ಪಾಕಿಸ್ತಾನದ ಪ್ರಧಾನಿ ಶಾಹಬಾಝ ಶರೀಫರವರು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಬರೆದ ಪತ್ರದಿಂದ ಪಾಕಿಸ್ತಾನದಲ್ಲಿ ಅವರ ಮೇಲೆ ಟೀಕೆ

ನವ ದೆಹಲಿ – ಪಾಕಿಸ್ತಾನದ ಪ್ರಧಾನಿ ಶಾಹಬಾಜ ಶರೀಫರವರು ಏಪ್ರಿಲ ೧೭ರಂದು ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ ಶುಭಾಷಯ ನೀಡುವ ಕುರಿತು ಪತ್ರ ಬರೆದಿದ್ದರು. ‘ಎರಡೂ ದೇಶಗಳೂ ಶಾಂತಿಯುತವಾಗಿ ಜಮ್ಮೂ-ಕಾಶ್ಮೀರ ಹಾಗೂ ಇತರ ವಿವಾದಿತ ಅಂಶಗಳನ್ನು ಬಗೆಹರಿಸಬೇಕು’, ಎಂದು ಶರೀಫರವರು ಬರೆದಿರುವ ಪತ್ರದಲ್ಲಿ ಹೇಳಿದ್ದರು. ಅದಕ್ಕೆ ಶರೀಫರವರ ಮೇಲೆ ಪಾಕಿಸ್ತಾನದಲ್ಲಿ ಟೀಕಿಸಲಾಗುತ್ತಿದೆ. (ಇದರಿಂದ ಪಾಕಿಸ್ತಾನಕ್ಕೆ ಶಾಂತತೆ ಬೇಡವಾಗಿದೆ, ಎಂಬುದು ಸ್ಪಷ್ಟವಾಗುತ್ತದೆ ! – ಸಂಪಾದಕರು)

ಭಾರತದಲ್ಲಿ ಪಾಕಿಸ್ತಾನದ ರಾಯಭಾರಿಯ ಮಾಜಿ ಉಪಾಯುಕ್ತರಾದ ಅಬ್ದುಲ ಬಾಸಿತರವರು ‘ಶರೀಫರವರ ಪ್ರತಿಕ್ರಿಯೆ ದುರ್ಬಲವಾಗಿದೆ. ಭಾರತಕ್ಕೆ ಇನ್ನೂ ತೀಕ್ಷ್ಣವಾದ ಉತ್ತರ ನೀಡಬಹುದಾಗಿತ್ತು. ಕಾಶ್ಮೀರವು ಅಂಶವಾಗಿರದೆ ಅದು ವಿವಾದವಾಗಿದೆ. ನರೇಂದ್ರ ಮೋದಿಯವರು ತಮ್ಮ ಶುಭಾಷಯ ಸಂದೇಶದಲ್ಲಿ ಭಯೋತ್ಪಾದಕ ಅಂಶವನ್ನು ಮಂಡಿಸಿದ್ದರು; ಆದರೆ ಭಾರತ ಸಮರ್ಥನೆ ನೀಡುತ್ತಿರುವ ಕಾಶ್ಮೀರದಲ್ಲಿನ ಹಿಂಸಾಚಾರದ ಬಗ್ಗೆ ಏನು ? ಕಮಾಂಡರ ಕುಲಭೂಷಣ ಜಾಧವ ಅವರದ್ದೇನು ?’, ಎಂಬ ಪ್ರಶ್ನೆಗಳನ್ನು ಕೇಳಿದರು.