
ಲಂಡನ್ – ಬ್ರಿಟನ್ ನ ನೂತನ ಪ್ರಧಾನಮಂತ್ರಿ ಆಂಡಿ ಬರ್ನ್‌ಹ್ಯಾಮ್ ಅವರು ಅಧಿಕಾರ ವಹಿಸಿಕೊಂಡ ನಂತರ ತಮ್ಮ ನೂತನ ಸಚಿವ ಸಂಪುಟ ರಚಿಸಿದ್ದಾರೆ. ಬರ್ನ್‌ಹ್ಯಾಮ್ ಅವರು ತಮ್ಮ ನೂತನ ಸಚಿವ ಸಂಪುಟದಲ್ಲಿ ಹಲವು ಹಳೆಯ ಸಚಿವರನ್ನು ಕಾಯ್ದುಕೊಂಡಿದ್ದಾರೆ. ಭಾರತೀಯ ಮೂಲದ ಕನಿಷ್ಕ ನಾರಾಯಣ ಮತ್ತು ಲಿಜಾ ನಂದಿ ನೂತನ ಸಚಿವರಾಗಿ ನೇಮಕವಾಗಿದ್ದಾರೆ. ಕನಿಷ್ಕ ನಾರಾಯಣ ಅವರನ್ನು ಕೃತಕ ಬುದ್ಧಿಮತ್ತೆ (ಎಐ) ಸಚಿವರನ್ನಾಗಿ ಮಾಡಲಾಗಿದ್ದು, ಲಿಜಾ ನಂದಿ ಅವರನ್ನು ಸಂಸ್ಕೃತಿ ಸಚಿವೆಯಾಗಿ ಮುಂದುವರಿಸಲಾಗಿದೆ.
Two Indian-origin MPs join PM Andy Burnham’s UK Cabinet! 🇬🇧🇮🇳
🔹 Kanishka Narayan (born in Muzaffarpur, Bihar) appointed as AI Minister.
🔹 Lisa Nandy (daughter of Kolkata-born Deepak Nandy) appointed as Culture Secretary.
A big moment for representation in British politics!… pic.twitter.com/zy1L6ju0wZ
— Sanatan Prabhat (@SanatanPrabhat) July 22, 2026
೧. ಕನಿಷ್ಕ ನಾರಾಯಣ ಅವರ ಜನನ ಬಿಹಾರದ ಮುಜಫ್ಫರ್ ಪುರದಲ್ಲಾಗಿತ್ತು. ೧೨ ವರ್ಷದವರಿದ್ದಾಗ ಅವರು ತಮ್ಮ ಕುಟುಂಬದೊಂದಿಗೆ ಬ್ರಿಟನ್ ನ ಕಾರ್ಡಿಫ್ ಗೆ ವಲಸೆ ಬಂದಿದ್ದರು.
೨. ರಾಜಕೀಯಕ್ಕೆ ಬರುವ ಮೊದಲು ಕನಿಷ್ಕ ನಾರಾಯಣ ತಂತ್ರಜ್ಞಾನ ಮತ್ತು ಹಣಕಾಸು ಕ್ಷೇತ್ರದಲ್ಲಿ ಕೆಲಸ ಮಾಡಿದ್ದರು. ೨೦೨೫ ರಲ್ಲಿ ಕೀರ್ ಸ್ಟಾರ್ಮರ್ ಸರಕಾರವು ಅವರನ್ನು ‘ಎಐ’ ಮತ್ತು ‘ಆನ್ ಲೈನ್’ ಭದ್ರತಾ ಸಚಿವರನ್ನಾಗಿ ಮಾಡಿತ್ತು.
೩. ಲಿಜಾ ನಂದಿ ಅವರನ್ನು ಆಂಡಿ ಬರ್ನ್‌ಹ್ಯಾಮ್ ಅವರು ತಮ್ಮ ನೂತನ ಸಚಿವ ಸಂಪುಟದಲ್ಲಿ ಸಂಸ್ಕೃತಿ ಸಚಿವೆ ಹುದ್ದೆಯಲ್ಲಿ ಕಾಯ್ದುಕೊಂಡಿದ್ದಾರೆ. ಲಿಜಾ ಅವರ ಜನನ ಮ್ಯಾಂಚೆಸ್ಟರ್ ನಲ್ಲಾಗಿತ್ತು. ಅವರ ತಂದೆ ದೀಪಕ್ ನಂದಿ ಕೊಲಕಾತಾದ ನಿವಾಸಿಯಾಗಿದ್ದರು, ಹಾಗೂ ಅವರ ತಾಯಿ ಲೂಯಿಸ್ ಬೈಯರ್ಸ್ ಬ್ರಿಟನ್ ನ ನಿವಾಸಿಯಾಗಿದ್ದಾರೆ.
ಅಮೆರಿಕ: ಧರ್ಮದತ್ತ ಒಲವು ತೋರುತ್ತಿರುವ ಜೆನ್-ಜ಼ಿ ಹುಡುಗರು!
ಅಮೆರಿಕದಲ್ಲಿ ಭಾರತ ವಿರೋಧಿ ಖಾಲಿಸ್ತಾನಿಗಳನ್ನು ಕೆಣಕಿದರೆ ಶಿಕ್ಷೆ!
ಸಂಸತ್ತಿನಲ್ಲಿ ವಿರೋಧ ಪಕ್ಷಗಳಿಂದ ಗಲಾಟೆ : ಎರಡೂ ಸದನಗಳ ಕಲಾಪ ಕೆಲವು ಗಂಟೆಗಳ ಕಾಲ ಮುಂದೂಡಿಕೆ : Adjournment of both houses
ಜೆನೆರಿಕ್ ಔಷಧಗಳ ಮೇಲೆ ಶೇ.೨೦೦ ರಷ್ಟು ಆಮದು ಸುಂಕ ! – ಟ್ರಂಪ್ ಅವರ ಘೋಷಣೆ : Tax on Indian Drugs
ನೇಪಾಳದ ಹೊಸ ₹1 ನಾಣ್ಯದಿಂದ ವಿವಾದಿತ ನಕ್ಷೆ ತೆರವು : Nepal New Coin Map
ಭಾರತದ ಬಾಂಗ್ಲಾದೇಶ ಗಡಿಯ ಸಮೀಪ ಅಮೆರಿಕದ ಸೈನಿಕರೊಂದಿಗೆ ಬಾಂಗ್ಲಾದೇಶ ಸೇನೆಯ ಜಂಟೀ ಸಮರಾಭ್ಯಾಸ