ನಿಮಗೆ ಭಾರತ ಜಾತ್ಯತೀತವಾಗಿರಬೇಕು, ಎಂದು ಅನಿಸುವುದಿಲ್ಲವೇ ? – ಸರ್ವೊಚ್ಚ ನ್ಯಾಯಾಲಯ

  • ಸಂವಿಧಾನದ ಪ್ರಸ್ತಾವನೆಯಿಂದ ‘ಸಮಾಜವಾದ’ ಮತ್ತು ‘ಜಾತ್ಯತೀತ’ ಪದಗಳನ್ನು ತೆಗೆಯುವಂತೆ ಅರ್ಜಿ ದಾಖಲು

  • ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿದಾರರಿಗೆ ಪ್ರಶ್ನೆ !

ನವ ದೆಹಲಿ – ಭಾರತ ‘ಜಾತ್ಯತೀತ’ ಇರಬೇಕು, ಹೇಗೆ ನಿಮಗೆ ಏಕೆ ಅನಿಸುತ್ತಿಲ್ಲ ? ಎಂದು ಸರ್ವೋಚ್ಚ ನ್ಯಾಯಾಲಯವು ನ್ಯಾಯವಾದಿ ವಿಷ್ಣು ಶಂಕರ್ ಜೈನ ಇವರಿಗೆ ಪ್ರಶ್ನಿಸಿತು. ಸಂವಿಧಾನದ ಪ್ರಸ್ತಾವನೆಯಿಂದ ‘ಸಮಾಜವಾದ’ ಮತ್ತು ‘ಜಾತ್ಯತೀತತೆ’ ಈ ಪದಗಳನ್ನು ತೆಗೆದುಹಾಕುವಂತೆ ದಾಖಲಿಸಿದ್ದ ಅರ್ಜಿಯ ಕುರಿತು ಅಕ್ಟೋಬರ್ ೨೧ ರಂದು ಸರ್ವೋಚ್ಚ ನ್ಯಾಯಾಲಯದಲ್ಲಿ ನಡೆದಿರುವ ವಿಚಾರಣೆಯ ಸಮಯದಲ್ಲಿ ನ್ಯಾಯಾಲಯವು ಮೇಲಿನ ಪ್ರಶ್ನೆ ಕೇಳಿತು. ಭಾಜಪದ ಹಿರಿಯ ನಾಯಕ ಡಾ. ಸುಬ್ರಹ್ಮಣ್ಯಂ ಸ್ವಾಮಿ, ಭಾಜಪದ ನಾಯಕ ನ್ಯಾಯವಾದಿ ಶ್ರೀ. ಅಶ್ವಿನಿ ಉಪಾಧ್ಯಾಯ ಮತ್ತು ನ್ಯಾಯವಾದಿ ವಿಷ್ಣು ಶಂಕರ ಜೈನ್ ಇವರು ಈ ಅರ್ಜಿ ಸಲ್ಲಿಸಿದ್ದರು. ಇದರ ಕುರಿತು ಈಗ ಮುಂದಿನ ವಿಚಾರಣೆ ನವಂಬರ್ ೧೮ ರಂದು ನಡೆಯಲಿದೆ.

೧. ವಿಚಾರಣೆಯ ಸಮಯದಲ್ಲಿ ನ್ಯಾಯವಾದಿ ಜೈನ ಇವರು ಯುಕ್ತಿವಾದ ಮಾಡುವಾಗ, ಇಂದಿರಾ ಗಾಂಧಿ ಸರಕಾರದ ಕಾಲದಲ್ಲಿ ೧೯೭೬ ರಲ್ಲಿ ೪೨ ನೇ ಸಲ ತಿದ್ದುಪಡಿಯ ಮೂಲಕ ‘ಸಮಾಜವಾದ’ ಮತ್ತು ‘ಜಾತ್ಯತೀತತೆ’ ಈ ಪದಗಳನ್ನು ಸಂವಿಧಾನದಲ್ಲಿ ಸೇರಿಸಿದರು. ಈ ಬದಲಾವಣೆಯ ಕುರಿತು ಸಂಸತ್ತಿನಲ್ಲಿ ಎಂದಿಗೂ ಚರ್ಚೆ ನಡೆಯಲಿಲ್ಲ. ಈ ಕಾರಣದಿಂದ ಅದನ್ನು ಸಂವಿಧಾನದ ಪ್ರಸ್ತಾವನೆಯಿಂದ ತೆಗೆದು ಹಾಕಬೇಕು ಎಂದು ಒತ್ತಾಯಿಸಿದರು.

೨. ಅದರ ಬಗ್ಗೆ ಸರ್ವೋಚ್ಚ ನ್ಯಾಯಾಲಯವು, ಈ ನ್ಯಾಯಾಲಯವು ಅನೇಕ ತೀರ್ಪಿನಲ್ಲಿ ‘ಜಾತ್ಯತೀತ’ವನ್ನು ಯಾವಾಗಲೂ ಸಂವಿಧಾನದ ಮೂಲಭೂತ ರಚನೆಯ ಭಾಗವಾಗಿರುವುದಾಗಿ ಅಭಿಪ್ರಾಯ ಮಂಡಿಸಿದೆ. ಸಂವಿಧಾನದಲ್ಲಿ ‘ಸಮಾನತೆ’ ಮತ್ತು ‘ಸಹೋದರತ್ವ’ ಈ ಪದಗಳು ಉಪಯೋಗಿಸಿದರೆ ಅದು ಜಾತ್ಯತೀತತೆಯ ಸ್ಪಷ್ಟ ಸಂಕೇತವಾಗಿದೆ. ಆದ್ದರಿಂದ ಈ ಶಬ್ದಗಳನ್ನು ಸಂವಿಧಾನದಲ್ಲಿ ಸೇರಿಸುವುದು ಅಗತ್ಯವಿದೆ ಎಂದು ಹೇಳಿತು.

೩. ಡಾ. ಸುಬ್ರಹ್ಮಣ್ಯಮ್ ಸ್ವಾಮಿ ಇವರು, ‘ಸಂವಿಧಾನದ ಪ್ರಸ್ತಾವನೆ ನವಂಬರ್ ೨೬, ೧೯೪೯ ರಂದು ಘೋಷಿತವಾಗಿತ್ತು. ಆದ್ದರಿಂದ ನಂತರ ತಿದ್ದುಪಡಿಯ ಮೂಲಕ ಅದರಲ್ಲಿ ಇನ್ನಷ್ಟು ಪದಗಳನ್ನು ಜೋಡಿಸುವುದು ಇದು ಆನಿಯಂತ್ರಿತವಾಗುತ್ತದೆ. ಈಗಿನ ಪ್ರಸ್ತಾವನೆಯ ಪ್ರಕಾರ ನವೆಂಬರ್ ೨೬, ೧೯೪೯ ರಂದು ಭಾರತೀಯ ಜನರು ಭಾರತಕ್ಕೆ ಸಮಾಜವಾದಿ ಮತ್ತು ಜಾತ್ಯತೀತ ಪ್ರಜಾಪ್ರಭುತ್ವಗೊಳಿಸಲು ಒಪ್ಪಿಕೊಂಡಿತ್ತು’, ಎಂದು ಪ್ರತಿಪಾದನೆ ಮಾಡುವುದು ತಪ್ಪಾಗಿದೆ ಎಂದು ಹೇಳಿದರು. ಈ ಬಗ್ಗೆ ನ್ಯಾಯಾಲಯವು ಈ ಪ್ರಕರಣದ ವಿಚಾರಣೆ ಮಾಡುವುದಾಗಿ ತಿಳಿಸಿದೆ.

ಪಶ್ಚಿಮಾತ್ಯ ದೇಶಗಳು ಹೇಳಿರುವ ಅರ್ಥ ಸ್ವೀಕರಿಸುವುದು ಯೋಗ್ಯವಲ್ಲ ! – ಸರ್ವೋಚ್ಚ ನ್ಯಾಯಾಲಯ

ನ್ಯಾಯಾಲಯವು, ಡಾ. ಭೀಮರಾವ ಅಂಬೇಡ್ಕರ ಇವರು, ‘ಸಮಾಜವಾದಿ’ ಪದ ಸೇರಿಸಿದರೆ ವ್ಯಕ್ತಿ ಸ್ವಾತಂತ್ರ್ಯದ ಮೇಲೆ ಅಂಕುಶ ಇರುವುದು. ಪ್ರಸ್ತಾವನೆಯಲ್ಲಿ ತಿದ್ದುಪಡಿ ಮಾಡಿ ಬದಲಾವಣೆ ಮಾಡಲಾಗದು.’ ಸಮಾಜವಾದದ ಬೇರೆ ಬೇರೆ ಅರ್ಥಗಳಿವೆ. ಪಶ್ಚಿಮಾತ್ಯ ದೇಶಗಳು ಸ್ವೀಕರಿಸಿರುವ ಅರ್ಥ ತೆಗೆದುಕೊಳ್ಳಬಾರದು. ಎಲ್ಲರಿಗೂ ಸಮಾನ ಅವಕಾಶ ಇರಬೇಕು ಮತ್ತು ದೇಶದ ಸಂಪತ್ತಿಯಲ್ಲಿ ಸಮಾನ ವಿತರಣೆ ಮಾಡಬೇಕು, ಎಂದೂ ಸಹ ಸಮಾಜವಾದದ ಅರ್ಥ ತಿಳಿಯಬಹುದು ಎಂದು ಹೇಳಿದೆ.

ಸಂಪಾದಕೀಯ ನಿಲುವು

ಭಾರತದಲ್ಲಿ ‘ಜಾತ್ಯತೀತ’ ಎಂದರೆ ಏನು ? ಇದರ ಸ್ಪಷ್ಟವಾದ ವ್ಯಾಖ್ಯಾನ ಇಲ್ಲದಿರುವುದರಿಂದ ಹಿಂದುಗಳ ಮೇಲೆ ದಬ್ಬಾಳಿಕೆ ಮತ್ತು ಮುಸಲ್ಮಾನರನ್ನು ಒಲೈಸುವುದು ಎಂದರೆ ‘ಜಾತ್ಯಾತೀತತೆ’ ರಾಜಕೀಯ ಪಕ್ಷಗಳು ತಮ್ಮ ಅನುಕೂಲದ ಅರ್ಥ ಹೇಳಿ ಅದನ್ನು ದೇಶದಲ್ಲಿ ದೃಢಪಡಿಸಲಾಗಿದೆ. ಇದರಿಂದ ಕಳೆದ ೭೮ ವರ್ಷಗಳಿಂದ ಹಿಂದುಗಳ ಮೇಲೆ ಅನ್ಯಾಯ ಮತ್ತು ದೌರ್ಜನ್ಯ ಆಗುತ್ತಿದೆ ಈ ಪರಿಸ್ಥಿತಿ ಬದಲಾಯಿಸುವುದಕ್ಕಾಗಿ ಇದರ ಕುರಿತು ನಿರ್ಣಯ ತೆಗೆದುಕೊಳ್ಳುವುದು ಆವಶ್ಯಕವಾಗಿದೆ, ಎಂದು ಹಿಂದುಗಳಿಗೆ ಅನಿಸುತ್ತಿದೆ !