ಪಾಕಿಸ್ತಾನದಲ್ಲಿ ಪೈಗಂಬರ ಅವರನ್ನು ಅವಮಾನಿಸಿದ ಆರೋಪದ ಮೇಲೆ ಶ್ರೀಲಂಕಾ ನಾಗರಿಕನ ಹತ್ಯೆ ಪ್ರಕರಣ
ನ್ಯಾಯಾಲಯವು ಕೇವಲ ೫ ತಿಂಗಳಲ್ಲಿ ೮೯ ಮಂದಿಯನ್ನು ತಪ್ಪಿತಸ್ಥರೆಂದು ನಿರ್ಧರಿಸಲಾಯಿತು !
ಇಸ್ಲಾಮಾಬಾದ (ಪಾಕಿಸ್ತಾನ) – ಮಹಮ್ಮದ ಪೈಗಂಬರ ಅವರನ್ನು ಅವಮಾನಸಿದ ಆರೋಪದ ಮೇಲೆ ಶ್ರೀಲಂಕಾದ ಪ್ರಜೆಯಾದ ಪ್ರಿಯಂತಾ ಕುಮಾರ ಅವರನ್ನು ಪಾಕಿಸ್ತಾನದ ಸಿಯಾಲಕೋಟ ನಗರದಲ್ಲಿ ಡಿಸೆಂಬರ ೩, ೨೦೨೧ ರಂದು ಜನಸಮೂಹವೊಂದು ಸಜೀವ ದಹನ ಮಾಡಿತ್ತು. ಪ್ರಕರಣದಲ್ಲಿ ನ್ಯಾಯಾಲಯವು ೮೯ ಜನರನ್ನು ತಪ್ಪಿತಸ್ಥೆರೆಂದು ತೀರ್ಪು ನೀಡಿದೆ. ಈ ಪೈಕಿ ೬ ಮಂದಿಗೆ ಗಲ್ಲು ಶಿಕ್ಷೆ ಹಾಗೂ ೭ ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಪ್ರಿಯಂತಾ ಕುಮಾರ ಇಲ್ಲಿನ ಕಾರ್ಖಾನೆಯೊಂದರಲ್ಲಿ ಅಧಿಕಾರಿಯಾಗಿದ್ದರು.
Pakistan: Death sentences over killing of Sri Lankan accused of blasphemy https://t.co/V45KOh7It0
— BBC Asia (@BBCNewsAsia) April 18, 2022
ಸಂಪಾದಕೀಯ ನಿಲುವುಪಾಕಿಸ್ತಾನದಲ್ಲಿನ ನ್ಯಾಯಾಲಯವು ಹತ್ಯೆಯ ಪ್ರಕರಣದಲ್ಲಿ ಕೇಲವ ೫ ತಿಂಗಳಲ್ಲಿ ತೀರ್ಪು ನೀಡುತ್ತಿದೆಯಾದರೇ, ಭಾರತದಲ್ಲೂ ಇದು ಸಂಭವಿಸುವ ಸಾಧ್ಯತೆಯಿದೆ. ಭಾರತ ಸರಕಾರ ಇದರತ್ತ ಗಮನಹರಿಸಬೇಕು ! |