಮದ ಮುತರ್ಜಾ ಅಬ್ಬಾಸಿಯನ್ನು ಸಮಾಜವಾದಿ ಪಕ್ಷವು ರಕ್ಷಿಸಲು ಪ್ರಯತ್ನಿಸಿದೆ. ಸಮಾಜವಾದಿ ಪಕ್ಷವು ಮುರ್ತಜಾನನ್ನು ಮನೋರೋಗಿ ಎಂದು ನಿರ್ಧರಿಸಿದೆ.

ರಾಜ್ಯದ ಮಾಜಿ ಮುಖ್ಯಮಂತ್ರಿ ಮತ್ತು ಸಮಾಜವಾದಿ ಪಕ್ಷದ ಅಧ್ಯಕ್ಷರಾದ ಅಖಿಲೇಶ ಯಾದವರವರು, ಮುರ್ತಜಾನ ತಂದೆಯವರು ಅವನು ಮನೋರೋಗಿಯಾಗಿದ್ದಾನೆ ಎಂದು ಹೇಳಿದ್ದರು, ಎಂದು ಹೇಳಿದ್ದಾರೆ. ಆದುದರಿಂದ ಇಂತಹ ಮಾನಸಿಕ ರೋಗವಿರುವ ವ್ಯಕ್ತಿಯ ರೋಗದ ಬಗ್ಗೆಯೂ ಗಮನ ನೀಡುವುದು ಆವಶ್ಯಕವಾಗಿದೆ; ಆದರೆ ಭಾಜಪವು ಈ ಪ್ರಕರಣಕ್ಕೆ ಸುಳ್ಳು ರೂಪ ಕೊಡುತ್ತಿದೆ ಎಂದು ಹೇಳಿದರು. (ಮುರ್ತಜಾನಿಂದ ಇಬ್ಬರು ಪೊಲೀಸರ ಮೇಲೆ ಪ್ರಾಣಘಾತಕ ಹಲ್ಲೆಯಾಗಿದೆ, ಈ ಬಗ್ಗೆ ಅಖಿಲೇಶ ಯಾದವರು ಏಕೆ ಮಾತನಾಡುವುದಿಲ್ಲ ? ? ಸಂಪಾದಕರು)

ವಸ್ತುಸ್ಥಿತಿ ಏನಿದೆ ?

ಪೊಲೀಸರು ಮುರ್ತಜಾನ ಬಗ್ಗೆ ಮಾಡಿರುವ ಇಲ್ಲಿಯ ವರೆಗಿನ ವಿಚಾರಣೆಯಲ್ಲಿ ‘ಮುರ್ತಜಾಗೆ ಜಿಹಾದಿ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಬಂಧವಿತ್ತು, ಎಂಬುದು ಬಹಿರಂಗವಾಗಿದೆ. ಅವನು ಬಹಳ ಬುದ್ಧಿವಂತನಾಗಿದ್ದು ಭಯೋತ್ಪಾದಕ ಆಕ್ರಮಣ ಮಾಡಲು ಪ್ರಯತ್ನಿಸುತ್ತಿದ್ದನು. ಅವನಿಂದ ಜಪ್ತು ಮಾಡಲಾದ ಭ್ರಮಣ ಸಂಗಣಕದಲ್ಲಿ (ಲ್ಯಾಪಟಾಪ್) ಮತ್ತು ಭ್ರಮಣಭಾಷೆ(ಮೊಬೈಲ)ಯಲ್ಲಿ ದೊರೆತ ವಿಡಿಯೋದಲ್ಲಿ ಜಿಹಾದಿ ಭಯೋತ್ಪಾದಕರ ಆದರ್ಶವಾಗಿರುವ ಝಾಕಿರ ನಾಯಿಕರವರ ವಿಡಿಯೋ ಇತ್ತು. ಅವನು ‘ಲೋನ ವುಲ್ಫ ಅಟ್ಯಾಕ’ (ಒಬ್ಬನೇ ಮಾಡಬಹುದಾದ ಆಕ್ರಮಣ) ಇರುವ ವಿಡಿಯೋ ನೋಡುತ್ತಿದ್ದನು. ಪೊಲೀಸರು ಅವನಿಂದ ಒಂದು ‘ಎರ್‌ಗನ್’ ಜಪ್ತು ಮಾಡಿದ್ದಾರೆ. ಈ ಮೂಲಕ ಅವನು ಮನೆಯಲ್ಲಿಯೇ ಗುರಿಯಿಡುವ ಅಭ್ಯಾಸ ಮಾಡುತ್ತಿದ್ದನು.

ಮುರ್ತಜಾನಿಗೆ ಯಾವುದೇ ಮಾನಸಿಕ ರೋಗವಿಲ್ಲ ! ? ಮುರ್ತಜಾನ ಮೊದಲನೇ ಹೆಂಡತಿಯ ಸ್ಪಷ್ಟೀಕರಣ

ಮೊದಲನೇ ಹೆಂಡತಿಯನ್ನು ಹೊಡೆದಿರುವ ಪ್ರಕರಣದಿಂದ ಮುರ್ತಜಾನ ವಿಚ್ಛೇದನವಾಗಿತ್ತು. ಆತನ ಮೊದಲನೇ ಹೆಂಡತಿ ಸಲಮಾ ಅವನಿಗೆ ಯಾವುದೇ ಮಾನಸಿಕ ರೋಗವಿಲ್ಲ, ಎಂಬುದನ್ನು ಸ್ಪಷ್ಟಪಡಿಸಿದ್ದಾಳೆ.