ನಮ್ಮ ದೇಶದಲ್ಲಿ ‘ಸೆಕ್ಯುಲರ್ ಭಾರತ ಈ ಸಂಕಲ್ಪನೆಯು ರಾಷ್ಟ್ರದ ಎಲ್ಲ ಸಮಸ್ಯೆಗಳಿಗೆ ಪರಿಹಾರವಾಗಿದೆ’ ಎಂದು ತಿಳಿಯಲಾಗುತ್ತಿದೆ. ಪಾಶ್ಚಾತ್ಯ ದೇಶಗಳಲ್ಲಿ ಈ ಸಂಕಲ್ಪನೆಯನ್ನು ರಾಜ, ಆಡಳಿತ ಮತ್ತು ಜನರನ್ನು ಚರ್ಚ್ ಮತ್ತು ಅವುಗಳಿಂದ ಅಧಿಕಾರ ಪಡೆದ ಧರ್ಮಮಾರ್ತಂಡರ ಕಪಿಮುಷ್ಟಿಯಿಂದ ಮುಕ್ತಗೊಳಿಸಲು ಮಂಡಿಸಲಾಗಿದೆ; ಆದರೆ ಈ ಸಂಕಲ್ಪನೆಯು ಸರ್ವೋತ್ತಮವಾಗಿದೆ ಎಂದು ಎಲ್ಲಿಯೂ ಸಿದ್ಧವಾಗಿಲ್ಲ. ಕಮ್ಯುನಿಸ್ಟ್ ದೇಶಗಳಲ್ಲಿನ ‘ಸೆಕ್ಯುಲರಿಸಂ’ವು ಜನಹಿತಕಾರಿಯಾಗಲಿಲ್ಲ. ಲೆನಿನ್, ಸ್ಟಾಲಿನ್ ಮತ್ತು ಮಾವೋ ಇವರು ತಮ್ಮ ಆಡಳಿತಾವಧಿಯಲ್ಲಿ ನಡೆಸಿದ ಜನಸಾಮಾನ್ಯರ ಹತ್ಯಾಕಾಂಡಗಳನ್ನು ಮರೆಯುವಂತಿಲ್ಲ. ಅಲ್ಲಿನ ಕಮ್ಯುನಿಸ್ಟರ ‘ಸೆಕ್ಯುಲರ್‌ವಾದವು’ ವಿಫಲವಾಗಿರುವಾಗ ಹಿಂದೂ ಬಹುಸಂಖ್ಯಾತ ಭಾರತದಲ್ಲಿ ಮಾತ್ರ ಸೆಕ್ಯುಲರ್‌ವಾದವೇ ಸರ್ವೋಚ್ಚ ವಿಚಾರವಾಗಿದೆ, ಎಂದು ತಥಾಕಥಿತ ‘ಸೆಕ್ಯುಲರ್‌ವಾದಿ’ಗಳು ಹೇಳುತ್ತಿದ್ದಾರೆ. ಅದಕ್ಕಾಗಿ ಭಾರತದಲ್ಲಿ ಹಿಂದೂ ಧರ್ಮದ ತತ್ತ್ವಗಳನ್ನು ಹಿಂಸಾತ್ಮಕ ಹಾಗೂ ಅಸಹಿಷ್ಣು ಎಂದು ಬಿಂಬಿಸುವ ಕಾರ್ಯವು ರಭಸದಿಂದ ನಡೆಯುತ್ತಿದೆ. |
೧. ಯುರೋಪ್-ಅಮೇರಿಕಾ ಈ ‘ಸೆಕ್ಯುಲರ್’ ದೇಶಗಳು ಧರ್ಮಕ್ಕೆ ಅಧಿಕೃತ ಮನ್ನಣೆಯನ್ನು ಕೊಟ್ಟಿವೆ; ಆದರೆ ‘ಸೆಕ್ಯುಲರ್’ ಭಾರತದಲ್ಲಿ ಹಿಂದೂ ಧರ್ಮಕ್ಕೆ ಅಧಿಕೃತ ಮನ್ನಣೆ ಇಲ್ಲ, ಇದು ಪಕ್ಷಪಾತವೇ !
ಯುರೋಪಿಯನ್ ದೇಶಗಳಲ್ಲಿ ಸೆಕ್ಯುಲರ್ ಸಂಕಲ್ಪನೆಯೆಂದರೆ ‘ರಾಜ್ಯವನ್ನು ನಡೆಸುವಾಗ ಯಾವುದೇ ಪಂಥ-ಪರಂಪರೆಗಳಿಗೆ ಪ್ರಾಧಾನ್ಯತೆಯನ್ನು ನೀಡದೆ ಎಲ್ಲದಕ್ಕೂ ಸಮಾನ ಸ್ಥಾನಮಾನವನ್ನು ನೀಡಿ ರಾಜ್ಯವ್ಯವಸ್ಥೆಯನ್ನು ನಡೆಸುವುದು’, ಹೀಗಿದ್ದರೂ ಅಲ್ಲಿನ ಅನೇಕ ದೇಶಗಳಲ್ಲಿ ಧರ್ಮಕ್ಕೆ ಸಂಬಂಧಿಸಿದ ಕಾನೂನುಗಳನ್ನು ಮಾಡುವ ಅಧಿಕಾರ ಅಲ್ಲಿನ ಸಂಸತ್ತಿಗಿಲ್ಲ. ಧರ್ಮಕ್ಕೆ ಸಂಬಂಧಿಸಿದ ಕಾನೂನುಗಳನ್ನು ಅಲ್ಲಿನ ಚರ್ಚ್ ಮತ್ತು ಧರ್ಮಗುರುಗಳೇ ಮಾಡುತ್ತಾರೆ. ಅಲ್ಲಿನ ಸಂಸತ್ತು ಕೇವಲ ಅವುಗಳಿಗೆ ಮನ್ನಣೆಯನ್ನು ನೀಡುತ್ತದೆ. ಅದೇ ರೀತಿ ಯುರೋಪಿನ ಹೆಚ್ಚಿನ ‘ಸೆಕ್ಯುಲರ್’ ದೇಶಗಳಲ್ಲಿ ಕ್ರೈಸ್ತ ಪಂಥಕ್ಕೆ ಅಲ್ಲಿನ ರಾಜ್ಯವ್ಯವಸ್ಥೆಯು ಅಧಿಕೃತ ಧರ್ಮದ ಮನ್ನಣೆಯನ್ನು ನೀಡುತ್ತದೆ. ೨೭ ಇಸ್ಲಾಮ್ ದೇಶಗಳಲ್ಲಿ ಇಸ್ಲಾಮ್ ಧರ್ಮವನ್ನೇ ಅಧಿಕೃತ ರಾಜಧರ್ಮವೆಂದು ಪರಿಗಣಿಸಲಾಗಿದೆ. ಇಸ್ರೇಲ್‌ನಂತಹ ಒಂದು ಚಿಕ್ಕ ರಾಷ್ಟ್ರವೂ ಕೂಡ ‘ಯಹೂದಿ’ ಪಂಥಕ್ಕೆ ೨೦೧೮ ರಲ್ಲಿ ಅಧಿಕೃತ ರಾಜಧರ್ಮದ ಮನ್ನಣೆಯನ್ನು ನೀಡಿ ಅದು ‘ಯಹೂದಿ ರಾಷ್ಟ್ರ’ ಎಂದು ಘೋಷಣೆಯನ್ನು ಮಾಡಿದೆ. ಅಮೇರಿಕಾದ ‘ದಕ್ಷಿಣ ಕೆರೋಲಿನಾ’ ರಾಜ್ಯವು ರಾಜ್ಯದ ಅಧಿಕೃತ ಪಂಥವೆಂದು ‘ಪ್ರೊಟೆಸ್ಟೆಂಟ್ ಪಂಥ’ಕ್ಕೆ ಮನ್ನಣೆ ನೀಡಿದೆ. ಇಂಗ್ಲೆಂಡಿನ ರಾಜನನ್ನು ಆಂಗ್ಲಿಕನ್ ಪ್ರೊಟೆಸ್ಟೆಂಟ್ ಚರ್ಚ್‌ನ ಪ್ರಮುಖನೆಂದು ತಿಳಿಯಲಾಗುತ್ತದೆ. ಇಲ್ಲಿ ಕೆಥೊಲಿಕ್ ವ್ಯಕ್ತಿ ರಾಜನಾಗಲು ಸಾಧ್ಯವಿಲ್ಲ. ಇವುಗಳಲ್ಲಿನ ಬಹಳಷ್ಟು ರಾಷ್ಟ್ರಗಳು ಭಾರತಕ್ಕಿಂತಲೂ ಪ್ರಗತಿ ಹೊಂದಿದ ರಾಷ್ಟ್ರಗಳಾಗಿವೆ; ಆದರೆ ‘ಭಾರತದಲ್ಲಿ ಹಿಂದೂ ರಾಷ್ಟ್ರ ಬರುವುದಿದೆ’, ಎಂದು ಹೇಳಿದರೆ ದೇಶದ ಮೇಲೆ ದೊಡ್ಡ ಸಂಕಟ ಬರಲಿದೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ.
೨. ಸೆಕ್ಯುಲರ್ ಇಂಗ್ಲೆಂಡಿನಲ್ಲಿ ಧರ್ಮದ ಬಗೆಗಿನ ಕಾನೂನುಗಳನ್ನು ಮಾಡುವ ಅಧಿಕಾರ ಕೇವಲ ಪ್ರೊಟೆಸ್ಟೆಂಟ್ ಧರ್ಮಗುರುಗಳಿಗೆ ಮಾತ್ರ ಇದೆ; ಹೀಗಿದ್ದಾಗ ಭಾರತದಲ್ಲಿ ಸನಾತನ ಧರ್ಮದ ಬಗ್ಗೆ ಅಜ್ಞಾನವಿರುವ ‘ಸೆಕ್ಯುಲರ್‌ವಾದಿ ಜನಪ್ರತಿನಿಧಿಗಳು’ ಧರ್ಮಕ್ಕೆ ಸಂಬಂಧಿಸಿದ ಕಾನೂನುಗಳನ್ನು ಹೇಗೆ ಮಾಡುತ್ತಾರೆ ?
ಭಾರತದ ಸಂವಿಧಾನ ವ್ಯವಸ್ಥೆಯು ‘ಬ್ರಿಟೀಷ ಪಾರ್ಲಿಮೆಂಟ್’ ನಂತಿದೆ ಎಂದು ಸೆಕ್ಯುಲರ್‌ವಾದಿಗಳು ನಂಬುತ್ತಾರೆ. ಸಂಪೂರ್ಣ ಇಂಗ್ಲೆಂಡ್‌ನಲ್ಲಿ ಆಂಗ್ಲಿಕನ್ ಪ್ರೊಟೆಸ್ಟೆಂಟ್ ಪಂಥದ ೪೪ ಜನ ಆರ್ಚ್-ಬಿಶಪ್‌ರಿದ್ದಾರೆ. ಅಲ್ಲಿನ ಚರ್ಚ್‌ಗಳು ಅವರಲ್ಲಿನ ೨೬ ಜನರನ್ನು ‘ಹೌಸ್ ಆಫ್ ಲಾರ್ಡ್ಸ್’ ಈ ‘ಬ್ರಿಟೀಷ ಪಾರ್ಲಿಮೆಂಟ್’ ಮೇಲ್ಮನೆಗೆ ಕಳುಹಿಸುತ್ತಾರೆ. ಈ ಬಿಶಪ್‌ರಿಗೆ ಇಂಗ್ಲೆಂಡಿನ ಚರ್ಚ್, ಧರ್ಮ ಇತ್ಯಾದಿಗಳಿಗೆ ಸಂಬಂಧಿಸಿದ ಎಲ್ಲ ಕಾನೂನುಗಳನ್ನು ಮಾಡುವ ಅಧಿಕಾರವಿದೆ. ಈ ಬಿಶಪ್ ಸಭೆಗಳಲ್ಲಿ ಸಮ್ಮತಿಸಿದ ಕಾನೂನುಗಳನ್ನು ‘ಬ್ರಿಟೀಷ ಪಾರ್ಲಿಮೆಂಟ್ನಲ್ಲಿ’ ಕೇವಲ ಓದಿ ಹೇಳಲಾಗುತ್ತದೆ ಹಾಗೂ ‘ಅವುಗಳನ್ನು ಒಪ್ಪಲಾಗಿದೆ’ ಎಂದು ತಿಳಿಯಲಾಗುತ್ತದೆ. ಧರ್ಮಕ್ಕೆ ಸಂಬಂಧಿಸಿದ ಕಾನೂನುಗಳ ಬಗ್ಗೆ ಬ್ರಿಟೀಷ ಪಾರ್ಲಿಮೆಂಟ್ನಲ್ಲಿ ಯಾವುದೇ ಚರ್ಚೆಯನ್ನು ಮಾಡಲಾಗುವುದಿಲ್ಲ. ಇಂಗ್ಲೆಂಡಿನ ಸೆಕ್ಯುಲರ್ ಪ್ರಜಾಪ್ರಭುತ್ವದಲ್ಲಿ ಧರ್ಮದ ಬಗೆಗಿನ ಕಾನೂನುಗಳನ್ನು ಮಾಡಲು ಧರ್ಮದ ಜ್ಞಾನವಿರುವುದು ಆವಶ್ಯಕವಾಗಿರುತ್ತದೆ. ಭಾರತದ ಪ್ರಜಾಪ್ರಭುತ್ವದಲ್ಲಿ ಮಾತ್ರ ಸನಾತನ ಧರ್ಮದ ಬಗ್ಗೆ ಅಜ್ಞಾನಿಗಳಾಗಿರುವ ಸೆಕ್ಯುಲರ್‌ವಾದಿ ಜನಪ್ರತಿನಿಧಿಗಳು ತಮ್ಮನ್ನು ಎಲ್ಲ ವಿಷಯಗಳ ಅಧಿಕಾರಿಗಳೆಂದು ತಿಳಿದು ಹಿಂದೂ ಧರ್ಮ, ಸಂಪತ್ತು, ಪರಿವಾರ, ದೇವಸ್ಥಾನಗಳು ಇತ್ಯಾದಿಗಳ ಬಗ್ಗೆ ಕಾನೂನುಗಳನ್ನು ಮಾಡುತ್ತಾರೆ !
೩. ಅಮೇರಿಕಾದ ಸೆಕ್ಯುಲರ್ ವ್ಯವಸ್ಥೆಯಲ್ಲಿ ದೇವರ ಮೇಲೆ ವಿಶ್ವಾಸವಿರುವುದು ಆವಶ್ಯಕ; ಆದರೆ ಭಾರತದಲ್ಲಿ ಸೆಕ್ಯುಲರ್ ವ್ಯವಸ್ಥೆಯಲ್ಲಿ ದೇವರನ್ನು ಸ್ಮರಿಸುವುದೆಂದರೆ ಮತಾಂಧತೆ !
ಲೋಕಮಾನ್ಯ ತಿಲಕರ ಜೀವನವನ್ನು ಅಧ್ಯಯನ ಮಾಡಿ ‘ದಿ ಲೆಗಸಿ ಆಫ್ ದಿ ಲೋಕಮಾನ್ಯ’ ಹೆಸರಿನ ಗ್ರಂಥವನ್ನು ಬರೆದಿರುವ ‘ಥಿಯೋಡೋರ್ ಶೆ’ ಎಂಬ ವಿದ್ವಾಂಸರು ಇಡೀ ಭಾರತದ ಪ್ರಯಾಣ ಮಾಡಿ ಗ್ರಂಥದಲ್ಲಿ ಹೀಗೆ ಬರೆದಿದ್ದಾರೆ, ‘ಸ್ವರಾಜ್ಯ ಸಿಕ್ಕಿದ ನಂತರ ಇಲ್ಲಿನ ಜನರಿಗೆ ತಮ್ಮ ಪರಂಪರೆಗಳನ್ನು ಪುನರ್ನಿರ್ಮಾಣ ಮಾಡುವ ಅವಕಾಶ ಸಿಕ್ಕಿತ್ತು; ಆದರೆ ಅವರು ಸಂವಿಧಾನದಲ್ಲಿ ‘ಈಶ್ವರ’ ಮತ್ತು ‘ಧರ್ಮ’ ಇವೆರಡು ತತ್ತ್ವಗಳಿಗೆ ಸ್ಥಾನ ನೀಡದಿರುವುದರಿಂದ ಈ ದೇಶದ ಪ್ರಗತಿಯ ಮಾರ್ಗ ತಪ್ಪಿಹೋಗಿದೆ. ತದ್ವಿರುದ್ಧ ಅಮೇರಿಕಾದ ರಾಜ್ಯವ್ಯವಸ್ಥೆಯು ಹೆಜ್ಜೆಹೆಜ್ಜೆಗೂ ಈಶ್ವರನನ್ನು ಸ್ಮರಿಸುತ್ತದೆ. ಅಮೇರಿಕಾದ ಚಲನಿನ ಮೇಲೆ ‘ಇನ್ ಗಾಡ್ ವಿ ಟ್ರಸ್ಟ್’ ಎಂದು ಬರೆಯಲಾಗಿದೆ. ಅಮೇರಿಕಾದ ಶಾಲೆಗಳಲ್ಲಿ ತೆಗೆದುಕೊಳ್ಳಲಾದ ಪ್ರಮಾಣವಚನಗಳಲ್ಲಿ ‘ವನ್ ನೇಶನ್ ಅಂಡರ್ ಗಾಡ್’ ಸಂವಿಧಾನದ ಒಂದು ಸುಧಾರಣೆಯ ಮೂಲಕ ಸೇರಿಸಲಾಗಿದೆ. ಅಮೇರಿಕಾದ ಸಂವಿಧಾನದ ಪ್ರಸ್ತಾವನೆಯಲ್ಲಿ, ‘ಸಂವಿಧಾನ ಮತ್ತು ಸರಕಾರವನ್ನು ಗಾಡ್ ನಮಗೆ ನೀಡಿದ್ದಾನೆ ಮತ್ತು ಅವನೇ ನಮಗೆ ಸ್ವಾತಂತ್ರ್ಯವನ್ನು ನೀಡಿದ್ದಾನೆ’ ಎಂದು ಸ್ಪಷ್ಟವಾಗಿ ಬರೆಯಲಾಗಿದೆ. ಅಮೇರಿಕಾದ ರಾಷ್ಟ್ರದ ಜೀವನದಲ್ಲಿ ಈಶ್ವರ ಇರುವುದರಿಂದ ಅದು ಪ್ರಗತಿಪೂರ್ಣ ರಾಷ್ಟ್ರವಾಗಿದೆ. ತದ್ವಿರುದ್ಧ ಭಾರತದಲ್ಲಿ ರಾಜಕಾರಣಿಗಳ ಅಭಿಪ್ರಾಯದಂತೆ ದೇವರನ್ನು ಸ್ಮರಿಸುವುದೆಂದರೆ, ಮತಾಂಧತೆಯಾಗಿದೆ.
(ಆಧಾರ – ಸನಾತನದ ಗ್ರಂಥ ಹಿಂದೂ ರಾಷ್ಟ್ರ : ಆಕ್ಷೇಪ ಮತ್ತು ಖಂಡನೆ)