ದೇಶದಲ್ಲಿನ ೮ ನಗರಗಳಲ್ಲಿ ೨೦೦೫ರಿಂದ ೨೦೧೮ರ ಸಮಯದಲ್ಲಿ ವಾಯುಮಾಲಿನ್ಯದಿಂದಾಗಿ ೧ ಲಕ್ಷ ಜನರ ಮೃತ್ಯು !

ವಿಜ್ಞಾನವು ಮಾಡಿರುವ ಕಥಿತ ಪ್ರಗತಿಯ ಪರಿಣಾಮವೇ ಇದು !

ನವದೆಹಲಿ – ಒಂದು ಅಂತರಾಷ್ಟ್ರೀಯ ಅಧ್ಯಯನದ ಅನುಸಾರ ಭಾರತದಲ್ಲಿ ೨೦೦೫ ರಿಂದ ೨೦೧೮ರ ವರೆಗೆ ೮ ನಗರಗಳಲ್ಲಿ ವಾಯುಮಾಲಿನ್ಯದಿಂದಾಗಿ ೧ ಲಕ್ಷ ಜನರು ಅಕಾಲಿಕ ಮರಣವಾಗಿದೆ. ಅಮೇರಿಕಾದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಾದ ‘ನಾಸಾ’ ಮತ್ತು ಯುರೋಪಿನ ಬಾಹ್ಯಾಕಾಶ ವ್ಯವಸ್ಥೆಯಿಂದ ದೊರೆತ ಮಾಹಿತಿಯಿಂದಾಗಿ ಈ ಅಧ್ಯಯನವನ್ನು ಮಾಡಲಾಗಿದೆ. ಭಾರತದಲ್ಲಿನ ೮ ನಗರಗಳಲ್ಲಿ ಕೊಲ್ಕತಾ, ಕರ್ಣಾವತಿ, ಸೂರತ, ಮುಂಬೈ, ಪುಣೆ, ಭಾಗ್ಯನಗರ, ಬೆಂಗಳೂರು ಮತ್ತು ಚೆನ್ನೈ ಸೇರಿವೆ.