ನಗರಗಳಲ್ಲಿ ಪ್ರತಿ ಕುಟುಂಬಕ್ಕೆ ಒಂದು ಹಸು ಅಥವಾ ಎಮ್ಮೆಯನ್ನು ಮಾತ್ರ ಸಾಕಲು ಅವಕಾಶ

ರಾಜಸ್ಥಾನದ ಕಾಂಗ್ರೆಸ್ ಸರಕಾರದ ತುಘಲಕ್ ಫರ್ಮಾನು

ವಾರ್ಷಿಕ ೧ ಸಾವಿರ ರೂಪಾಯಿ ಶುಲ್ಕ ಪಾವತಿಸಿ ಪರವಾನಗಿ ಪಡೆಯಬೇಕು

ಸಾರ್ವಜನಿಕ ಸ್ಥಳದಲ್ಲಿ ಹಸು ಅಥವಾ ಎಮ್ಮೆ ಕಂಡುಬಂದರೆ ೧೦ ಸಾವಿರ ರೂಪಾಯಿ ದಂಡ

ಇಂತಹ ಕಾನೂನು ಮಾಡುವ ಮೂಲಕ ಕಾಂಗ್ರೆಸ್ ಸರಕಾರ ಪಶುಸಂಗೋಪನೆಯ ಮೇಲೆ ನಿಷೇಧ ಹೇರಲು ಯತ್ನಿಸುತ್ತಿದೆ !

ಜೈಪುರ (ರಾಜಸ್ಥಾನ) – ರಾಜಸ್ಥಾನದ ಕಾಂಗ್ರೆಸ್ ಸರಕಾರವು ಪಶುಸಂಗೋಪನೆಗಾಗಿ ಹೊಸ ಕಾನೂನನ್ನು ಜಾರಿಗೆ ತಂದಿದೆ. ಅದರಂತೆ ನಗರ ಪ್ರದೇಶಗಳಲ್ಲಿ ಒಂದು ಕುಟುಂಬಕ್ಕೆ ಕೇವಲ ಒಂದು ಹಸು ಅಥವಾ ಎಮ್ಮೆ ಸಾಕಲು ಅವಕಾಶವಿದೆ. ಅಲ್ಲದೆ ಇದಕ್ಕಾಗಿ ಸರಕಾರಕ್ಕೆ ವಾರ್ಷಿಕ ೧೦೦೦ ರೂಪಾಯಿ ಶುಲ್ಕ ಪಾವತಿಸಿ ವಾರ್ಷಿಕ ಪರವಾನಗಿ ಪಡೆಯಬೇಕು. ರಾಜ್ಯದ ೨೧೩ ನಗರಗಳಲ್ಲಿ ಈ ನಿಯಮ ಅನ್ವಯವಾಗಲಿದೆ.

ಈ ಕಾನೂನು ಪ್ರಕಾರ ಖಾಲಿ ಜಾಗದಲ್ಲಿ ಹಸು ತಿರುಗಾಡಿದರೆ, ಮಾಲೀಕರು ೧೦ ಸಾವಿರ ದಂಡ ತೆತ್ತ ಬೇಕಾಗುತ್ತದೆ. ಪ್ರಾಣಿಗೆ ಪರವಾನಗಿ ನೀಡಿದ ನಂತರ, ಪ್ರಾಣಿಗಳ ಕಿವಿಗೆ ‘ಟ್ಯಾಗ್’ ಹಾಕಲಾಗುವುದು. ಇದು ಮಾಲೀಕರ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ ಇತ್ಯಾದಿಗಳನ್ನು ಒಳಗೊಂಡಿರುತ್ತದೆ. ಪ್ರತಿ ೧೦ ದಿನಗಳ ನಂತರ, ಪ್ರಾಣಿಗಳ ಸಗಣಿಯನ್ನು ನಗರದಿಂದ ಹೊರಗೆ ತೆಗೆದುಹಾಕಬೇಕಾಗುತ್ತದೆ. ಪ್ರಾಣಿಗಳನ್ನು ಇರಿಸುವ ಸ್ಥಳವನ್ನು ಸರಿಯಾಗಿ ಸ್ವಚ್ಛಗೊಳಿಸಬೇಕು. ಒಂದು ವೇಳೆ ಅಸ್ವಚ್ಛ ಇದ್ದರೆ ೫೦೦ ರೂಪಾಯಿ ದಂಡ ತೆತ್ತಬೇಕಾಗುತ್ತದೆ. ಈ ನಿಯಮಗಳನ್ನು ಉಲ್ಲಂಘಿಸಿದರೆ ೧ ತಿಂಗಳ ನೋಟಿಸ್ ನೀಡುವ ಮೂಲಕ ಪರವಾನಗಿಯನ್ನು ರದ್ದುಗೊಳಿಸಲಾಗುವುದು. ಅದರ ನಂತರ ಸಂಬಂಧಪಟ್ಟ ವ್ಯಕ್ತಿ ಮತ್ತೆ ಪ್ರಾಣಿಗಳನ್ನು ಸಾಕಲು ಸಾಧ್ಯವಾಗುವುದಿಲ್ಲ.