ಪಂಜಾಬಿನ ಮುಖ್ಯಮಂತ್ರಿ ಭಗವಂತ ಮಾನರವರ ಮೇಲೆ ಸಾರಾಯಿ ಕುಡಿದು ತಖ್ತ ಶ್ರೀ ದಮದಮಾ ಸಾಹಿಬಕ್ಕೆ ಭೇಟಿ ನೀಡಿರುವ ಆರೋಪ

ಚಂಡೀಗಢ (ಪಂಜಾಬ) – ಪಂಜಾಬಿನ ಮುಖ್ಯಮಂತ್ರಿ ಭಗವಂತ ಮಾನರವರ ಮೇಲೆ ಬೈಸಾಖಿಯ (ವೈಶಾಖ ಮಾಸದ ಮೊದಲನೇ ದಿನ ಉತ್ತರ ಭಾರತದಲ್ಲಿ ಆಚರಿಸಲಾಗುವ ಉತ್ಸವ) ದಿನ ಸರಾಯಿ ಕುಡಿದು ತಖ್ತ ಶ್ರೀ ದಮದಮಾ ಸಾಹಿಬಕ್ಕೆ ಹೋಗಿರುವ ಆರೋಪವನ್ನು ಹೊರಿಸಲಾಗಿದೆ. ಭಗವಂತ ಮಾನರವರು ಮದ್ಯದ ಮತ್ತಿನಲ್ಲಿರುವ ಅವಸ್ಥೆಯಲ್ಲಿ ತಖ್ತ ಶ್ರೀ ದಮದಮಾ ಸಾಹಿಬಕ್ಕೆ ಭೇಟಿ ನೀಡುವುದು ಸಿಖ್ಖ ಧರ್ಮದ ಆಚಾರಸಂಹಿತೆಯ ಉಲ್ಲಂಘನೆಯಾಗಿದೆ, ಎಂದು ಶಿರೋಮಣಿ ಗುರುದ್ವಾರಾ ಪ್ರಬಂಧಕ ಸಮಿತಿಯು ಹೇಳಿದೆ. ಸಮಿತಿಯು ಭಗವಂತ ಮಾನರವರಿಗೆ ತಪ್ಪನ್ನು ಒಪ್ಪಿಕೊಂಡು ಸಿಖ್ಖ ಸಮುದಾಯದ ಬಳಿ ಕ್ಷಮೆ ಕೇಳಲು ಹೇಳಿದೆ.

ಈ ಹಿಂದೆ ಅಕಾಲಿ ದಳದ ಪ್ರಮುಖರಾದ ಸುಖಬೀರ ಬಾದಲರವರು ಭಗವಂತ ಮಾನರವರ ಮೇಲೆ ಸಿಖ್ಖರ ಭಾವನೆಗಳನ್ನು ನೋಯಿಸಿರುವುದಾಗಿ ಆರೋಪ ಮಾಡಿದ್ದರು. ಭಗವಂತ ಮಾನರವರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸುವ ಬಗ್ಗೆಯೂ ಬಾದಲ ರವರು ಮನವಿ ಮಾಡಿದ್ದರು.

ಮುಖ್ಯಮಂತ್ರಿಗಳ ಮೇಲಿನ ಆರೋಪವು ನಿರಾಧಾರವಾಗಿದೆ – ಆಪ

ಅಕಾಲಿ ದಳದ ಪ್ರಮುಖರಾದ ಸುಖಬೀರ ಬಾದಲರವರು ಮುಖ್ಯಮಂತ್ರಿ ಭಗವಂತ ಮಾನರವರ ಮೇಲೆ ಮಾಡಿರುವ ಆರೋಪವನ್ನು ಆಮ್ ಆದಮಿ ಪಕ್ಷದ ಜ್ಯೇಷ್ಠ ನೇತಾರ ಹಾಗೂ ಪಕ್ಷದ ವಕ್ತಾರರಾದ ಮಲವಿಂದರ ಸಿಂಗ ಕಾಂಗರವರು ತಿರಸ್ಕರಿಸಿದ್ದಾರೆ. ಮುಖ್ಯಮಂತ್ರಿಗಳ ಮೇಲಿನ ಆರೋಪವು ನಿರಾಧಾರವಾಗಿರುವುದಾಗಿ ಅವರು ಹೇಳಿದ್ದಾರೆ.