೧೦ನೇ ತರಗತಿಯವರೆಗೆ ‘ಹಿಂದಿ’ ವಿಷಯವನ್ನು ಕಡ್ಡಾಯಗೊಳಿಸಿದ್ದರಿಂದ ಈಶಾನ್ಯ ರಾಜ್ಯಗಳ ವಿರೋಧ !

ಸಂಸ್ಕೃತವು ಎಲ್ಲಾಭಾಷೆಗಳ ತಾಯಿ ಮತ್ತು ಸಮೃದ್ಧ ಭಾಷೆಯಾಗಿದೆ. ಆದ್ದರಿಂದ ಕೇಂದ್ರ ಸರಕಾರ ಈಗಲಾದರೂ ಭಾರತದಲ್ಲಿ ಸಂಸ್ಕೃತವನ್ನು ಕಡ್ಡಾಯಗೊಳಿಸುವ ಪ್ರಯತ್ನ ಮಾಡಬೇಕು ಎಂಬುದು ಭಾಷಾಪ್ರೇಮಿಗಳಿಗೆ ಅನಿಸುತ್ತದೆ !

ಗುವಾಹಟಿ (ಆಸ್ಸಾಂ) – ಈಶಾನ್ಯ ರಾಜ್ಯಗಳಲ್ಲಿ ೧೦ನೇ ತರಗತಿಯಲ್ಲಿ ‘ಹಿಂದಿ’ಯನ್ನು ಕಡ್ಡಾಯಗೊಳಿಸುವ ಕೇಂದ್ರ ಸರಕಾರದ ನಿರ್ಧಾರವನ್ನು ಆಸ್ಸಾಂ ಸಾಹಿತ್ಯ ಸಭೆ ಸೇರಿದಂತೆ ಈಶಾನ್ಯದ ಹಲವಾರು ಸಂಘಟನೆಗಳು ವಿರೋಧಿಸಿವೆ. ಕೂಡಲೇ ಈ ನಿರ್ಧಾರ ಹಿಂಪಡೆಯಬೇಕು ಎಂದು ಅಗ್ರಹಿಸಿದರು. ಆಸ್ಸಾಂನ ವಿರೋಧ ಪಕ್ಷಗಳು ಈ ಕ್ರಮವು ‘ಸಾಂಸ್ಕ್ರತಿಕ ಸಾಮ್ರಾಜ್ಯಶಾಹಿಯತ್ತ ಸಾಗಲು ಇಟ್ಟ ಒಂದು ಹೆಜ್ಜೆಯಾಗಿದೆ’ ಎಂದು ಹೇಳಿದ್ದಾರೆ.

ಕಾಂಗ್ರೆಸ ಮತ್ತು ಆಸ್ಸಾಂ ಜಾತಿಯ ಪರಿಷತಸಹ ಅನ್ಯ ವಿರೋಧಿ ಪಕ್ಷಗಳು ‘ಈ ನಿರ್ಣಯವನ್ನು ಸಾರ್ವಜನಿಕ ಹಿತಾಸಕ್ತಿ ವಿರುದ್ಧವಾಗಿರುವ ನಿರ್ಧಾರವನ್ನು ಹಿಂಪಡೆಯಬೇಕು’, ಎಂದು ಒತ್ತಾಯಿಸಿವೆ.