ನ್ಯಾಯಾಲಯದ ಕಾರ್ಯಕ್ರಮಗಳಲ್ಲಿ ಪೂಜೆ ಮಾಡುವ ಬದಲು ಸಂವಿಧಾನದ ಮುಂದೆ ತಲೆಬಾಗಿ ! – ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಅಭಯ ಎಸ್. ಓಕ್

  • ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಅಭಯ ಎಸ್. ಓಕ್ ಇವರ ಹೇಳಿಕೆ

  • ಸಂವಿಧಾನದ 75 ವರ್ಷಗಳು ಪೂರ್ಣಗೊಂಡಿವೆ ಮತ್ತು ಜಾತ್ಯತೀತ ಮುನ್ನಡೆಸಲು ಅತ್ಯುತ್ತಮ ಅವಕಾಶವಾಗಿದೆ ಹೇಳಿಕೆ !

ನವ ದೆಹಲಿ – ಭಾರತ ಸಂವಿಧಾನವನ್ನು ಅಂಗೀಕರಿಸಿ 75 ವರ್ಷಗಳು ಕಳೆದಿವೆ. ಈ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಅಭಯ ಎಸ್. ಓಕ್ ಇವರು ನ್ಯಾಯಾಲಯದ ಆಗುವ ಕಾರ್ಯಕ್ರಮಗಳಲ್ಲಿ ಪೂಜೆಯಂತಹ ಧಾರ್ಮಿಕ ಆಚರಣೆಗಳನ್ನು ನಿಷೇಧಿಸುವಂತೆ ಕರೆ ನೀಡಿದ್ದಾರೆ. ಅವರು, ಅದರ ಬದಲು ಸಂವಿಧಾನದಲ್ಲಿ ಜಾತ್ಯಾತೀತತೆ ಪ್ರೋತ್ಸಾಹಿಸಲು ಸಂವಿಧಾನದ ಪೀಠಿಕೆಯ ಪುಟಗಳಿಗೆ ತಲೆಬಾಗಬೇಕು ಎಂದು ಅವರು ಹೇಳಿದರು. ಸಂವಿಧಾನವು 75 ವರ್ಷಗಳನ್ನು ಪೂರೈಸುತ್ತಿದೆ ಮತ್ತು ಜಾತ್ಯತೀತತೆಯನ್ನು ಮುಂದಕ್ಕೆ ಕೊಂಡೊಯ್ಯಲು ನಮಗೆ ಉತ್ತಮ ಅವಕಾಶವಿದೆ ಎಂದು ನ್ಯಾಯಮೂರ್ತಿ ಹೇಳಿದರು.

ನನಗೆ ಸಂವಿಧಾನದ ಪೀಠಿಕೆಯಲ್ಲಿನ ‘ಜಾತ್ಯತೀತ’ ಮತ್ತು ‘ಪ್ರಜಾಪ್ರಭುತ್ವ’ ಪದಗಳು ಬಹಳ ಮುಖ್ಯವಾಗಿದೆ. ಇತ್ತೀಚೆಗೆ ಮಹಾರಾಷ್ಟ್ರದ ಪುಣೆಯ ಪಿಂಪರಿ-ಚಿಂಚವಡ್‌ನಲ್ಲಿ ನೂತನ ನ್ಯಾಯಾಲಯದ ಕಟ್ಟಡದ ಶಂಕುಸ್ಥಾಪನೆ ಸಮಾರಂಭದಲ್ಲಿ ನ್ಯಾಯಮೂರ್ತಿ ಓಕ್ ಮಾತನಾಡುತ್ತಿದ್ದರು.

ಸಂಪಾದಕೀಯ ನಿಲುವು

ಭಾರತದ ಸಂವಿಧಾನವು ಜಾತ್ಯತೀತವಾಗಿದ್ದರೂ ಸಂವಿಧಾನದ ಮೊದಲ ಪುಟದಲ್ಲಿ ಭಗವಾನ್ ಶ್ರೀರಾಮನ ಚಿತ್ರವಿದೆ. ಅವನನ್ನೂ ಗೌರವಿಸಬೇಕು ಎಂದು ಬಹುಪಾಲು ಭಾರತೀಯರಿಗೆ ಅನಿಸುತ್ತದೆ !